Friday, 20th September 2019

Recent News

ವಿಶ್ವಕಪ್ ಫೈನಲ್ ಪಂದ್ಯದವರೆಗೂ ಇಂಗ್ಲೆಂಡ್‍ನಲ್ಲೇ ಉಳಿಯಲಿದೆ ಟೀಂ ಇಂಡಿಯಾ

ಲಂಡನ್: ಸೆಮಿಫೈನಲ್ ಸೋತು ಹಲವು ವಿಮರ್ಶೆಗಳನ್ನು ಎದುರಿಸುತ್ತಿರುವ ಟೀಂ ಇಂಡಿಯಾ ಸದ್ಯ ವಿಶ್ವಕಪ್ ಫೈನಲ್ ಪಂದ್ಯದವರೆಗೂ ಇಂಗ್ಲೆಂಡ್‍ನಲ್ಲಿ ಉಳಿಯಲಿದೆ.

ಹೌದು, ಬಿಸಿಸಿಐ ಸಮಿತಿ ಟೀಂ ಇಂಡಿಯಾ ಆಟಗಾರರು, ಸಿಬ್ಬಂದಿಗೆ ಟಿಕೆಟ್ ಕಾಯ್ದಿರಿಸಲು ವಿಫಲವಾದ ಹಿನ್ನೆಲೆಯಲ್ಲಿ ಆಟಗಾರರು ಇಂಗ್ಲೆಂಡ್‍ನಲ್ಲೇ ಉಳಿಯಲಿದ್ದಾರೆ. ಈಗಾಗಲೇ ಕೆಲ ಆಟಗಾರರು ಮ್ಯಾಂಚೆಸ್ಟರ್ ನಿಂದ ಲಂಡನ್‍ಗೆ ಬಂದಿದ್ದು, ಇನ್ನು ಕೆಲ ಆಟಗಾರರು ಮ್ಯಾಂಚೆಸ್ಟರ್ ನಲ್ಲೇ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರದಂದು ಎಲ್ಲ ಆಟಗಾರರು ಲಂಡನ್‍ಗೆ ತಲುಪಲಿದ್ದು, ಆ ಬಳಿಕ ಒಟ್ಟಾಗಿ ತವರಿಗೆ ಮರಳಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇತ್ತ ಟೀಂ ಇಂಡಿಯಾ ಖಚಿತವಾಗಿ ವಿಶ್ವಕಪ್ ಫೈನಲ್ ಪ್ರವೇಶಿಸಲಿದೆ ಎಂಬ ನಂಬಿಕೆ ಹೊಂದಿದ್ದ ಅಭಿಮಾನಿಗಳು ಟಿಕೆಟ್ ಖರೀದಿ ಮಾಡಿದ್ದರು. ಆದರೆ ಸೆಮಿಫೈನಲ್‍ನಲ್ಲೇ ತಂಡ ಹೊರ ನಡೆದ ಪರಿಣಾಮ ಈಗ ಅಭಿಮಾನಿಗಳು ಟಿಕೆಟ್ ರೀ ಸೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮಾಧ್ಯಮ ವರದಿಯೊಂದರ ಅನ್ವಯ ಫೈನಲ್ ಪಂದ್ಯದ ಶೇ.80 ಟಿಕೆಟ್‍ಗಳನ್ನು ಟೀಂ ಇಂಡಿಯಾ ಅಭಿಮಾನಿಗಳೇ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಸದ್ಯ ಐಸಿಸಿ ಟಿಕೆಟ್ ರೀ ಸೇಲ್ ಮಾಡಲು ಇಷ್ಟಪಡುತ್ತಿಲ್ಲ ಎನ್ನಲಾಗಿದೆ. ವಿಶ್ವಕಪ್ ಟೂರ್ನಿಯ ಫೈನಲ್ ಭಾಗವಾಗಿ ನಡೆಯುವ ಪಂದ್ಯ ಭಾನುವಾರ ನಡೆಯಲಿದ್ದು, ಇಂಗ್ಲೆಂಡ್-ನ್ಯೂಜಿಲೆಂಡ್ ತಂಡಗಳು ಮುಖಾಮುಖಿ ಆಗುತ್ತಿದೆ. ಈ ಬಾರಿ ಇತ್ತಂಡಗಳಲ್ಲಿ ಯಾವುದೇ ತಂಡ ವಿಶ್ವಕಪ್ ಗೆದ್ದರೂ ಕೂಡ ಇತಿಹಾಸ ಸೃಷ್ಟಿಯಾಗಲಿದೆ. ಯಾವುದೇ ತಂಡ ಗೆದ್ದರೂ ಕೂಡ ಚೊಚ್ಚಲ ವಿಶ್ವಕಪ್ ಗೆದ್ದ ಸಾಧನೆ ಮಾಡಲಿದೆ.

Leave a Reply

Your email address will not be published. Required fields are marked *