Bollywood
ಸುಶಾಂತ್ ಸಿಂಗ್ ಕೇಸ್- ದೆಹಲಿ ವಕೀಲ ಅರೆಸ್ಟ್

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ದೆಹಲಿಯ ವಕೀಲರೊಬ್ಬರನ್ನು ಬಂಧಿಸಿದ್ದಾರೆ.
ವಿಬೋರ್ ಆನಂದ್ ಬಂಧಿತ ವಕೀಲ. ಸುಶಾಂತ್ ಸಿಂಗ್ ಸಾವಿನ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳು ಮತ್ತು ಮೃತ ನಟನ ಚಾರಿತ್ರ್ಯ ಹರಣ ಮಾಡಿರುವ ಆರೋಪಗಳು ಕೇಳಿ ಬಂದಿವೆ. ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರ ಮನದಲ್ಲಿ ಸಂದೇಹಗಳನ್ನ ಮೂಡಿಸುತ್ತಿದ್ದರು ಎಂಬ ಆರೋಪ ಇದೆ.
ವಿಭೋರ್ ಆನಂದ್ ವಿವಿಧ ಹೇಳಿಕೆಗಳನ್ನು ಮತ್ತು ಮಾಧ್ಯಮಗಳ ಲಿಂಕ್ ಶೇರ್ ಮಾಡಿಕೊಳ್ಳುತ್ತಿದ್ದರು. ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಮತ್ತು ಅವರ ಸಾವಿನ ಸುದ್ದಿಯ ಬಗ್ಗೆ ಹಲವು ಉಹಾಪೋಹ ಸುದ್ದಿಗಳನ್ನ ಹರಡುತ್ತಿದ್ದರು. ಆಗಸ್ಟ್ 12ರಂದು ವಿಭೋರ್ ಆನಂದ್ ವಿರುದ್ಧ ಸೈಬಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರಿನಲ್ಲಿ ಮಹಿಳೆ ಜೊತೆ ಅಶ್ಲೀಲ ಮಾತುಗಳನಾಡಿರುವ ಬಗ್ಗೆ ಆರೋಪಿಸಲಾಗಿತ್ತು. ಇದನ್ನೂ ಓದಿ: ನನಗೆ ಇಲ್ಲಿ ಇಬ್ಬರೇ ಗೆಳೆಯರು ಅಂದಿದ್ದ ಸುಶಾಂತ್ ಸಿಂಗ್ ರಜಪೂತ್
ಈ ದೂರಿನಲ್ಲಿ 14 ಟ್ವಿಟ್ಟರ್ ಖಾತೆಗಳ ಮಾಹಿತಿಯನ್ನ ದಾಖಲಿಸಲಾಗಿತ್ತು. ಇದರಲ್ಲಿ ಒಂದು ವಿಭೋರ್ ಖಾತೆ ಇರೋದು ಬೆಳಕಿಗೆ ಬಂದಿದೆ. ತನ್ನ ಟ್ವಿಟ್ಟರ್ ಖಾತೆ ಮೂಲಕ ದಿಶಾ ಸಾಲಿಯಾನ್ ಸಾವಿನ ಬಗ್ಗೆ ಸುಳ್ಳು ಕಥೆಗಳನ್ನ ಬರೆದು ಟ್ವೀಟ್ ಮಾಡುತ್ತಿದ್ದನು. ಸೋಶಿಯಲ್ ಮೀಡಿಯಾದ ವಿವಿಧ ಖಾತೆಗಳ ಮೂಲಕ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಸಚಿವ ಆದಿತ್ಯ ಠಾಕ್ರೆ ಅವರ ಮಾನಹಾನಿಗೆ ಪ್ರಯತ್ನಿಸಲಾಗುತ್ತಿತ್ತು. ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಕೊನೆಯ ಮೂರು ಗಂಟೆ ಹೇಗಿತ್ತು?
ದಿಶಾ ಸಾಲಿಯಾನ್ ಪ್ರಕರಣದಲ್ಲಿ ತಮ್ಮ ಹೆಸರು ಬಳಸಲಾಗುತ್ತಿರೋದನ್ನ ತಡೆ ಹಿಡಿಯಬೇಕೆಂದು ನಟ ಅರ್ಬಾಜ್ ಖಾನ್ ನ್ಯಾಯಾಲಯ ಮೊರೆ ಹೋಗಿದ್ದರು. ನ್ಯಾಯಾಲಯ ಅರ್ಬಾಜ್ ಖಾನ್ ಹೆಸರು ಬಳಸಕೂಡದು ಎಂದು ಆದೇಶಿಸಿತ್ತು. ಆರೋಪಿ ವಿಭೋರ್ ಕೋರ್ಟ್ ಆದೇಶ ಉಲ್ಲಂಘಿಸಿ, ಇಬ್ಬರ ಹೆಸರು ಬಳಸಿ ಟ್ವೀಟ್ ಮಾಡುತ್ತಿದ್ದರು. ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ನಟನೆಯ ಟಾಪ್ 5 ಹಾಡುಗಳು
