Connect with us

Cricket

ಟೀಂ ಇಂಡಿಯಾ ನಾಯಕತ್ವ – ಮೂವರು ನಾಯಕರಲ್ಲಿದೆ ಒಂದೇ ಸಾಮ್ಯತೆ

Published

on

ನವದೆಹಲಿ: ಭಾರತದ ಕ್ರಿಕೆಟ್ ಇತಿಹಾಸ ಕಂಡ ಮೂವರ ಬೆಸ್ಟ್ ನಾಯಕಗಳಾದ ಸೌರವ್ ಗಂಗೂಲಿ, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಡುವೆ ಒಂದು ಸಾಮ್ಯತೆ ಇದ್ದು, ಅದು ಎಲ್ಲರನ್ನು ಬೆರಗಾಗುವಂತೆ ಮಾಡಿದೆ.

ಇಂಡಿಯಾದ ಕ್ರಿಕೆಟ್ ಇತಿಹಾಸವನ್ನು ನೋಡುವುದಾದರೆ ನಾಯಕರ ಪಟ್ಟಿಯಲ್ಲಿ ಸೌರವ್ ಗಂಗೂಲಿ, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿಯವರ ಹೆಸರು ಮೊದಲಿಗೆ ಕೇಳಿಬರುತ್ತದೆ. ಈ ಮೂವರಲ್ಲಿ ಆಶ್ಚರ್ಯಕರ ವಿಚಾರವೆನೆಂದರೆ, ಈ ಮೂವರು ನಾಯಕರಾಗುವ ಮೊದಲು ಏಕದಿನ ಪಂದ್ಯದಲ್ಲಿ 183 ರನ್ ಬಾರಿಸಿದ್ದಾರೆ. ಜೊತೆಗೆ ಈ ಮೂವರ ನಾಯಕರ ವೈಯಕ್ತಿಕ ಅತೀ ಹೆಚ್ಚು ರನ್ ಕೂಡ ಇದೇ ಆಗಿದೆ.

ಸೌರವ್ ಗಂಗೂಲಿ: 2000ರಲ್ಲಿ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ಸೌರವ್ ಗಂಗೂಲಿಯವರು ಟೀಂ ಇಂಡಿಯಾವನ್ನು ಕಟ್ಟಿ ಬೆಳೆಸಿದರು. ಇವರ ಕಾಲದಲ್ಲಿ ಇಂಡಿಯಾ ಇಂಗ್ಲೆಂಡಿನಲ್ಲಿ ಸರಣಿ ಜಯಿಸಿ ಬಂದಿತ್ತು. ಗಂಗೂಲಿಯವರು 1999ರ ವಿಶ್ವಕಪ್‍ನಲ್ಲಿ ಶ್ರೀಲಂಕಾದ ವಿರುದ್ಧ 183 ರನ್ ಸಿಡಿಸಿದ್ದರು. ಇದಾದ ಒಂದೇ ವರ್ಷದ ನಂತರ 2000ರಲ್ಲಿ ಸಚಿನ್ ನಾಯಕತ್ವವನ್ನು ಬೇಡ ಎಂದಾಗ ಕ್ಯಾಪ್ಟನ್ ಪಟ್ಟವನ್ನು ಸೌರವ್ ಗಂಗೂಲಿಯವರಿಗೆ ನೀಡಲಾಗಿತ್ತು.

ಎಂಎಸ್ ಧೋನಿ: ಧೋನಿಯವರು ಕ್ರಿಕೆಟ್ ಜಗತ್ತು ಕಂಡ ಚಾಣಕ್ಷ ನಾಯಕ, ತಮ್ಮ ನಾಯಕತ್ವದಲ್ಲಿ ಭಾರತ ತಂಡಕ್ಕಾಗಿ ಮೂರು ಐಸಿಸಿ ಟ್ರೋಫಿ ಗೆದ್ದುಕೊಟ್ಟ ಮೊದಲ ನಾಯಕ. ಇವರು ಕೂಡ 2005ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 145 ಬಾಲಿಗೆ 183 ರನ್ ಸಿಡಿಸಿದ್ದರು. 183 ರನ್ ಧೋನಿಯವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಇದಾದ ಬಳಿಕ 2008ರಲ್ಲಿ ಸೌರವ್ ಗಂಗೂಲಿ ನಂತರ ಧೋನಿಯವರನ್ನು ಭಾರತದ ಏಕದಿನ ತಂಡಕ್ಕೆ ನಾಯಕನಾಗಿ ನೇಮಿಸಲಾಗಿತ್ತು.

ವಿರಾಟ್ ಕೊಹ್ಲಿ: ಭಾರತದ ತಂಡದ ಪ್ರಸ್ತುತ ನಾಯಕ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಮೂಲಕ ಹಲವಾರು ದಾಖಲೆಗಳನ್ನು ಮಾಡಿದ್ದಾರೆ. ಕೊಹ್ಲಿಯವರೂ ಕೂಡ ಪಾಕಿಸ್ತಾನದ ಮೇಲೆ 183 ರನ್ ಸಿಡಿಸಿದ್ದರು. 2012ರಲ್ಲಿ ನಡೆದ ಏಷಿಯಾ ಕಪ್‍ನಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 148 ಬಾಲಿಗೆ 183 ರನ್ ಸಿಡಿಸಿ ಮಿಂಚಿದ್ದರು. ಇದಾದ ನಂತರ ಕೊಹ್ಲಿ ಕೂಡ 2014ರಲ್ಲಿ ಧೋನಿ ನಂತರ ಕ್ಯಾಪ್ಟನ್ ಆಗಿದ್ದರು. ಪ್ರಸ್ತುತ ಟೀಂ ಇಂಡಿಯಾ ಕೊಹ್ಲಿ ನೇತೃತ್ವದಲ್ಲೇ ಮುಂದುವರಿಯುತ್ತಿದೆ.

Click to comment

Leave a Reply

Your email address will not be published. Required fields are marked *