Tuesday, 25th June 2019

ವಿದ್ಯಾರ್ಥಿನಿಯರ ಎದುರೇ ಶಾಲಾ ಮುಖ್ಯೋಪಾಧ್ಯಾಯಿನಿ ಮೇಲೆ ಹಿಂದಿ ಶಿಕ್ಷಕನಿಂದ ಹಲ್ಲೆ

ಮಂಗಳೂರು: ವಿದ್ಯಾರ್ಥಿನಿಯರ ಎದುರೇ ಹಿಂದಿ ಶಿಕ್ಷಕನೊಬ್ಬ ಶಾಲಾ ಮುಖ್ಯೋಪಾಧ್ಯಾಯಿನಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ.

ಸುಳ್ಯದ ಖಾಸಗಿ ಶಿಕ್ಷಣ ಸಂಸ್ಥೆಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಘಟನೆ ನಡೆದಿದೆ. ತರಗತಿ ನಡೆಯುತ್ತಿದ್ದಾಗಲೇ ಕ್ಲಾಸಿಗೆ ಬಂದ ಮುಖ್ಯೋಪಾಧ್ಯಾಯಿನಿಗೆ ಹೊಡೆಯಲು ಮುಂದಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಹಿಂದಿ ಶಿಕ್ಷಕ ರವೀಂದ್ರ ಮುಖ್ಯೋಪಾಧ್ಯಾಯಿನಿ ಪ್ರೇಮಲತಾ ಎದುರು ತಗಾದೆ ತೆಗೆದಿದ್ದಾರೆ ಎನ್ನಲಾಗುತ್ತಿದ್ದು, ಮಾತಿಗೆ ಮಾತು ಬೆಳೆದಿದೆ.

ಈ ಸಂಧರ್ಭದಲ್ಲಿ ಶಿಕ್ಷಕಿ ಮೇಲೆ ಹಲ್ಲೆಗೈಯುವುದಕ್ಕಾಗಿ ದೂಡಿಕೊಂಡು ಹೋಗಿದ್ದಾರೆ. ತರಗತಿ ಕೊಠಡಿಯಲ್ಲಿಯೇ ಶಿಕ್ಷಕರು ಜಗಳ ಮಾಡಿಕೊಂಡಿದ್ದು ವಿದ್ಯಾರ್ಥಿನಿಯರನ್ನು ಬೆಚ್ಚಿ ಬೀಳಿಸಿದೆ. ಜಗಳ ತಡೆಯಲು ಬಂದ ಇತರ ಶಿಕ್ಷಕರಿಗೂ ಶಿಕ್ಷಕ ರವೀಂದ್ರ ಹಲ್ಲೆಗೆ ಮುಂದಾಗಿದ್ದಾರೆ. ಶಾಲಾ ಕೊಠಡಿಯಲ್ಲಿ ನಡೆದಿರೋ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.

ಸದ್ಯ ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *