Connect with us

Cricket

ನಿವೃತ್ತಿ ಘೋಷಿಸಿದ 2008ರ ಅಂಡರ್-19 ವಿಶ್ವಕಪ್ ಹೀರೋ

Published

on

– ಕೊಹ್ಲಿ ನಾಯಕತ್ವದ ತಂಡದಲ್ಲಿ ಮಿಂಚಿದ್ದ ಆಟಗಾರ

ನವದೆಹಲಿ: 2008ರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಟಾಪ್ ರನ್ ಗಳಿಸಿದ್ದ ಆಟಗಾರ ಎಂಬ ದಾಖಲೆ ಬರೆದಿದ್ದ ತನ್ಮಯ್ ಶ್ರೀವಾಸ್ತವ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ಇಂದು ನಿವೃತ್ತಿ ಘೋಷಣೆ ಮಾಡಿದ್ದಾರೆ.

30 ವರ್ಷದ ತನ್ಮಯ್ ಶ್ರೀವಾಸ್ತವ ಎಡಗೈ ಆರಂಭ ಆಟಗಾರನಾಗಿದ್ದು, 2008ರಲ್ಲಿ ಮಲೇಷಿಯಾದಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ 262 ರನ್ ಸಿಡಿಸಿದ್ದರು. ಟೀಂ ಇಂಡಿಯಾ ಕಪ್ ಗೆದ್ದ ಪಂದ್ಯದಲ್ಲಿ ಶ್ರಿವಾಸ್ತವ 46 ರನ್ ಗಳಿಸಿದ್ದರು.

ಐಪಿಎಲ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಶ್ರೀವಾಸ್ತವ ಆಡಿದ್ದರು. ಉತ್ತರ ಪ್ರದೇಶದ ಪರ 2008-9ರ ಅವಧಿಯಲ್ಲಿ ಫಸ್ಟ್ ಕ್ಲಾಸ್ ಕ್ರಿಕೆಟ್‍ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಉತ್ತರ ಪ್ರದೇಶ ಕ್ರಿಕೆಟ್ ತಂಡದ ನಾಯಕರಾಗಿದ್ದ ಶ್ರೀವಾಸ್ತವ ಅವರ ಸ್ಥಾನದಲ್ಲಿ ಕಳೆದ ವರ್ಷ ಉನ್ಮುಖ್ ಚಂದ್ ಅವರನ್ನು ಆಯ್ಕೆ ಮಾಡಲಾಗಿತ್ತು.

90 ಫಸ್ಟ್ ಕ್ಲಾಸ್ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಶ್ರೀವಾಸ್ತವ ಅವರು 34.39ರ ಸರಾಸರಿಯಲ್ಲಿ 4,918 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕ, 27 ಅರ್ಧ ಶತಕಗಳು ಸೇರಿದೆ. ಲಿಸ್ಟ್ ಎ ಕ್ರಿಕೆಟ್‍ನಲ್ಲಿ 44.30 ಸರಾಸರಿಯಲ್ಲಿ 44 ಪಂದ್ಯಗಳಲ್ಲಿ 1,728 ರನ್ ಗಳಿಸಿದ್ದಾರೆ. ಇದರಲ್ಲಿ 10 ಅರ್ಧ ಶತಕಗಳು ಸೇರಿದೆ.

ತಮ್ಮ ನಿವೃತ್ತಿಯ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ತನ್ಮಯ್ ಶ್ರೀವಾಸ್ತವ ಅವರು, ನನ್ನ ಕ್ರಿಕೆಟ್ ವೃತ್ತಿ ಜೀವನದ ಅಂತ್ಯಕ್ಕೆ ಇದು ಸಮಯ. ನಾನು ಇಲ್ಲಿ ಹಲವು ನೆನಪು ಹಾಗೂ ಸ್ನೇಹಿತರನ್ನು ಪಡೆದುಕೊಂಡಿದ್ದೇನೆ. ಜೂನಿಯರ್ ಕ್ರಿಕೆಟ್, ರಣಜಿ ಟ್ರೋಫಿ ಆಡಿದ್ದೇನೆ. ಮುಖ್ಯವಾಗಿ 2008ರ ಅಂಡರ್-19 ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ನೀಡಿ, ತಂಡದೊಂದಿಗೆ ಕಪ್ ತಂದಿದ್ದೇನೆ ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in