Connect with us

Cricket

ಸುರೇಶ್ ರೈನಾ ಪ್ರಶ್ನೆಗೆ ಕಾಲಿವುಡ್ ಸ್ಟಾರ್ ಸೂರ್ಯ ಉತ್ತರ

Published

on

ಚೆನ್ನೈ: ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ. ಈ ಬಾರಿಯ ಟೂರ್ನಿ ಫೈನಲ್ ನಲ್ಲಿ ಚೆನ್ನೈ ಸೋತರೂ ಕೂಡ ಅಭಿಮಾನಿಗಳ ಬೆಂಬಲ ಮಾತ್ರ ಕಡಿಮೆ ಆಗಿಲ್ಲ. ಸದ್ಯ ಚೆನ್ನೈ ತಂಡದ ಆಟಗಾರರ ರೈನಾ ಅವರು ನಟ ಸೂರ್ಯ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದು, ಈ ಪ್ರಶ್ನೆಗೆ ಕಾಲಿವುಡ್ ಸ್ಟಾರ್ ಉತ್ತರಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಸೂರ್ಯ ಅವರ ಮುಂದಿನ ಸಿನಿಮಾ ‘ಎನ್‍ಜಿಕೆ’ ಪ್ರಚಾರದ ಕುರಿತು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಈ ವೇಳೆ ರೈನಾ, ಚೆನ್ನೈ ತಂಡ ನಿಮ್ಮ ನೆಚ್ಚಿನ ಆಟಗಾರ ಯಾರು? ಮತ್ತು ಏಕೆ? ಎಂದು ಪ್ರಶ್ನೆ ಮಾಡಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ನಟ ಸೂರ್ಯ, ಧೋನಿ ಹಾಗೂ ನೀವು ನಮ್ಮ ಆಟಗಾರರು. ಏಕೆಂದರೆ ನಿಮ್ಮ ಹಾಡುಗರಿಕಾ ಕೌಶಲ್ಯ ಹಾಗೂ ಧೋನಿ ಅವರ ಡ್ರಾಯಿಂಗ್ ಸ್ಕಿಲ್ ಕಾರಣ ಎಂದಿದ್ದಾರೆ.

ಟ್ವಿಟ್ಟರ್ ನಲ್ಲಿ ಅನಿರೀಕ್ಷತವಾಗಿ ರೈನಾ ಅವರ ಟ್ವೀಟ್ ಎದುರಾಗುತ್ತಿದಂತೆ ಸಂತಸ ವ್ಯಕ್ತಪಡಿಸಿದ ಸೂರ್ಯ, ರೈನಾ ಪುತ್ರಿ ಸೇರಿದಂತೆ ಇಡೀ ಕುಟುಂಬಕ್ಕೆ ಶುಭ ಕೋರಿದರು. ಈ ಹಿಂದೆ ಇಬ್ಬರು ಭೇಟಿ ಆಗಿ ಫೋಟೋ ತೆಗೆದುಕೊಂಡಿದ್ದ ಘಟನೆಯನ್ನ ನೆನಪಿಸಿಕೊಂಡು, ‘ನಾನು ಯಾವಾಗಲೂ ಸಿಎಸ್‍ಕೆ ಅಭಿಮಾನಿಯಾಗಿರುತ್ತೇನೆ’ ಎಂದಿದ್ದಾರೆ.