Connect with us

Latest

ಸಚಿನ್ ಪುತ್ರಿ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದಿದ್ದ ಟೆಕ್ಕಿ ಅರೆಸ್ಟ್

Published

on

ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡ್ಯೂಲ್ಕರ್ ಅವರ ಪುತ್ರಿ ಸಾರಾ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತರೆದಿದ್ದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಿತಿನ್ ಆತ್ಮರಾಮ್ ಸೈಸೋದ್ (39) ಸಾರಾ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದ ಟೆಕ್ಕಿ. ನಿತಿನ್ ಹಣ ಮಾಡುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಖಾತೆಯನ್ನು ಹ್ಯಾಕ್ ಮಾಡುತ್ತಿದ್ದನು. ಅಷ್ಟೇ ಅಲ್ಲದೇ ಅವರ ಹೆಸರಿನಲ್ಲಿ ಫೇಕ್ ಖಾತೆಯನ್ನು ಕೂಡ ತೆರೆಯುತ್ತಿದ್ದನು. ಈ ಹಿಂದೆ ಐವರು ಸೆಲೆಬ್ರಿಟಿಗಳ ನಕಲಿ ಖಾತೆಯನ್ನು ಕೂಡ ತೆರೆದಿದ್ದ ಎನ್ನುವ ಆರೋಪ ಕೇಳಿಬಂದಿದೆ.

ಕಳೆದ ವರ್ಷ ಅಕ್ಟೋಬರ್ 2ನೇ ವಾರದಲ್ಲಿ — @SaraSachin_rt — ಖಾತೆಯಿಂದ ಎನ್‍ಸಿಪಿ ಮುಖಂಡ ಶರಾದ್ ಪವಾರ್ ಹಾಗೂ ಬೇರೆ ರಾಜಕಾರಣಿಗಳ ವಿರುದ್ಧ ಟ್ವೀಟ್ ಪ್ರಕಟವಾಗಿತ್ತು. ಈ ಸಂದರ್ಭದಲ್ಲಿ ಸಚಿನ್ ನನ್ನ ಇಬ್ಬರು ಮಕ್ಕಳು ಟ್ವಿಟ್ಟರ್ ಉಪಯೋಗಿಸುತ್ತಿಲ್ಲ ಎಂದು ತಿಳಿಸಿದ್ದರು.

ನಂತರ ಸಚಿನ್ ಅವರು ತಮ್ಮ ಸಹಾಯಕರ ಮೂಲಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಪಿ ವಿಳಾಸ ಬೇರೆ ದೇಶದಲ್ಲಿ ಕಂಡುಬಂದಿದ್ದು, ಇ-ಮೇಲ್ ಅಕೌಂಟ್‍ಯಿಂದ ನಿತಿನ್‍ನನ್ನು ಪತ್ತೆ ಹಚ್ಚಿದ್ದರು. ಆ ಖಾತೆ ಫೇಕ್ ಟ್ವೀಟ್ಟರ್ ಖಾತೆಗೆ ಲಿಂಕ್ ಆಗಿತ್ತು.

ನಿತಿನ್ ಬಳಿಸಿದ ಇಂರ್ಟನೆಟ್ ಸರ್ವಿಸ್ ಟ್ಯ್ರಾಕ್ ಮಾಡಿದ್ದಾಗ ಆತ ಅಂಧೇರಿಯಲ್ಲಿರುವುದು ತಿಳಿದು ಆತನನ್ನು ಬಂಧಿಸಿದ್ದರು. ಪೊಲೀಸರು ನಿತಿನ್ ಲ್ಯಾಪ್‍ಟಾಪ್ ನನ್ನು ವಶಕ್ಕೆ ಪಡೆದಿದ್ದು, ತನಿಖೆಯನ್ನು ದಾರಿತಪ್ಪಿಸುವ ಸಲುವಾಗಿ ತನ್ನ ಸಾಫ್ಟ್ ವೇರ್ ಸರ್ವರ್ ಗಳನ್ನು ಬದಲಿಸುತ್ತಿದ್ದ ಎಂದು ಶಂಕಿಸಿದ್ದಾರೆ.

ನಿತಿನ್‍ನ ವಕೀಲರಾದ ಅಜಯ್ ಉಮಾಪತಿ ದುಬೇ ಪ್ರತಿಕ್ರಿಯಿಸಿ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನನ್ನ ಕಕ್ಷಿದಾರ ವಿರುದ್ಧ ರಾಜಕೀಯದ ಒತ್ತಡ ಹೇರಲಾಗುತ್ತಿದೆ. ನಿತಿನ್ ಹಳೆಯ ಕಂಪ್ಯೂಟರ್ ಗಳನ್ನು ಖರೀದಿಸಿ, ಮತ್ತೇ ಅದನ್ನು ಮಾರುತ್ತಿದ್ದನು. ಹೀಗಾಗಿ ಬೇರೆಯವರು ಬಳಸಿ ಟ್ವೀಟ್ ಮಾಡುತ್ತಿದ್ದರೆ ನಿತಿನ್ ಅಪರಾಧಿಯಾಗುವುದಿಲ್ಲ. ನಿತಿನ್ ಈ ಪ್ರಕರಣದಲ್ಲಿ ಅಮಾಯಕ ಎಂದು ಕುಟುಂಬದವರು ಹೇಳಿದ್ದಾರೆ. ಶೀಘ್ರವೇ ಜಾಮೀನು ಪಡೆದು ಬಿಡುಗಡೆ ಮಾಡಲು ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.

ನಿತಿನ್ ಮೇಲೆ ಐಪಿಸಿ ಸೆಕ್ಷನ್ 419, 420, 500, 66ಸಿ ಹಾಗೂ 66ಡಿ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಫೆಬ್ರವರಿ 9ರ ವರೆಗೂ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ. ಇದನ್ನೂ ಓದಿ: ಸಾರಾಳನ್ನು ಮದ್ವೆ ಆಗ್ತೀನಿ – ತೆಂಡೂಲ್ಕರ್ ಪುತ್ರಿಗೆ ಬ್ಲಾಕ್ ಮೇಲ್ ಎಸಗಿದಾತ ಅರೆಸ್ಟ್!