Wednesday, 22nd May 2019

2 years ago

ಚಾಮುಂಡಿ ಬೆಟ್ಟದಲ್ಲಿರೋ ಕರಿ ಬಸವ ಬಿಳಿ ಬಸವ ಆಯ್ತು!

ಮೈಸೂರು: ನಗರದ ಚಾಮುಂಡಿ ಬೆಟ್ಟದ ಮಧ್ಯ ಭಾಗದಲ್ಲಿ ಮಂಡಿಯೂರಿ ಕುಳಿತಿರುವ ಬೃಹತ್ ಗಾತ್ರದ ಕಪ್ಪು ನಂದಿ ವಿಗ್ರಹ ಈಗ ಬಿಳಿ ನಂದಿ ವಿಗ್ರಹವಾಗಿದೆ. ವಿಗ್ರಹ ಯಾವ ಬಣ್ಣದಲ್ಲಿದೆ ಅಂತಾ ಕೇಳಿದರೆ ಬಹುತೇಕರ ಉತ್ತರ ಕಪ್ಪು. ಏಕೆಂದರೆ ಕಳೆದ ಐದಾರು ದಶಕಗಳಿಂದ ಈ ವಿಗ್ರಹ ಇರುವುದು ಕಪ್ಪು ಬಣ್ಣದಲ್ಲಿ. ಹೀಗಾಗಿ ಬೆಟ್ಟದ ನಂದಿಯ ಯಾವುದೇ ಫೋಟೋ ನೋಡಿದರೂ ಅದು ಕಪ್ಪು ಬಣ್ಣದಲ್ಲೇ ಇದೆ. ಆದರೆ ಇಂತಹ ನಂದಿಯ ಬಣ್ಣ ಈಗ ಬಿಳಿ ಬಣ್ಣಕ್ಕೆ ಬದಲಾಗಿದೆ. ಹೌದು. ಈ ವಿಗ್ರಹದ […]

2 years ago

ಸಿದ್ದರಾಮಯ್ಯಗೆ ಗೊತ್ತಿರೋದು ಒಂದೇ ಸಂಧಿ: ಸಿಎಂ ವ್ಯಾಕರಣದ ಬಗ್ಗೆ ವಿಶ್ವನಾಥ್ ವ್ಯಂಗ್ಯ

ಮೈಸೂರು: ಸಿದ್ದರಾಮಯ್ಯಗೆ ಏಕವಚನವು ಗೊತ್ತಿಲ್ಲ ಹಾಗೂ ಬಹುವಚನವು ಗೊತ್ತಿಲ್ಲ. ಅಂತಹ ವ್ಯಕ್ತಿ ಸಂಧಿ ಪಾಠ ಮಾಡಲು ಬರುತ್ತಾರೆ ಎಂದು ಸಿಎಂ ವ್ಯಾಕರಣದ ಕುರಿತು ಮಾಜಿ ಸಂಸದ ಹೆಚ್ ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಗೊತ್ತಿರೋದು ಒಂದೇ ಸಂಧಿ. ಆ ಸಂಧಿ ಯಾವುದು ಅಂತ ನನಗೆ ಗೊತ್ತಿಲ್ಲಪ್ಪ ಎಂದು ಪ್ರತಿಕ್ರಿಯಿಸಿದರು. ವಿಶ್ವನಾಥ್ ಒಬ್ಬ...

ಕುರುಬರಿಗೆ ಮಾತ್ರ ಟಿಕೆಟ್ ಕೊಡೋಕೆ ಕುರುಬ ಸಮಾಜದವ್ರು ಮಾತ್ರ ಮತ ಹಾಕ್ತಾರಾ: ಸಿಎಂ

2 years ago

ಮೈಸೂರು: ಕುರುಬರಿಗೆ ಮಾತ್ರ ಟಿಕೆಟ್ ಕೊಡುವುದಕ್ಕೆ ಕುರುಬ ಸಮಾಜದವರು ಮಾತ್ರ ಮತ ಹಾಕುತ್ತಾರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಚಾಮುಂಡಿ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಟಿಕೆಟ್ ಕೇಳುತ್ತಾರೆ. ಹಾಗಂತ ಕೇಳಿದವರಿಗೆಲ್ಲಾ ಟಿಕೆಟ್ ನೀಡುವುದಕ್ಕೆ...

ಯದುವಂಶದ ರಾಣಿ ತ್ರಿಷಿಕಾ ಕುಮಾರಿ ಅವರ ಸೀಮಂತವನ್ನು ಫೋಟೋಗಳಲ್ಲಿ ನೋಡಿ

2 years ago

ಮೈಸೂರು: ಕಳೆದ ಭಾನುವಾರ ಮೈಸೂರಿನ ಅರಮನೆಯಲ್ಲಿ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಅವರ ಸೀಮಂತ ಕಾರ್ಯ ತೀರಾ ಅಂದರೆ ತೀರಾ ಖಾಸಗಿಯಾಗಿ ನೆರವೇರಿತ್ತು. ಸೀಮಂತ ಕಾರ್ಯದ ಒಂದು ದೃಶ್ಯ ಅಥವಾ ಫೋಟೋ ಕೂಡ ಹೊರಬರದಂತೆ...

2018ರ ಚುನಾವಣೆಯೇ ಕೊನೆ, ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ: ಸಿಎಂ

2 years ago

ಮೈಸೂರು: 2018ನೇ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಇದು ನನ್ನ ಕೊನೆಯ ಚುನಾವಣೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ಹೂಟಗಳ್ಳಿಯ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಬಾರಿಯೇ ನಾನು ಚುನಾವಣೆಯಿಂದ ದೂರ ಇರಬೇಕು ಅಂದುಕೊಂಡಿದ್ದೆ. ಆದರೆ ಹೈಕಮಾಂಡ್ ಒತ್ತಾಯದ...

ನಾಡಿನಿಂದ ಕಾಡಿನತ್ತ ಹೊರಟಿತು ದಸರಾ ಆನೆಗಳು

2 years ago

ಮೈಸೂರು: ದಸರಾ ಹಬ್ಬಕ್ಕಾಗಿ ಕಾಡಿನಿಂದ ಮೈಸೂರು ಅರಮನೆಗೆ ಬಂದಿದ್ದ, ಗಜಪಡೆಗೆ ಪೂಜೆ ಸಲ್ಲಿಸಿ ನಾಡಿನಿಂದ ಬೀಳ್ಕೊಡಲಾಯಿತು. 407 ನೇ ದಸರಾ ಹಬ್ಬಕ್ಕಾಗಿ ಒಂದು ತಿಂಗಳ ಹಿಂದೆ ಕಾಡಿನಿಂದ ಮೈಸೂರು ಅರಮನೆಗೆ ಗಜಪಡೆಯನ್ನು ಕರೆಸಲಾಗಿತ್ತು. ನಂತರ ಯಶಸ್ವಿಯಾಗಿ ವಿಜಯದಶಮಿಯ ಮೆರವಣಿಗೆ ಮುಗಿಸಿದ ಬಳಿಕ...

ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ

2 years ago

ಮೈಸೂರು: ವಿಚಿತ್ರವಾಗಿ ವರ್ತಿಸುತ್ತಿದ್ದ ಮಹಿಳೆ ಮೈಮೇಲೆ ದೆವ್ವಬಂದಿದೆ ಎಂದು ತಿಳಿದು ಪೂಜಾರಿಯೊಬ್ಬ ಹಿಗ್ಗಾಮಗ್ಗಾ ಥಳಿಸಿದ್ದಾನೆ. ಪಿರಿಯಾಪಟ್ಟಣ ತಾಲೂಕಿನ ನಾಗನಹಳ್ಳಿಪಾಳ್ಯದ ನಿವಾಸಿ ಶಾರದಾ ಅನಾರೋಗ್ಯದಿಂದ ಬಳಲುತ್ತಿದ್ದು, ವಿಚಿತ್ರವಾಗಿ ವರ್ತಿಸುತ್ತಿದ್ದರು. ಈ ಕಾರಣದಿಂದ ಸೆ.30 ರಂದು ಬೆಟ್ಟದಪುರದ ಶನೇಶ್ವರ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದರು. ಆರೋಪಿ...

ತಮ್ಮ ದಂಧೆಗಾಗಿ, ಹಣಕ್ಕಾಗಿ ತಮಿಳುನಾಡಿನಲ್ಲಿ ರೈ, ಇಲ್ಲಿ ರಾಜ್: ಪ್ರತಾಪ್ ಸಿಂಹ

2 years ago

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೊಡ್ಡ ನಟ ಅಂತಾ ಟೀಕಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಕಾಶ್ ರೈ ಸಿನಿಮಾಗಳಲ್ಲಿ ಖಳ ನಟನ ಪಾತ್ರ ಮಾಡುತ್ತಾ ಮಾಡುತ್ತಾ ತಮ್ಮೊಳಗೆ ಖಳನ...