Wednesday, 21st August 2019

Recent News

2 years ago

2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?

ನವದೆಹಲಿ:2016-17ರ ಅವಧಿಯಲ್ಲಿ ದೇಶದಲ್ಲಿ ಮಾರುತಿ ಕಂಪೆನಿಯ ಕಾರುಗಳು ಅತಿ ಹೆಚ್ಚು ಮಾರಾಟವಾಗಿದೆ. ಅಷ್ಟೇ ಅಲ್ಲದೇ ಭಾರತದಲ್ಲಿ ಅತಿಹೆಚ್ಚು ಮಾರಾಟದವಾದ ಕಾರುಗಳ ಟಾಪ್ -10 ಪಟ್ಟಿಯಲ್ಲಿ ಮಾರುತಿ ಕಂಪೆನಿಯ 7 ಕಾರುಗಳು ಸ್ಥಾನ ಪಡೆದುಕೊಂಡಿದೆ. ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ(ಎಸ್‍ಐಎಎಂ) ತನ್ನ ವರದಿಯನ್ನು ಬಿಡುಗಡೆ ಮಾಡಿದೆ. 2015-16 ಅವಧಿಯಲ್ಲಿ ಮಾರಾಟವಾದ ಅತಿ ಹೆಚ್ಚು ಕಾರುಗಳ ಟಾಪ್ -10 ಪಟ್ಟಿಯಲ್ಲಿ ಮಾರುತಿಯ ಕಂಪೆನಿಯ 6 ಕಾರುಗಳು ಸ್ಥಾನ ಪಡೆದಿದ್ದರೆ ಈ ಬಾರಿ 7 ಕಾರುಗಳು ಸ್ಥಾನ ಪಡೆದುಕೊಂಡಿದೆ. 2016-17ರಲ್ಲಿ […]

2 years ago

ಭಾರತಕ್ಕೆ ಬಂದ 2 ತಿಂಗ್ಳಲ್ಲಿ 242 ಕೆಜಿ ತೂಕ ಇಳಿಸಿಕೊಂಡಿದ್ರೂ ಎಮಾನ್ ಇನ್ನೆಂದೂ ನಡೆಯಲು ಸಾಧ್ಯವಿಲ್ಲ

ಮುಂಬೈ: ಬರೋಬ್ಬರಿ 500 ಕೆಜಿ ತೂಕ ಹೊಂದಿದ್ದ, ಜಗತ್ತಿನ ದಢೂತಿ ಮಹಿಳೆ ಎನಿಸಿಕೊಂಡಿದ್ದ ಈಜಿಪ್ಟ್ ಮೂಲದ ಎಮಾನ್ ಅಹ್ಮದ್(36) ಭಾರತಕ್ಕೆ ಬಂದು ಎರಡೇ ತಿಂಗಳಲ್ಲಿ ಸುಮಾರು 242 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಮುಂಬೈನ ಸೈಫೀ ಆಸ್ಪತ್ರೆಯಲ್ಲಿ ಪ್ರಸಿದ್ಧ ಬಾರಿಯಾಟ್ರಿಕ್ ಸರ್ಜನ್ ಡಾ. ಮುಫಾಜಲ್ ಲಕ್ಡಾವಾಲಾ, ಎಮಾನ್ ಅವರಿಗೆ ಮಾರ್ಚ್ 7 ರಂದು ಶಸ್ತ್ರಚಿಕಿತ್ಸೆ ಮಾಡಿದ್ರು. ಎಮಾನ್‍ರ...

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ಈ ಫೋನಿನ ಬೆಲೆ 7 ಸಾವಿರ ರೂ. ದಿಢೀರ್ ಇಳಿಕೆ

2 years ago

ಮುಂಬೈ: ಬಿಡುಗಡೆಯಾದ 1 ತಿಂಗಳಿನಲ್ಲಿ ಎಚ್‍ಟಿಸಿ ಕಂಪೆನಿಯ ದುಬಾರಿ ಬೆಲೆಯ ಅಲ್ಟ್ರಾ ಯು ಫೋನಿನ ಬೆಲೆ 7 ಸಾವಿರ ರೂ. ಕಡಿಮೆಯಾಗಿದೆ. ಎಚ್‍ಟಿಸಿ ಯು ಆಲ್ಟ್ರಾ ಫೋನ್ ಈ ಹಿಂದೆ 59,990 ರೂ. ಬೆಲೆಯಲ್ಲಿ ಮಾರ್ಚ್‍ನಲ್ಲಿ ಬಿಡುಗಡೆಯಾಗಿತ್ತು. ಈಗ ಈ ಫೋನನ್ನು...

ಭಾರತದ ನಿವೃತ್ತ ನೌಕಾ ಸೇನೆಯ ಅಧಿಕಾರಿಗೆ ಪಾಕ್‍ನಲ್ಲಿ ಗಲ್ಲು ಶಿಕ್ಷೆ

2 years ago

ನವದೆಹಲಿ: ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ, ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ. ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‍ಪಿಆರ್) ತಿಳಿಸಿದೆ....

ಭಾರತದಲ್ಲಿ ಸ್ಯಾಮ್‍ಸಂಗ್ ಸೋಲಿಸಿ ಅಗ್ರಪಟ್ಟಕ್ಕೆ ಏರಿದ ಕ್ಸಿಯೋಮಿ: ಯಾವ ಕಂಪೆನಿಗೆ ಎಷ್ಟನೇ ಸ್ಥಾನ?

2 years ago

ಬೋಸ್ಟನ್: ಇದೆ ಮೊದಲ ಬಾರಿಗೆ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾದ ಕ್ಸಿಯೋಮಿ ಕಂಪೆನಿ ನಂಬರ್ ಒನ್ ಬ್ರಾಂಡ್ ಪಟ್ಟಕ್ಕೆ ಏರಿದೆ. ಗ್ರಾಹಕರು ಇಷ್ಟಪಡುವ ಸ್ಮಾರ್ಟ್ ಫೋನ್‍ ಬ್ರಾಂಡ್ ಕಂಪೆನಿಗಳ ಪಟ್ಟಿಯಲ್ಲಿ ಕ್ಸಿಯೋಮಿ ಸ್ಯಾಮ್‍ಸಂಗ್ ಕಂಪೆನಿಯನ್ನು ಸೋಲಿಸಿ ಮೊದಲ ಸ್ಥಾನವನ್ನುಗಳಿಸಿದೆ. ಅಮೆರಿಕದ...

ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

2 years ago

ನವದೆಹಲಿ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾದ ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್(ಇವಿಎಂ)ಗಳಲ್ಲಿ ಲೋಪವಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಹೊತ್ತಲ್ಲೇ ರಷ್ಯಾ ಭಾರತದ ಇವಿಎಂ ತಂತ್ರಜ್ಞಾನವನ್ನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಸಲು ಇಚ್ಛಿಸಿದೆ. 2018ರ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ರಷ್ಯಾ,...

ಮೋಹನ್ ಭಾಗವತ್‍ಗೆ ರಾಷ್ಟ್ರಪತಿ ಹುದ್ದೆ ನೀಡಿ ಎಂದು ಮೋದಿಗೆ ಪತ್ರ ಬರೆದಿದ್ದು ಯಾಕೆ: ಜಾಫರ್ ಶರೀಫ್ ಹೇಳ್ತಾರೆ

2 years ago

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಶರೀಫ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಪತ್ರ ಬರೆದಿರುವುದು ಯಾಕೆ ಎನ್ನುವುದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ...

1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

2 years ago

ಕೋಲ್ಕತ್ತಾ: ದನದ ಸೆಗಣಿಯಿಂದ ಗ್ಯಾಸ್, ವಿದ್ಯುತ್ ಉತ್ಪಾದನೆ ಮಾಡುವುದು ನಿಮಗೆ ಗೊತ್ತೇ ಇದೆ. ಇದಕ್ಕೆ ಈಗ ಹೊಸ ಸೇರ್ಪಡೆ ಎಂಬಂತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಸೆಗಣಿಯಿಂದ ತಯಾರಾದ ಬಯೋ ಗ್ಯಾಸ್‍ನಿಂದ ಚಲಿಸುವ ಬಸ್ ಸಂಚಾರ ವ್ಯವಸ್ಥೆ ಪಶ್ಚಿಮ ಬಂಗಾಳದಲ್ಲಿ ಆರಂಭಗೊಂಡಿದೆ....