Connect with us

Bollywood

ರಿಯಾ ವಿರುದ್ಧ 48 ಪುಟಗಳ ಸಾಕ್ಷಿ ಸಂಗ್ರಹಿಸಿದ ಪಾಟ್ನಾ ಪೊಲೀಸ್

Published

on

Share this

-ಅರೆಸ್ಟ್ ವಾರೆಂಟ್‍ಗಾಗಿ ಸಿದ್ಧತೆ

ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ವಿರುದ್ಧ ಪಾಟ್ನಾ ಪೊಲೀಸರು 48 ಪುಟಗಳ ಸಾಕ್ಷಿ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

ಸುಶಾಂತ್ ನಿಧನದ ಬಳಿಕ ಅಜ್ಞಾತ ಸ್ಥಳದಲ್ಲಿರುವ ರಿಯಾ ಚಕ್ರವರ್ತಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ವಿಡಿಯೋ ಮೂಲಕ ರಿಯಾ ಚಕ್ರವರ್ತಿ ಸಂದೇಶ ರವಾನಿಸಿದ್ದರು. ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ನಡೆಸುತ್ತಿದ್ದು, ಸುಶಾಂತ್ ತಂದೆ ಕೆ.ಕೆ.ಸಿಂಗ್ ಪಾಟ್ನಾದಲ್ಲಿ ರಿಯಾ ಚಕ್ರವರ್ತಿ ಮತ್ತು ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಾಟ್ನಾ ಪೊಲೀಸರು ರಿಯಾ ಬಂಧನಕ್ಕಾಗಿ ಸಾಕ್ಷಿ ಸಂಗ್ರಹಿಸುತ್ತಿದ್ದಾರೆ.

ಈಗಾಗಲೇ ಪಾಟ್ನಾ ಪೊಲೀಸರು 48 ಪುಟಗಳಷ್ಟು ಸಾಕ್ಷಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಈ 48 ಪುಟಗಳಲ್ಲಿ ರಿಯಾ ಮತ್ತು ಸುಶಾಂತ್ ನಡುವೆ ನಡೆದ ಬ್ಯಾಂಕ್ ವ್ಯವಹಾರಗಳ ಮಾಹಿತಿ ಇದೆ. 13 ಪುಟಗಳಲ್ಲಿ ಸುಶಾಂತ್ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ಜೊತೆ ವಾಟ್ಸಪ್ ಸಂದೇಶಗಳ ಸ್ಕ್ರೀನ್ ಶಾಟ್, ಆರು ಜನರ ಹೇಳಿಕೆಗಳು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯ ಟೆಲಿಫೋನ್ ಹೇಳಿಕೆ ಸಹ ಈ ಪುಟಗಳಲ್ಲಿದೆ ಎಂದು ಪ್ರಕಟವಾಗಿದೆ. ಇದನ್ನೂ ಓದಿ: ಬಾಲಿವುಡ್‍ಗೆ ಬೈ ಹೇಳಿ ಕೊಡಗಿನಲ್ಲಿ ಕೃಷಿ ಮಾಡೋಕೆ ಮುಂದಾಗಿದ್ದ ಸುಶಾಂತ್ ಸಿಂಗ್

ಈ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ರಿಯಾ ಚಕ್ರವರ್ತಿಯ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸುವಂತೆ ಪೊಲೀಸರು ಮನವಿ ಮಾಡಿಕೊಳ್ಳಲಿದ್ದಾರೆ. ಸುಶಾಂತ್ ಹೊಂದಿದ್ದ ಮೂರು ಬ್ಯಾಂಕ್ ಖಾತೆಗಳ ಮಾಹಿತಿ, ಯುಪಿಐ ಪೇಮೆಂಟ್, ಸ್ಟೇಟ್‍ಮೆಂಟ್ ಮತ್ತು ಚಾರ್ಟೆಡ್ ಅಕೌಂಟೆಂಟ್ ಲೇಜರ್ ಬ್ಯಾಲೆನ್ಸ್ ಕಾಪಿಯನ್ನು ಸಹ ಪೊಲೀಸರು ತರಿಸಿಕೊಂಡಿದ್ದಾರೆ. ಇದನ್ನೂ ಓದಿ: ಸುಶಾಂತ್ ಸಿಂಗ್ ಸೋದರಿಯಿಂದ ಪ್ರಧಾನಿ ಮೋದಿಗೆ ಬಹಿರಂಗ ಪತ್ರ – ಸಹೋದರನಿಗಾಗಿ ಮನವಿ

ಸುಶಾಂತ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾ ಮತ್ತು ಮುಂಬೈ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ. ಇನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement