Thursday, 18th July 2019

Recent News

2 years ago

ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್- ಫೋಟೋಗಳಲ್ಲಿ ನೋಡಿ

ಶಬರಿಮಲೆ: ಏಪ್ರಿಲ್ 6ರಂದು ಇರುಮುಡಿ ಹೊತ್ತುಕೊಂಡು ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ತೆರಳಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಶಬರಿಮಲೆಯಿಂದ ವಾಪಸ್ಸಾಗಲಿದ್ದಾರೆ. ಮಾಲಾಧಾರಿಯಾಗಿದ್ದ ದರ್ಶನ್ ಗುರುವಾರದಂದು ಇರುಮುಡಿ ಹೊತ್ತು ಶಬರಿಮಲೆ ಯಾತ್ರೆ ಕೈಗೊಂಡಿದ್ರು. ದರ್ಶನ್ ಜೊತೆ ಸಹೋದರ ದಿನಕರ್ ತೂಗುದೀಪ್ ಸೇರಿದಂತೆ ಇನ್ನೂ ಅನೇಕ ಆಪ್ತರು ಪ್ರಯಾಣ ಬೆಳೆಸಿದ್ರು. ದರ್ಶನ್ ಶಬರಿಮಲೆಯ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿರೋ ಫೋಟೋಗಳು ಲಭ್ಯವಾಗಿವೆ.  

2 years ago

ನಾಳೆ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ- ಎರಡೂ ಕ್ಷೇತ್ರಗಳಲ್ಲಿ ಬಿಗಿ ಭದ್ರತೆ

ಮೈಸೂರು/ಚಾಮರಾಜನಗರ: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯ ಮತದಾನಕ್ಕೆ ಇನ್ನೊಂದೇ ದಿನ ಬಾಕಿ. ಬಹಿರಂಗ ಪ್ರಚಾರಕ್ಕೆ ಶುಕ್ರವಾರ ತೆರೆಬಿದ್ದಿದೆ. ಹೀಗಾಗಿ, ಎರಡು ಕ್ಷೇತ್ರಕ್ಕೆ ಸಂಬಂಧಿಸಿಲ್ಲದ ಉಭಯ ಪಕ್ಷಗಳ ನಾಯಕರು ಕ್ಷೇತ್ರವನ್ನು ಖಾಲಿ ಮಾಡಿದ್ದಾರೆ. ಇಂದು ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ಮಾಡಲಿದ್ದಾರೆ. ಎರಡು ಕ್ಷೇತ್ರಗಳಲ್ಲಿಯೂ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇಂದು ಚುನಾವಣೆ ಹಿನ್ನೆಲೆಯಲ್ಲಿ ಮಾಸ್ಟರಿಂಗ್...

ಬದುಕಿನ ಬಂಡಿಗೆ ಕೂಲಿ ಅರಸಿ ಬಂದು ಸಾವಿನ ಮನೆ ಸೇರಿದ ಮಹಿಳೆ!

2 years ago

– ಚಲಿಸುತ್ತಿದ್ದ ಬೋಲೆರೋ ವಾಹನದಿಂದ ಬಿದ್ದು ಮಹಿಳೆ ಸಾವು ಚಿಕ್ಕಬಳ್ಳಾಪುರ: ಬದುಕಿನ ಬಂಡಿ ಸಾಗಿಸಲು ಕೆಲಸ ಅರಸಿ ಬಂದ ಕೂಲಿಕಾರ ಮಹಿಳೆಯೊರ್ವಳು ಚಲಿಸುತ್ತಿದ್ದ ಬೊಲೆರೋ ಟೆಂಪೋದಿಂದ ಉರುಳಿಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ತಾಲೂಕು ಸಬ್ಬೇನಹಳ್ಳಿ ಬಳಿ ನಡೆದಿದೆ. ಅಡ್ಡಗಲ್ ಗ್ರಾಮದ...

ಹಿಂದೂ-ಮುಸ್ಲಿಮರು ಜೊತೆಗೂಡಿ ರಾಮನವಮಿ ಆಚರಣೆ

2 years ago

ಚಿಕ್ಕಬಳ್ಳಾಪುರ: ರಾಮಮಂದಿರ ವಿವಾದ ಹಿಂದೂ ಮುಸ್ಲಿಮರ ಮಧ್ಯೆ ಒಂದಷ್ಟು ಬಿರುಕು ಮೂಡಿಸಿರೋದು ನಿಜ. ಆದ್ರೆ ಇಂತಹ ಸಂದರ್ಭದಲ್ಲೂ ಹಿಂದೂ-ಮುಸ್ಲಿಂ ಬಾಂಧವರು ಕೂಡಿ ವಿಶೇಷವಾಗಿ ಶ್ರೀರಾಮನವಮಿ ಆಚರಣೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಅಜಾದ್ ಚೌಕ್ ನಲ್ಲಿ ಇಂದು ಹಿಂದೂ ಹಾಗೂ...

ಉಡುಪಿ ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣ- 5 ಮರಳು ದಂಧೆಕೋರರ ಗಡಿಪಾರು

2 years ago

ಉಡುಪಿ: ಜಿಲ್ಲಾಧಿಕಾರಿ ಮತ್ತು 6 ಮಂದಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ 14 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅದರಲ್ಲಿ ಐದು ಮಂದಿಯನ್ನು ಗಡಿಪಾರು ಮಾಡಿದ್ದಾರೆ. ಉಡುಪಿ ಎಸ್‍ಪಿ ಕೆಟಿ ಬಾಲಕೃಷ್ಣ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಘಟನೆ ನಡೆದ ನಂತರ...

ಗುಂಡ್ಲುಪೇಟೆ ಬೈ ಎಲೆಕ್ಷನ್: ಸಾರಿಗೆ ಸಂಸ್ಥೆಯ ನಿರ್ದೇಶಕರ ಕಾರಿನಲ್ಲಿ ಸಿಕ್ತು ಕಂತೆ ಕಂತೆ ನೋಟುಗಳು!

2 years ago

– ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಹಲ್ಲೆ ಆರೋಪ ಚಾಮರಾಜನಗರ: ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕರ ಕಾರಿನಲ್ಲಿ ಹಣವಿರುವುದುನ್ನು ಪತ್ತೆ ಮಾಡಿದ ಬಿಜೆಪಿ ಕಾರ್ಯಕರ್ತರು ಓರ್ವನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ. ಮನೋಜ್ ಬಂಧಿತ ಆರೋಪಿ. ಗುಂಡ್ಲುಪೇಟೆಯ ಖಾಸಗಿ...

327 ದಿನಗಳಲ್ಲಿ 6000 ಕೇಸ್ ಇತ್ಯರ್ಥ: ವಿಶ್ವ ದಾಖಲೆ ನಿರ್ಮಿಸಿದ ಉತ್ತರಪ್ರದೇಶದ ಜಡ್ಜ್

2 years ago

– 903 ದಂಪತಿಗಳು ಒಂದಾದ್ರು ಮುಜಾಫರ್‍ನಗರ್: 327 ಕೆಲಸದ ದಿನಗಳಲ್ಲಿ ಒಟ್ಟು 6065 ಪ್ರಕರಣಗಳನ್ನು ಇತ್ಯರ್ಥ ಮಾಡುವ ಮೂಲಕ ಉತ್ತರಪ್ರದೇಶದ ಮುಜಾಫರ್‍ನಗರದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಜಿಲ್ಲೆಯಲ್ಲಿ ವಕೀಲರ ಪ್ರತಿಭಟನೆಯ ನಡುವೆಯೂ 327 ದಿನಗಳಲ್ಲಿ 6065 ಕೇಸ್‍ಗಳನ್ನು...

ಸೆಲ್ಫಿ ತೆಗೆಯುವಾಗ ಬ್ರಿಡ್ಜ್ ನಿಂದ 60 ಅಡಿ ಕೆಳಗೆ ಬಿದ್ರೂ ಮಹಿಳೆ ಪಾರು

2 years ago

ವಾಷಿಂಗ್ಟನ್: ಮಹಿಳೆಯೊಬ್ಬರು ಸೆಲ್ಫಿ ತೆಗೆಯುವ ವೇಳೆ ಅಮೆರಿಕದ ಅತ್ಯಂತ ಎತ್ತರದ ಬ್ರಿಡ್ಜ್ ಗಳಲ್ಲಿ ಒಂದಾದ ಫಾರೆಸ್ಟ್ ಹಿಲ್ ಬ್ರಿಡ್ಜ್ ನಿಂದ ಕೆಳಗೆ ಬಿದ್ದರೂ ಬದುಕುಳಿದಿದ್ದಾರೆ. ಕ್ಯಾಲಿಫೋರ್ನಿಯಾದ ಅಬರ್ನ್ ಬಳಿ ಇರುವ ಈ ಬ್ರಿಡ್ಜ್ ಮೇಲೆ ಮಹಿಳೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ...