Wednesday, 21st August 2019

8 months ago

ಆನ್‍ಲೈನ್‍ನಲ್ಲಿ ಹೆಡ್‍ಫೋನ್ ಬುಕ್ ಮಾಡಿದ್ರೆ ಸಿಕ್ಕಿದ್ದು ಬೇರೆ ವಸ್ತು – ರೊಚ್ಚಿಗೆದ್ದ ಸೋನಾಕ್ಷಿ

ಮುಂಬೈ: ಬಾಲಿವುಡ್ ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ ಆನ್‍ಲೈನ್‍ನಲ್ಲಿ ಬೋಸ್ ಕಂಪನಿಯ ಹೆಡ್‍ಫೋನ್ ಬುಕ್ ಮಾಡಿದ್ದರು. ಆದರೆ ಬಾಕ್ಸ್ ತೆಗೆದ ನಂತರ ಹೆಡ್‍ಫೋನ್ ಬದಲು ಕಬ್ಬಿಣದ ವಸ್ತು ನೋಡಿ ಸೋನಾಕ್ಷಿ ರೊಚ್ಚಿಗೆದಿದ್ದಾರೆ. ಸೋನಾಕ್ಷಿ ಅಮೆಜಾನ್‍ನಲ್ಲಿ ಬೋಸ್ ಕಂಪನಿಯ ಹೆಡ್‍ಫೋನ್ ಆರ್ಡರ್ ಮಾಡಿದ್ದರು. ಅಮೆಜಾನ್‍ನಿಂದ ಮನೆಗೆ ಬಂದ ಬಾಕ್ಸ್ ಅನ್ನು ಸೋನಾಕ್ಷಿ ತೆರೆದು ನೋಡಿದಾಗ ಅದರಲ್ಲಿ ಹೆಡ್‍ಫೋನ್ ಬದಲು ಕಬ್ಬಿಣದ ಪೀಸ್ ಇತ್ತು. ಇದನ್ನು ನೋಡಿ ಸೋನಾಕ್ಷಿ ಸಿನ್ಹಾ ರೊಚ್ಚಿಗೆದ್ದು ಟ್ವಿಟ್ಟರಿನಲ್ಲಿ ಅಮೆಜಾನ್ ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. Hey […]

8 months ago

ಹೆಡ್‍ಫೋನ್ ಓವರ್ ಹೀಟಾಗಿ ಬಾಲಕ ಸಾವು!

ಕೌಲಾಲಂಪುರ್: ಚಾರ್ಜಿಗೆ ಹಾಕಿದ ಹೆಡ್‍ಫೋನ್ ಓವರ್ ಹೀಟಾಗಿ ಶಾಕ್ ಹೊಡೆದು 16 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಮಲೇಷ್ಯಾದ ರೇಂಬು ಪ್ರದೇಶದಲ್ಲಿ ನಡೆದಿದೆ. ಸೋಮವಾರ ರಾತ್ರಿ ವೇಳೆ ಬಾಲಕ ತನ್ನ ರೂಂನಲ್ಲಿ ಬ್ಲೂಟೂತ್ ವಯರ್‌ಲೆಸ್ ಹೆಡ್‍ಫೋನ್‍ನನ್ನು ಚಾರ್ಜಿಗೆ ಹಾಕಿಕೊಂಡು ಬಳಸುತ್ತಿದ್ದ. ಆಗ ಹೆಡ್‍ಫೋನ್ ಓವರ್ ಹೀಟಾದ ಪರಿಣಾಮ ಶಾಕ್ ಹೊಡೆದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಾತ್ರಿ...