ಹೆದ್ದಾರಿಯಲ್ಲಿ ಮಹಿಳೆಯ ಟ್ರಕ್ ಸವಾರಿ – ಲೇಡಿ ಡ್ರೈವರ್‌ಗೆ ಸಲಾಂ ಅಂದ ನೆಟ್ಟಿಗರು

Advertisements

ಚೆನ್ನೈ: ‘ಉದ್ಯೋಗಂ ಪುರುಷ ಲಕ್ಷಣಂ’ ಅನ್ನುವ ಹಳೆಯ ಗಾದೆ ಮಾತು ಈಗ ಅಕ್ಷರಶಃ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಪುರುಷರಿಗೆ ಮಹಿಳೆಯರು ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎಂಬುವುದು ಪದೇ, ಪದೇ ಸಾಬೀತಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಿಳೆಯೊಬ್ಬರು ಹೈವೆಯಲ್ಲಿ ಟ್ರಕ್ ಚಲಾಯಿಸುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿ ನೆಟ್ಟಿಗರು ಮಹಿಳೆಯ ಆತ್ಮವಿಶ್ವಾಸಕ್ಕೆ ಸೆಲ್ಯೂಟ್ ಎನ್ನುತ್ತಿದ್ದಾರೆ.

Advertisements

ಸಾಮಾನ್ಯವಾಗಿ ಮಹಿಳೆಯರು ದ್ವಿಚಕ್ರ ವಾಹನ, ಕಾರು ಹಾಗೂ ಆಟೋವನ್ನು ಚಲಾಯಿಸುವುದನ್ನು ನೀವು ನೋಡಿರಬಹುದು. ಆದರೆ ಟ್ರಕ್ ಚಲಾಯಿಸುವುದನ್ನು ನೋಡಿದ್ದೀರಾ? ಹೌದು ತಮಿಳುನಾಡಿನ ಮಹಿಳೆಯೊಬ್ಬರು ಟ್ರಕ್ ಚಲಾಯಿಸುವ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಇದನ್ನೂ ಓದಿ: ದ್ರೌಪದಿ ಮುರ್ಮು, ಸಿನ್ಹಾ ಇಬ್ಬರಿಗೂ ವೋಟು ಹಾಕಲ್ಲ: ರಾಷ್ಟ್ರಪತಿ ಚುನಾವಣೆ ಬಹಿಷ್ಕರಿಸಿದ ಅಕಾಲಿ ದಳ ಶಾಸಕ

Advertisements

ಐಪಿಎಸ್ ಅಧಿಕಾರಿ ಅವನೀಶ್ ಶರಣ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಹಿಳೆಯೊಬ್ಬರು ಹೆದ್ದಾರಿಯಲ್ಲಿ ನಂಬರ್ ಪ್ಲೇಟ್ ಇರುವ ಟ್ರಕ್ ಅನ್ನು ವೇಗವಾಗಿ ಚಲಿಸುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೋ ಆರಂಭದಲ್ಲಿ ದೂರದಲ್ಲಿದ್ದ ಟ್ರಕ್ ಹತ್ತಿರ ಬರುತ್ತಿದ್ದಂತೆಯೇ ಮಹಿಳೆ ಟ್ರಕ್ ಅನ್ನು ಅತೀ ಸುಲಭವಾಗಿ ಚಲಾಯಿಸುತ್ತಿರುವುದನ್ನು ಕಾಣುಬಹುದಾಗಿದೆ. ವೀಡಿಯೋ ಸೆರೆ ಹಿಡಿಯುತ್ತಿರುವುದನ್ನು ನೋಡಿದ ಮಹಿಳೆ ನಗುತ್ತಾ, ವೇಗವಾಗಿ ಮುಂದಕ್ಕೆ ಗಾಡಿಯನ್ನು ಚಲಾಯಿಸಿಕೊಂಡು ಹೋಗುವುದನ್ನು ನೋಡಬಹುದಾಗಿದೆ.

Advertisements

ಈ ವೀಡಿಯೋ ಜೊತೆಗೆ ಟ್ರಕ್ ಚಲಾಯಿಸುವ ಡ್ರೈವರ್ ‘ಪುರುಷ’ ಅಥವಾ ಮಹಿಳೆ ಯಾರದರೇನು ಹೆದರುವುದಿಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು ಇಲ್ಲಿಯವರೆಗೂ ಸುಮಾರು 22 ಸಾವಿರ ಮಂದಿ ವೀಕ್ಷಿಸಿದ್ದು, ಹಲವಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಸಾಕಷ್ಟು ಮಂದಿ ಮಹಿಳೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಕೆಯ ಸ್ಟೈಲ್, ಆತ್ಮವಿಶ್ವಾಸಕ್ಕೆ ಸೆಲ್ಯೂಟ್ ಎಂದಿದ್ದಾರೆ. ಇದೊಂದು ಮಹಿಳಾ ಸಬಲೀಕರಣಕ್ಕೆ ಉದಾಹರಣೆಯಾಗಿದೆ ಎಂದು ಹೇಳುತ್ತಿದ್ದಾರೆ.

Live Tv

Advertisements
Exit mobile version