Districts

ಮದಲೂರು ಕೆರೆಗೆ ನೀರು ಬಿಡಲ್ಲ ಎನ್ನಲು ಮಾಧುಸ್ವಾಮಿಗೆ ನೈತಿಕತೆ ಇಲ್ಲ: ಟಿ.ಬಿ.ಜಯಚಂದ್ರ

Published

on

Share this

ತುಮಕೂರು: ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಮದಲೂರು ಕೆರೆಗೆ ನೀರು ಬಿಡಲು ಅಡ್ಡಿಯಾಗುತ್ತಿದ್ದಾರೆ ಎಂದು ಮಾಜಿ ಕಾನೂನು ಸಚಿವ ಟಿ.ಬಿ ಜಯಚಂದ್ರ ಆರೋಪಿಸಿದ್ದಾರೆ.

ತುಮಕೂರು ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದಲೂರು ಕೆರೆಗೆ ನೀರು ಬಿಡಲು ಮಾಧುಸ್ವಾಮಿ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಮದಲೂರು ಕೆರೆಗೆ ನೀರು ಬಿಡಲು ಸರ್ಕಾರದ ಆದೇಶವಿದೆ. ಆದರೂ ಮಾಧುಸ್ವಾಮಿ ಅಡ್ಡಿಯಾಗುತ್ತಿದ್ದಾರೆ. ಮಾಧುಸ್ವಾಮಿ ನೀರಾವರಿ ಹೋರಾಟಗಾರರಲ್ಲ. ನಾವು ನೀರಿಗಾಗಿ ಹೋರಾಟ ಮಾಡುವಾಗ ಮಾಧುಸ್ವಾಮಿಯ ಅಡ್ರೆಸ್ ಇರಲಿಲ್ಲ. ಆದರೆ ಇವತ್ತು ದೊಡ್ಡ, ದೊಡ್ಡ ಮಾತುಗಳನ್ನಾಡುತ್ತಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳು ಒತ್ತಾಯಪೂರ್ವಕವಾಗಿ ಶಾಲೆಗೆ ಬರಬೇಕೆಂದಿಲ್ಲ: ಬಿ.ಸಿ.ನಾಗೇಶ್

ಮಾಧುಸ್ವಾಮಿಗಿಂತ ಮೊದಲು ನಾನು ಲಾಯರ್ ಆಗಿದ್ದವನು, ಮಾಧುಸ್ವಾಮಿಗಿಂತ ಕಾನೂನು ಅನುಭವ ನನಗಿದೆ. ಮಾಧುಸ್ವಾಮಿ ಬಹಳ ಬುದ್ದಿವಂತರು ಎಂದು ಕೇಳ್ಪಟ್ಟಿದ್ದೇನೆ. ಆದರೆ ಮದಲೂರು ಕೆರೆಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳುವ ಮೊದಲು ಸ್ವಲ್ಪ ಪ್ರಜ್ಞೆಯಿಂದ ಮಾತನಾಡಲಿ ಎಂದಿದ್ದಾರೆ.

ಬಿಜೆಪಿ ಸಂಸದ ಜಿ.ಎಸ್ ಬಸವರಾಜು, ನಾನು, ಬಸವರಾಜ್ ಬೊಮ್ಮಾಯಿ ನೀರಾವರಿ ಯೋಜನೆ ಬಗ್ಗೆ ಚಿಂತನೆ ನಡೆಸಿದ್ದೇವೆ. ಮಾಧುಸ್ವಾಮಿ ಹೋರಾಟ ಮಾಡಿದವರಲ್ಲ. ಹಾಗಾಗಿ ಅವರಿಗೆ ನೀರು ಬಿಡಲ್ಲ ಎನ್ನುವ ನೈತಿಕತೆಯಿಲ್ಲ ಎಂದು ಟಿ.ಬಿ.ಜಯಚಂದ್ರ ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಕೆಜಿಎಫ್ ಬಿಡುಗಡೆಗೆ ದಿನಾಂಕ ನಿಗದಿ – ಏಪ್ರಿಲ್‍ನಲ್ಲಿ ರಾಖಿಬಾಯ್ ಆರ್ಭಟ

Click to comment

Leave a Reply

Your email address will not be published. Required fields are marked *

Advertisement
Advertisement