ಪಲ್ಲೆಕೆಲೆ: 2026ರ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯಲ್ಲಿ ತನ್ನ ಕೊನೆಯ ಲೀಗ್ ಪಂದ್ಯವನ್ನಾಡಿದ ಆಸ್ಟ್ರೇಲಿಯಾ (Australia) ತಂಡ ಗೆದ್ದು ಆಟ ಮುಗಿಸಿದೆ. ಒಮನ್ (Oman) ವಿರುದ್ಧ ಆಟಕ್ಕುಂಟು ಲೆಕ್ಕಕ್ಕಿಲದ ಪಂದ್ಯದಲ್ಲಿ 9 ವಿಕೆಟ್‌ಗಳ ಜಯ ಸಾಧಿಸಿದ್ದು, ವಿಶ್ವಕಪ್ ಅಭಿಮಾನಕ್ಕೆ ವಿದಾಯ ಹೇಳಿದೆ.
ಪಲ್ಲೆಕೆಲೆ ಅಂತಾರಾಷ್ಟ್ರೀಯ (Cricket) ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಓಮನ್ ತಂಡದ ಬ್ಯಾಟರ್‌ಗಳು ಆಸ್ಟ್ರೇಲಿಯಾ ಬೌಲರ್‌ಗಳ ದಾಳಿ ಎದುರಿಸುವಲ್ಲಿ ವಿಫಲರಾದರು. ಓಮನ್ ತಂಡದ ಅಮೀರ್ ಕಲೀಮ್ ಇನ್ನಿಂಗ್ಸ್ ಮೊದಲ ಎಸೆತದಲ್ಲಿ ಔಟ್ ಆದರು. ಓಮನ್ ತಂಡದ ಪರ ನಾಯಕ ಜತೀಂದರ್ ಸಿಂಗ್ 17, ಕರಣ್ ಸೋನಾವಾಲೆ 12, ಹಮ್ಮದ್ ಮಿರ್ಜಾ 16 ರನ್ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ವಾಸಿಂ ಅಲಿ 4 ಬೌಂಡರಿ ನೆರವಿನಿಂದ 32 ರನ್ ಬಾರಿಸಿದರು. ಅಂತಿಮವಾಗಿ ಓಮನ್ 16.4 ಓವರ್‌ಗಳಲ್ಲಿ 104 ರನ್‌ಗಳಿಗೆ ಆಲೌಟ್ ಅಯಿತು.
ಓಮನ್ ನೀಡಿದ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, 9.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 108 ರನ್‌ಗಳಿಸಿ ಜಯ ತನ್ನದಾಗಿಸಿಕೊಂಡಿತು. ಮಿಚೆಲ್ ಮಾರ್ಷ್ 33 ಎಸೆತಗಳಲ್ಲಿ 64 ರನ್ ಗಳಿಸಿದರು. ಟ್ರಾವಿಸ್ ಹೆಡ್ 32 ರನ್‌ಗಳ ಇನ್ನಿಂಗ್ಸ್ ಆಡಿ ಔಟಾದರು. ಜೋಶ್ ಇಂಗ್ಲಿಸ್ ತಂಡಕ್ಕೆ 12 ರನ್‌ಗಳ ಕೊಡುಗೆ ನೀಡಿದರು.
ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಆಸ್ಟ್ರೇಲಿಯಾ ಆಡಿದ 4 ಪಂದ್ಯಗಳಲ್ಲಿ 2 ಜಯ, 2 ಸೋಲು ಕಂಡಿದ್ದು, 4 ಅಂಕವನ್ನು ಕಲೆ ಹಾಕಿ ಮೂರನೇ ಸ್ಥಾನ ಪಡೆದಿದೆ.

