ಹಾಸನ: ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನಡೆದ ನಡೆದ ಚುನಾವಣೆಯಲ್ಲಿ ಹಾಸನದಲ್ಲಿ ಎಚ್.ಡಿ.ರೇವಣ್ಣ ಅವರ ಪುತ್ರ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದಾರೆ.
ದೇವೇಗೌಡರ ಎರಡನೇ ಮೊಮ್ಮಗ ವಿಧಾನಸೌಧವನ್ನು ಪ್ರವೇಶಿಸಿದ್ದಾರೆ. 1,433 ಮತಗಳ ಅಂತರದಿಂದ ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ 731 ಹಾಗೂ ಬಿಜೆಪಿ ಅಭ್ಯರ್ಥಿ 354 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಇದನ್ನೂ ಓದಿ: ಇಂದು ಪರಿಷತ್ ಚುನಾವಣೆ ಫಲಿತಾಂಶ – 3 ಪಕ್ಷಗಳಿಗೆ ಪ್ರತಿಷ್ಠೆಯ ಸಮರ
ವಿಧಾನ ಪರಿಷತ್ನ 25 ಕ್ಷೇತ್ರಗಳಿಗೆ ಡಿ.10ರಂದು ಮತದಾನ ನಡೆದಿತ್ತು. ಇಂದು ಮತಗಳ ಎಣಿಕೆ ನಡೆಯುತ್ತಿದ್ದು, ಹಾಸನದಲ್ಲಿ ಸೂರಜ್ ರೇವಣ್ಣ ಜಯಗಳಿಸುವ ಮೂಲಕ ಜೆಡಿಎಸ್ಗೆ ಗೆಲುವಿನ ಖಾತೆ ತೆರೆದಿದ್ದಾರೆ. ಜೆಡಿಎಸ್ನ ಮೊದಲ ಗೆಲುವು ಇವರದ್ದೇ ಆಗಿದೆ. ಇದನ್ನೂ ಓದಿ: ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ: ಬೊಮ್ಮಾಯಿ