Connect with us

Bengaluru City

ಕೊರೊನಾ ವಾರಿಯರ್ಸ್‍ಗೆ ದುಬಾರಿ ಶೂ ಕೊಡಿಸಿ ಮಾನವೀಯತೆ ಮೆರೆದ ‘ಮಿಸ್ಟರ್ 360’

Published

on

ಬೆಂಗಳೂರು: ಕೋವಿಡ್-19 ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮುಂಚೂಣಿಯಲ್ಲಿದ್ದಾರೆ. ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‍ಗೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಧನ್ಯವಾದ ತಿಳಿಸಿ, ಉಡುಗೊರೆ ನೀಡಿದ್ದಾರೆ.

ಕೆ.ಎಲ್ ರಾಹುಲ್ ಅವರು ಬೆಂಗಳೂರಿನಲ್ಲಿ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಪೂಮಾ ಶೂಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಜೊತೆಗೆ ಕೊರೊನಾ ವಾರಿಯರ್ಸ್ ನಿಸ್ವಾರ್ಥ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಟೆಸ್ಟ್‌ಗೆ ವಿರಾಟ್, ಏಕದಿನಕ್ಕೆ ಕೆ.ಎಲ್.ರಾಹುಲ್ ನಾಯಕತ್ವ

ಈ ಕುರಿತು ಟ್ವೀಟ್ ಮಾಡಿರುವ ಕೆ.ಎಲ್.ರಾಹುಲ್, ಕೊರೊನಾ ವಿರುದ್ಧ ಹಗಲಿರುಳು ದುಡಿಯುತ್ತಿರುವಿರಿ. ಹೆಮ್ಮಾರಿ ಕೊರೊನಾವನ್ನು ನಮ್ಮ ದೇಶದಿಂದ ಹೋಗಲಾಡಿಸಲು ಎಲ್ಲ ಅಪಾಯವನ್ನು ಮೆಟ್ಟಿನಿಂತು ದುಡಿಯುತ್ತಿರುವ ನಿಮಗೆ ಧನ್ಯವಾದಗಳು. ನಿಮ್ಮ ಹೋರಾಟಕ್ಕೆ ನನ್ನದೊಂದು ಪುಟ್ಟ ಕೊಡುಗೆ, ಸಣ್ಣ ಕೃತಜ್ಞತೆ. ಹೋರಾಟವನ್ನು ಮುಂದುವರಿಸಿ. ಧನ್ಯವಾದಗಳು,’ ಎಂದು ರಾಹುಲ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ‘ಕೆ.ಎಲ್.ರಾಹುಲ್ ಟೀಂ ಇಂಡಿಯಾದ ಮುಂದಿನ ನಾಯಕ’

ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್‌ಗೆ ಏನಾದರೂ ನೀಡಬೇಕು ಎಂದು ನನಗೆ ಅನಿಸಿತ್ತು. ಹಾಗಾಗಿ ಅವರಿಗೆ ಪೂಮಾ ಶೂಗಳನ್ನು ನೀಡಲು ಬಯಸಿದ್ದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಕಾರ್ಯದಲ್ಲಿ ತೊಡಗಿಕೊಳ್ಳಲು ಪ್ರಯತ್ನಿಸುವುದು ಮುಖ್ಯವಾಗಿದೆ. ಕೊರೊನಾ ವಿರುದ್ಧದ ಹೋರಾಟವು ಸಾಮೂಹಿಕವಾಗಿದೆ’ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಕನ್ನಡಿಗ ಕೆಎಲ್ ರಾಹುಲ್ ತಮ್ಮ ಬ್ಯಾಟ್, ಹೆಲ್ಮೇಟ್, ಗ್ಲೌಸ್, ಪ್ಯಾಡ್ ಸೇರಿದಂತೆ ಕಿಟ್ ಅನ್ನು ಹರಾಜಿಗೆ ನೀಡಿದ್ದರು. ಈ ಹರಾಜು ಪ್ರಕ್ರಿಯೆಯಲ್ಲಿ ಅವರ ಬ್ಯಾಟ್ 2.64 ಲಕ್ಷ ರೂ.ಗೆ ಮಾರಾಟವಾಗಿತ್ತು. ಕ್ರಿಕೆಟ್ ಕಿಟ್‍ಗಳಿಂದ ಕೆ.ಎಲ್.ರಾಹುಲ್ ಒಟ್ಟು 8 ಲಕ್ಷ ರೂ.ಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಣವನ್ನು ಅವೇರ್ ಫೌಂಡೇಷನ್ ಮೂಲಕ ಬಡ ಮಕ್ಕಳ ಕಲ್ಯಾಣಕ್ಕಾಗಿ ಬಳಸಲು ನೀಡಿ ಮಾನವೀಯತೆ ಮೆರೆದಿದ್ದರು.