Connect with us

Cricket

ರೈನಾ ಹೊರಬಂದಿರುವುದು ಧೋನಿಗೆ ಒಳ್ಳೆಯ ಅವಕಾಶ: ಗಂಭೀರ್

Published

on

ನವದೆಹಲಿ: ರೈನಾ ಐಪಿಎಲ್‍ನಿಂದ ಹೊರಬಂದಿರುವುದು ಧೋನಿಗೆ ಮೂರನೇ ಕ್ರಮಾಂಕದಲ್ಲಿ ಆಡಲು ಒಳ್ಳೆಯ ಅವಕಾಶ ಎಂದು ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

ಕೆಲ ವೈಯಕ್ತಿಕ ಕಾರಣಗಳಿಂದ ಸುರೇಶ್ ರೈನಾ ಅವರು, ಐಪಿಎಲ್-2020ಯಿಂದ ಹೊರಬಂದಿದ್ದಾರೆ. ಐಪಿಎಲ್‍ನಲ್ಲಿ ಭಾಗವಹಿಸಲು ಅಗಸ್ಟ್ 21ರಂದು ಯುಎಇಗೆ ತೆರಳಿದ್ದ ರೈನಾ, ಕಳೆದ ಮೂರು ದಿನಗಳ ಹಿಂದೆ ಭಾರತಕ್ಕೆ ವಾಪಸ್ ಬಂದಿದ್ದರು. ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಯಾರೂ ಮೂರನೇ ಕ್ರಮಾಂಕದಲ್ಲಿ ಆಡಬೇಕು ಎಂಬ ವಿಚಾರ ಬಹಳ ಚೆರ್ಚೆಯಾಗುತ್ತಿದೆ.

ಈ ವಿಚಾರವಾಗಿ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಗಂಭೀರ್, ರೈನಾ ಐಪಿಎಲ್‍ನಿಂದ ಹೊರಬಂದಿರುವುದು ಧೋನಿಗೆ ಮೂರನೇ ಕ್ರಮಾಂಕದಲ್ಲಿ ಆಡಲು ಒಳ್ಳೆಯ ಅವಕಾಶ. ಇದನ್ನು ಧೋನಿಯವರು ಬಳಸಿಕೊಳ್ಳಲಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಈಗ ರೈನಾ ಟೂರ್ನಿ ಆಡುತ್ತಿಲ್ಲ. ಮೂರನೇ ಕ್ರಮಾಂಕದಲ್ಲಿ ಅನುಭವಿ ಆಟಗಾರ ಬ್ಯಾಟ್ ಮಾಡಬೇಕಿದೆ. ಹೀಗಾಗಿ ಈ ಸ್ಥಾನವನ್ನು ಧೋನಿ ತುಂಬಿದರೆ ಒಳ್ಳೆಯದು ಎಂದು ತಿಳಿಸಿದ್ದಾರೆ.

ಧೋನಿ ಕಳೆದ ಒಂದು ವರ್ಷದಿಂದ ಕ್ರಿಕೆಟ್‍ನಿಂದ ದೂರವಿದ್ದಾರೆ. ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಆಡಿದರೆ ಹೆಚ್ಚು ಬಾಲ್ ಎದುರಿಸಬಹುದು. ಜೊತೆಗೆ ಒಳ್ಳೆಯ ಇನ್ನಿಂಗ್ಸ್ ಕಟ್ಟುವ ನಿಟ್ಟಿನಲ್ಲಿ ಬ್ಯಾಟ್ ಬೀಸಬಹುದು. ಧೋನಿ ಮೂರನೇ ಕ್ರಮಾಂಕದಲ್ಲಿ ಆಡಿದರೆ, ಅವರ ನಂತರ ಬಂದು ಮ್ಯಾಚ್ ಫಿನಿಶ್ ಮಾಡುವ ಆಟಗಾರರು ಇದ್ದಾರೆ. ಧೋನಿ ನಂತರ ಕೇದಾರ್ ಜಾಧವ್, ಡ್ವೇನ್ ಬ್ರಾವೋ ಮತ್ತು ಸ್ಯಾಮ್ ಕರ್ರನ್ ಬಂದು ಮ್ಯಾಚ್ ಫಿನಿಶ್ ಮಾಡುತ್ತಾರೆ ಎಂದು ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಪಿಎಲ್-2020 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರ ನಡುವೆ ಕೊರೊನಾ ಕೆರಿನೆರಳು ದೂರದ ಯುಎಇಯಲ್ಲೂ ಐಪಿಎಲ್ ಮೇಲೆ ಬಿದ್ದಿದೆ. ಇತ್ತೀಚೆಗಷ್ಟೆ ಚೆನ್ನೈ ತಂಡದ ಇಬ್ಬರು ಆಟಗಾರರು ಸೇರಿದಂತೆ 13 ಮಂದಿಗೆ ಕೊರೊನಾ ಸೋಂಕು ತಗಲುಲಿದೆ. ಈ ನಡುವೆ ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ಐಪಿಎಲ್‍ನಿಂದ ಹೊರಕ್ಕೆ ಬಂದಿದ್ದಾರೆ. ಇದು ಚೆನ್ನೈ ತಂಡದ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಸೆಪ್ಟಂಬರ್ 19ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ.

Click to comment

Leave a Reply

Your email address will not be published. Required fields are marked *