Friday, 22nd February 2019

ಸಾವಿನ ವರದಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಸುರೇಶ್ ರೈನಾ

ಮುಂಬೈ: ಟೀಂ ಇಂಡಿಯಾ ಅನುಭವಿ ಆಟಗಾರ ಸುರೇಶ್ ರೈನಾ ಅಪಘಾತವೊಂದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಾರಿದಾಡುತ್ತಿದೆ. ಈ ಬಗ್ಗೆ ಮಾಹಿತಿ ಪಡೆದಿರುವ ರೈನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈನಾ ಅವರ ಬಗ್ಗೆ ತಿರುಚಲಾದ ಸುಳ್ಳು ಸುದ್ದಿ ಹಾಗೂ ಫೋಟೋಗಳು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ರೈನಾ ಸಾವನ್ನಪ್ಪಿದ್ದಾರೆ ಎಂದು ಫೋಟೋಗಳ ಮೇಲೆ ಬರೆಯಲಾಗಿದೆ. ಈ ಬಗ್ಗೆ ಕೆಲ ಯೂಟ್ಯೂಬ್ ವಾಹಿನಿಗಳು ಕೂಡ ಸುದ್ದಿ ಪ್ರಸಾರ ಮಾಡಿದೆ.

ಸುಳ್ಳು ಸುದ್ದಿಯ ಬಗ್ಗೆ ಮಾಹಿತಿ ಪಡೆದು ರೈನಾ ಸಾಮಾಜಿಕ ಜಾಲತಾಣದಲ್ಲಿ ಸಮಾಧಾನ ವ್ಯಕ್ತಪಡಿಸಿ ಸ್ಪಷ್ಟನೆ ನೀಡಿದ್ದಾರೆ. ಇಂತಹ ಸುಳ್ಳು ಸುದ್ದಿಗಳನ್ನು ನಿರ್ಲಕ್ಷ್ಯ ಮಾಡಿ ಎಂದು ಟ್ವೀಟ್ ಮಾಡಿರುವ ರೈನಾ, ನಮ್ಮ ಕುಟುಂಬ ಸದಸ್ಯರು ಸಾಕಷ್ಟು ನೋವುಂಡಿದ್ದಾರೆ. ಈ ಸುಳ್ಳು ಸುದ್ದಿಯನ್ನ ಪ್ರಸಾರ ಮಾಡಿದ ಯೂಟ್ಯೂಬ್ ಮಾಹಿನಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಕಳೆದ ಇಂಗ್ಲೆಂಡ್ ಟೂರ್ನಿಯ ಸಿಮೀತ ಓವರ್ ಗಳ ಪಂದ್ಯದಲ್ಲಿ ರೈನಾ ಆಡಲು ಅವಕಾಶ ಪಡೆದರೂ ಕೂಡ ಕಮ್ ಬ್ಯಾಕ್ ಮಾಡಲು ವಿಫಲರಾಗಿದ್ದರು. ಸದ್ಯ ಪರಿಸ್ಥಿತಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ರೈನಾ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗುವ ಅವಕಾಶಗಳು ಕಡಿಮೆಯಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Leave a Reply

Your email address will not be published. Required fields are marked *