Friday, 19th July 2019

Recent News

2 months ago

ಮೇಕಪ್ ಇಲ್ಲದ ಫೋಟೋ ಹಾಕಿ ನಟಿ ಕಾಜಲ್ ಸಂದೇಶ

ಮುಂಬೈ: ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್ ಮೇಕಪ್ ಇಲ್ಲದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಾಜಲ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮೇಕಪ್ ಇಲ್ಲದ ಫೋಟೋ ಹಾಕಿ ಅದಕ್ಕೆ, ಜನರು ತಮ್ಮನ್ನು ಹೆಚ್ಚು ಕಂಡುಕೊಳ್ಳಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಜನರು ತೋರಿಕೆಯ ಸೌಂದರ್ಯವನ್ನು ಇಷ್ಟಪಡುತ್ತಾರೆ. ಏಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಇಂತಹ ಸೌಂದರ್ಯಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಪರಿಪೂರ್ಣ ದೇಹವನ್ನು ಕಂಡುಕೊಳ್ಳುವ ಭರವಸೆಯಿಂದ ಜನರು ಲಕ್ಷಂತಾರ ರೂ. ಖರ್ಚು ಮಾಡಿ ಕಾಸ್‍ಮೆಟಿಕ್ಸ್ ಗಳನ್ನು ಹಾಗೂ ಸೌಂದರ್ಯದ ಉತ್ಪನ್ನಗಳನ್ನು ಖರೀದಿಸುತ್ತಾರೆ ಎಂದು ಬರೆದಿದ್ದಾರೆ. […]

3 months ago

ಕಾಜಲ್ ಅಗರ್ವಾಲ್ ಹೃದಯದಲ್ಲಿ ಕ್ರಿಕೆಟಿಗ

ಹೈದರಾಬಾದ್: ಪಡ್ಡೆ ಹುಡುಗರ ಹಾಟ್ ಫೇವರೇಟ್ ಟಾಲಿವುಡ್ ಮಗಧೀರನ ಸುಂದರಿ ಕಾಜಲ್ ಅಗರ್ವಾಲ್. ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಹೆಜ್ಜೆ ಮೂಡಿಸಿರುವ ಕಾಜಲ್ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ತಾನು ಕ್ರಿಕೆಟಿಗ ರೋಹಿತ್ ಶರ್ಮಾರ ದೊಡ್ಡ ಅಭಿಮಾನಿ ಎಂದು ಕಾಜಲ್ ಹೇಳಿಕೊಂಡಿದ್ದಾರೆ. ಕಾಜಲ್ ತೆಲಗು, ತಮಿಳು ಸೇರಿದಂತೆ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ...

ಜಮೀನಿನಲ್ಲಿ ಕಾಜಲ್ ಅಗರ್ವಾಲ್ ಕಟೌಟ್ -ಯಶಸ್ವಿಯಾಯ್ತು ರೈತನ ಪ್ರಯೋಗ

1 year ago

ಹೈದರಾಬಾದ್: ಬೆಳೆ ಹಾಳಾಗುವುದನ್ನು ತಡೆಯಲು ಜಮೀನಿನಲ್ಲಿ ರೈತರೊಬ್ಬರು ಕಾಜಲ್ ಅಗರ್ವಾಲ್  ಕಟೌಟ್ ಹಾಕಿದ್ದು, ಈ ಪ್ರಯೋಗ ಈಗ ಯಶಸ್ವಿಯಾಗಿದೆ. ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕೊಂಡಾರೆಡ್ಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 30 ವರ್ಷದ ರೈತ ಅನ್ವರ್ ಎರಡು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ....

ಮಾರಿ-2 ಚಿತ್ರ ಶೂಟಿಂಗ್ ವೇಳೆ ಧನುಷ್‍ಗೆ ಗಾಯ – ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

1 year ago

ಚೆನ್ನೈ: ಮಾರಿ-1 ಚಿತ್ರ ಬಿಡುಗಡೆಗೊಂಡು ಯಶಸ್ವಿಗೊಂಡಿದ್ದು, ಮಾರಿ-2 ತಯಾರಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್ ವೇಳೆಯಲ್ಲಿ ಧನುಷ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ರದ ಚಿತ್ರೀಕರಣಲ್ಲಿ ಧನುಷ್ ಹಾಗೂ ಖಳನಟನಾಗಿ ನಟಿಸುತ್ತಿರುವ ಟೊವಿನೊ ಥಾಮಸ್ ಫೈಟಿಂಗ್ ಸೀನ್ ವೊಂದರಲ್ಲಿ ನಟಿಸುತ್ತಿರುವಾಗ ಈ ಅವಘಡ ಸಂಭವಿಸಿದೆ....