Connect with us

Cricket

ಆಸೀಸ್ ಪ್ರವಾಸ – ವರುಣ್ ಚಕ್ರವರ್ತಿ ಬದಲು ಟಿ.ನಟರಾಜನ್ ಟಿ-20 ಸರಣಿಗೆ ಆಯ್ಕೆ

Published

on

ಮುಂಬೈ: ಮುಂಬರುವ ಆಸ್ಟ್ರೇಲಿಯಾ ಮತ್ತು ಇಂಡಿಯಾ ಪ್ರವಾಸಕ್ಕೆ ಆಯ್ಕೆ ಆಗುವ ಮೂಲಕ ತಮಿಳುನಾಡಿನ ಯುವ ಬೌಲರ್ ಟಿ ನಟರಾಜನ್ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲಿದ್ದಾರೆ.

ಐಪಿಎಲ್ ನಂತರ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿ ಮೂರು ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ. ಈ ಸರಣಿಗೆ ಆಯ್ಕೆಯಾಗಿದ್ದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಭುಜದ ನೋವಿನ ಸಮಸ್ಯೆಗೆ ಸಿಲುಕಿರುವ ಕಾರಣ, ಚಕ್ರವರ್ತಿ ಬದಲು ಬಿಸಿಸಿಐ ಟಿ.ನಟರಾಜನ್ ಅವರನ್ನು ಆಯ್ಕೆ ಮಾಡಿದೆ. ಈ ಮೂಲಕ ಟಿ. ನಟರಾಜನ್ ಇಂಡಿಯಾದ ಪರವಾಗಿ ಮೊದಲ ಬಾರಿಗೆ ಕ್ಯಾಪ್ ತೊಡಲಿದ್ದಾರೆ.

ಈ ವಿಚಾರವಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿದರುವ ಬಿಸಿಸಿಐ, ಸ್ಪಿನ್ನರ್ ವರುಣ್ ಚಕ್ರವರ್ತಿ ಭುಜದ ನೋವಿನ ಸಮಸ್ಯೆಯಿಂದ ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಜಾಗಕ್ಕೆ ಬಿಸಿಸಿಐ ಆಯ್ಕೆಗಾರರು ಟಿ.ನಟರಾಜನ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದೆ. ಟಿ.ನಟರಾಜನ್ ಅವರಿಗೆ ಶುಭಾಶಯ ತಿಳಿಸಿರುವ ಇರ್ಫಾನ್ ಪಠಾಣ್ ಅವರು ಶ್ರಮವಹಿಸಿ ಕಲಿ, ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬೇಡ. ಇದು ನಟರಾಜನ್ ಅವರ ಯಶಸ್ಸಿನ ಗುಟ್ಟು. ಶುಭಾಶಯ ಸಹೋದರ ಎಂದು ಬರೆದುಕೊಂಡಿದ್ದಾರೆ.

ಈ ಬಾರಿಯ ಐಪಿಎಲ್‍ನಲ್ಲಿ ಉತ್ತಮವಾಗಿ ಬೌಲ್ ಮಾಡಿದ್ದ ವರಣ್ ಚಕ್ರವರ್ತಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐದು ವಿಕೆಟ್ ಕಿತ್ತು ಎಲ್ಲರ ಗಮನ ಸೆಳೆದಿದ್ದರು. ಈ ಕಾರಣದಿಂದ ಅವರನ್ನು ಆಸೀಸ್ ವಿರುದ್ಧದ ಟಿ-20 ಸರಣಿಗೆ ಆಯ್ಕೆ ಮಾಡಲಾಗಿತ್ತು. ಟಿ.ನಟರಾಜನ್ ಅವರು ಕೂಡ ಉತ್ತಮ ಬೌಲರ್ ಆಗಿದ್ದು, ಐಪಿಎಲ್‍ನಲ್ಲಿ ಅತಿ ಹೆಚ್ಚು ಯಾರ್ಕರ್ ಹಾಕುವ ಮೂಲಕ ಗುರುತಿಸಿಕೊಂಡಿದ್ದಾರೆ. ಈ ಕಾರಣದಿಂದಲೇ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.

ಟೀಂ ಇಂಡಿಯಾ ಟಿ-20 ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ಕೆ.ಎಲ್. ರಾಹುಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್. ಶಮಿ, ನವದೀಪ್ ಸೈನಿ, ದೀಪಕ್ ಚಹರ್, ಟಿ ನಟರಾಜನ್

Click to comment

Leave a Reply

Your email address will not be published. Required fields are marked *

www.publictv.in