Sunday, 25th August 2019

Recent News

ಅಣ್ಣಾವ್ರ ಅಭಿಮಾನಿ, ಕಾವೇರಿ ನನ್ನ ತಾಯಿ ಅಂದಿದ್ದ ಕನ್ನಡ ನಟನನ್ನು ಹೊರದಬ್ಬಿದ ತಮಿಳು ಚಿತ್ರರಂಗ

ಬೆಂಗಳೂರು: ಅಣ್ಣಾವ್ರ ಅಭಿಮಾನಿ ಹಾಗೂ ಕಾವೇರಿ ನನ್ನ ತಾಯಿ ಎಂದಿದ್ದ ಕನ್ನಡ ನಟನನ್ನು ತಮಿಳು ಚಿತ್ರರಂಗ ಹೊರದಬ್ಬಿದೆ.

ಕನ್ನಡ ನಟ ಯೋಗಿ ತಮಿಳಿನ ‘ಪಾರ್ತಿಬನ್ ಕಾದಲ್’ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಈ ಚಿತ್ರದ ಮೋಷನ್ ಪೋಸ್ಟರ್ ಕೂಡ ಚೆನ್ನೈಯಲೇ ಬಿಡುಗಡೆಯಾಗಿತ್ತು. ಆದೆ ಕಾರ್ಯಕ್ರಮ ಮುಗಿದ ಮೇಲೆ ತಮಿಳು ಪತ್ರಕರ್ತರು ಸಿನಿಮಾ ತಂಡವನ್ನು ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಸಿನಿಮಾದ ಬಗ್ಗೆ ಪ್ರಶ್ನೆ ಮುಗಿದ ಬಳಿಕ ಕಾವೇರಿ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ.

ಈ ಪ್ರಶ್ನೆಗೆ ಸಾರ್ ನಮ್ಗೆ ನೀರಿಲ್ಲ ನಿಮಗೆ ಬೇಕು ಅಂದ್ರೆ ಹೇಗೆ, ಮಂಡ್ಯ ಅಂತಾ ಊರಿದೆ ಅಲ್ಲಿ ಎಷ್ಟು ಕಷ್ಟಪಡ್ತಾರೆ ಜನ ಅಂತಾ ನೀವೇ ನೋಡಿ ಅಂತಾ ಯೋಗಿ ಉತ್ತರಿಸಿದ್ದರು. ಅಷ್ಟಕ್ಕೆ ಮುಗಿಸದೇ ಪ್ರರ್ತಕರ್ತರು ನಿಮಗೆ ರಾಜ್‍ಕುಮಾರ್ ಇಷ್ಟನೋ ಅಥವಾ ರಜನಿಕಾಂತ್ ಅನ್ನೋ ಪ್ರಶ್ನೆ ಕೇಳಿದ್ದರು. ಇದಕ್ಕೆ ಯೋಗಿ ನನಗೆ ಅಣ್ಣಾವ್ರೇ ಇಷ್ಟ ಎಂದು ಉತ್ತರಿಸಿದ್ದಾರೆ.

ಯೋಗಿ ಅವರ ಈ ಮಾತುಗಳನ್ನು ಹಿಡಿದುಕೊಂಡು ಕನ್ನಡ ನಟನ ಅಭಿಪ್ರಾಯ ಬೇರೆ ಮಾಡಲು ಅಲ್ಲಿನ ಮಾಧ್ಯಮ ಪ್ರಯತ್ನಿಸಿತ್ತು. ಇದರ ಪರಿಣಾಮವಾಗಿ ಪಾರ್ತಿಬನ್ ಕಾದಲ್ ಸಿನಿಮಾದಿಂದ ಯೋಗಿ ಅವರನ್ನು ಗೇಟ್‍ಪಾಸ್ ನೀಡಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿ ಮಾತಾನಾಡಬಾರದಿತ್ತು ಎಂದು ನಿರ್ಮಾಪಕರು ಬುದ್ಧಿ ಮಾತು ಹೇಳಿ ಯೋಗಿಯನ್ನು ಹೊರದಬ್ಬಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ.

‘ಅಯೋಗ್ಯ’ ಚಿತ್ರದ ನೀನಾಸಂ ಸತೀಶ್ ಕೂಡ ಹೈದರಾಬಾದ್ ನಲ್ಲಿ ಸಿನಿಮಾ ಪ್ರದರ್ಶನಕ್ಕೆ ಆದ ಕಿರಿಕ್ ಬಗ್ಗೆ ವಿವರಿಸಿದ್ದಾರೆ. ತೆಲುಗಿನ ‘ಗೀತಾ ಗೋವಿಂದಂ’ ಚಿತ್ರವನ್ನು ಕನ್ನಡಿಗರು ಬ್ಲಾಕ್ ಬ್ಲಾಸ್ಟರ್ ಹಿಟ್ ಮಾಡಿದ್ದಾರೆ. ಕನ್ನಡಿಗರು ತಮಿಳು ಚಿತ್ರವನ್ನು ಗೆಲ್ಲಿಸುತ್ತಾರೆ. ಭಾಷೆಯ ಹಂಗಿಲ್ಲದೇ ಕಲೆಯನ್ನು ಗೌರವಿಸುತ್ತಾರೆ. ಆದರೆ ಕನ್ನಡಿಗರಿಗೆ ತಮಿಳು ಚಿತ್ರರಂಗ ಕೊಡುವ ಮರ್ಯಾದೆ ಇದೇನಾ ಎಬ ಪ್ರಶ್ನೆ ಎದುರಾಗಿದೆ. ಇಂತಹ ಘಟನೆ ನಡೆದರೂ ಪದೇ ಪದೇ ವಾಣಿಜ್ಯ ಮಂಡಳಿ ಮೌನವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *