Wednesday, 17th July 2019

Recent News

2 days ago

ಜೈಲಿನಲ್ಲಿ ಭವಿಷ್ಯ ಹೇಳೋ ಕಲೆಯನ್ನು ಕಲಿಯುತ್ತಿದ್ದಾಳೆ ಹಂತಕಿ ಅಪೂರ್ವ ಶುಕ್ಲಾ

ನವದೆಹಲಿ: ಮಾಜಿ ಗವರ್ನರ್ ಎನ್.ಡಿ.ತಿವಾರಿ ಪುತ್ರ ರೋಹಿತ್ ತಿವಾರಿಯನ್ನು ಕೊಲೆಗೈದು ಜೈಲುಪಾಲಾಗಿರುವ ಪತ್ನಿ ಅಪೂರ್ವ ಶುಕ್ಲಾ ಜೈಲಿನಲ್ಲಿ ಕಾರ್ಡ್ ಮೂಲಕ ಭವಿಷ್ಯ ಹೇಳುವ ಕಲೆಯನ್ನು ಕಲಿಯುತ್ತಿದ್ದಾಳೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆಸ್ತಿಗಾಗಿ ಪತಿಯನ್ನೇ ಕೊಲೆ ಮಾಡಿದ್ದ ಅಪೂರ್ವ ಸದ್ಯ ತಿಹಾರ್ ಜೈಲಿನಲ್ಲಿದ್ದಾಳೆ. ಈ ಸಂದರ್ಭದಲ್ಲಿ ಪತಿಯನ್ನ ಕೊಲೆ ಮಾಡಿದ್ದಕ್ಕೆ ಪಶ್ಚತ್ತಾಪ ಪಡುವಂತೆ ಅಪೂರ್ವ ಕಾಣುತ್ತಿಲ್ಲ. ಜೈಲಿನಲ್ಲಿ ಪ್ರತಿ ಮಂಗಳವಾರ ಹಾಗೂ ಗುರುವಾರ ನಡೆಯುವ ಕಾರ್ಡ್ ಮೂಲಕ ಭವಿಷ್ಯ ಹೇಳುವ ತರಗತಿಗೆ ತಪ್ಪದೇ ಭಾಗವಹಿಸುತ್ತಿದ್ದಾಳೆ. ಅಲ್ಲದೇ ಇದನ್ನು […]

7 months ago

ಪ್ರಧಾನಿ ಮೋದಿ ಜಾತಕದಲ್ಲಿ ಕಂಟಕ- ಫೆಬ್ರವರಿ ನಂತರ ಬುಧಬುಕ್ತಿಗೆ ಮುಕ್ತಿ: ಜ್ಯೋತಿಷಿ ಅಮ್ಮಣ್ಣಾಯ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಜಾತಕದಲ್ಲಿ ಕಂಟಕ ಇರುವುದರಿಂದ ಪಂಚರಾಜ್ಯಗಳ ಚುನಾವಣೆಯಲ್ಲಿ ಸೋಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಕೆಲವು ಆರೋಪಗಳು ಬರುತ್ತಿದೆ ಎಂದು ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ. ಉಡುಪಿಯ ಕಾಪುವಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಕಾಶ್ ಅಮ್ಮಣ್ಣಾಯ, ಮೋದಿ ಜಾತಕದಲ್ಲಿ ಬುಧಭುಕ್ತಿ ಇದೆ. ಬುಧಭುಕ್ತಿ ವಿಮೋಚನೆಯಾದ ನಂತರ ಮತ್ತೆ ಜಾತಕದಲ್ಲಿ ಒಳ್ಳೇ...