ಟ್ರೂ ಕಾಲರ್ ವಿರುದ್ಧ ಅರ್ಜಿ – ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್

Advertisements

ನವದೆಹಲಿ: ಜನರ ವೈಯಕ್ತಿಕ ಡೇಟಾವನ್ನು ಅವರ ಅನುಮತಿಯಿಲ್ಲದೆ ಬಳಸಲಾಗುತ್ತಿದೆ. ಹೀಗಾಗಿ ಟ್ರೂ ಕಾಲರ್ ಮೊಬೈಲ್ ಅಪ್ಲಿಕೇಶನ್ ನಿಷೇಧಿಸಬೇಕು ಎಂದು ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

Advertisements

ಅಂಕಿತ್ ಸೇಥಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ.ಯು.ಯು ಲಲಿತ್ ನೇತೃತ್ವದ ತ್ರಿಸದಸ್ಯ ಪೀಠ, ಮೊಬೈಲ್ ಆ್ಯಪ್ ಬ್ಯಾನ್ ಮಾಡುವುದು ಕೋರ್ಟ್ ಕೆಲಸವಲ್ಲ ಎಂದರು. ಹೀಗೆ ಅರ್ಜಿಗಳನ್ನು ವಿಚಾರಣೆ ನಡೆಸಲು ಆರಂಭಿಸಿದರೇ ಇಂತಹ ಎಷ್ಟು ಅಪ್ಲಿಕೇಶನ್‍ಗಳ ವಿರುದ್ಧ ಅರ್ಜಿಗಳನ್ನು ಪರಿಗಣಿಸಬಹುದು ಎಂದು ಮತ್ತೋರ್ವ ನ್ಯಾಯಮೂರ್ತಿ ಭಟ್ ಪ್ರಶ್ನಿಸಿದರು. ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿಗೆ ಅವಕಾಶ – ನಾಳೆ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ

Advertisements

ಅಪರಿಚಿತ ಸಂಖ್ಯೆಯಿಂದ ಕರೆ ಸ್ವೀಕರಿಸಿದಾಗ ಕರೆ ಮಾಡುವವರ ಗುರುತನ್ನು Truecaller ಅಪ್ಲಿಕೇಶನ್ ಪ್ರದರ್ಶಿಸುತ್ತದೆ. ಇದು ಕರೆ ಸ್ವೀಕರಿಸುವವರಿಗೆ ಕರೆಗೆ ಬಂದಾಗ, ಕರೆ ಮಾಡಿದವರು ಯಾರೆಂದು ತಿಳಿಯಲು ಸಹಾಯ ಮಾಡುತ್ತದೆ. ಇದಕ್ಕಾಗಿ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದರು. ಇದನ್ನೂ ಓದಿ: ಪೊಲೀಸರ ಬೆಂಗಾವಲಿನಲ್ಲಿ ಮಠಕ್ಕೆ ವಾಪಸ್ಸಾಗ್ತಿದ್ದೇನೆ: ಮುರುಘಾ ಶ್ರೀ

Advertisements

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ. ಯು.ಯು ಲಲಿತ್, ಇಂತಹ ಅಪ್ಲಿಕೇಶನ್‍ಗಳನ್ನು ಮುಚ್ಚುವುದು ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ, ಇದು ಉನ್ನತ ನ್ಯಾಯಾಲಯದ ಹಸ್ತಕ್ಷೇಪಕ್ಕೆ ಯೋಗ್ಯವಾದ ಪ್ರಕರಣವಲ್ಲ ಎಂದು ಸಿಜೆಐ ಹೇಳಿದ್ದರು, ನಂತರ ಅರ್ಜಿದಾರರು ಅರ್ಜಿಯನ್ನು ಹಿಂಪಡೆದುಕೊಂಡರು.

Live Tv

Advertisements
Exit mobile version