ನವದೆಹಲಿ: ಸಾಂವಿಧಾನಿಕ ಪ್ರಾಮುಖ್ಯತೆ ಹೊಂದಿರುವ ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯದ ಕಲಾಪಗಳನ್ನು ಮಾಧ್ಯಮಗಳಲ್ಲಿ ನೇರಪ್ರಸಾರ ಮಾಡಲು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿದೆ.
ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಸ್ವಪ್ನೀಲ್ ತ್ರಿಪಾಟಿ ಸೇರಿದಂತೆ ಅನೇಕ ವಕೀಲರು ನ್ಯಾಯಾಲಯದ ಕಲಾಪಗಳ ನೇರ ಪ್ರಸಾರ ಮಾಡುವ ಸಂಬಂಧ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ತ್ರಿಸದನ ನ್ಯಾಯಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.
Advertisement
ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗಳನ್ನು ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡಲು ತ್ರಿಸದನ ಪೀಠ ಸಮ್ಮತಿಸಿದೆ. ಅಲ್ಲದೇ ನೇರ ಪ್ರಸಾರ ಅನುಷ್ಠಾನಕ್ಕೆ ಅನುಸರಿಸಬೇಕಾದ ನಿಯಾಮಳಿವಳಿಗಳನ್ನು ಶೀಘ್ರವೇ ರೂಪಿಸುಂತೆ ಸರ್ಕಾರಕ್ಕೆ ಸೂಚಿನೆ ನೀಡಿದೆ.
Advertisement
Advertisement
ಸೂರ್ಯನ ಕಿರಣವೇ ಉತ್ತಮ ಕೀಟನಾಶಕ ಎಂಬಂತೆ, ಜನ ನೇರವಾಗಿ ಕೋರ್ಟ್ ನಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ. ಈ ಮೂಲಕ ಇಲ್ಲಸಲ್ಲದ ಊಹಾ-ಪೋಹಗಳನ್ನು ತಡೆಯಬಹುದಾಗಿದೆ. ಕೋರ್ಟ್ ಕಲಾಪ ನೇರ ಪ್ರಸಾರ ಸಂಬಂಧ ಸಾರ್ವಜನಿಕ ಹಕ್ಕುಗಳ ಸಮತೋಲನಕ್ಕೆ ಅಗತ್ಯ ನಿಯಮಗಳು ಮತ್ತು ದೂರುದಾರರ ಘನತೆಯನ್ನು ರಕ್ಷಿಸುವ ಕುರಿತು ಶೀಘ್ರ ನಿಯಮ ರಚನೆಯಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.
Advertisement
ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಮತ್ತು ಪಾರದರ್ಶಕತೆಯ ಕಾರಣಕ್ಕೆ ಕೋರ್ಟ್ ಕಲಾಪಗಳ ನೇರ ಪ್ರಸಾರಕ್ಕೆ ಅನುಮತಿ ನೀಡುತ್ತಿದೆ. ಆದರೆ ಅತ್ಯಾಚಾರ, ವೈವಾಹಿಕ ಮತ್ತಿತರ ವಿಚಾರಗಳಲ್ಲಿನ ಗೌಪ್ಯ ವಿಚಾರಣೆ ಹೊರತುಪಡಿಸಿ ನ್ಯಾಯಾಲಯ ಕಲಾಪಗಳ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ. ಸದ್ಯ ಪ್ರಾರಂಭಿಕವಾಗಿ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಸಾಂವಿಧಾನಿಕ ಪ್ರಾಮುಖ್ಯತೆಯ ಪ್ರಕರಣಗಳ ಕಲಾಪದ ವೇಳೆ ಜಾರಿಯಾಗಲಿದೆ. ಈ ನ್ಯಾಯಪೀಠದಲ್ಲಿ ಯೋಜನೆ ಯಶಸ್ವಿನ ಆಧಾರದ ಮೇಲೆ ಇತರೆ ನ್ಯಾಯಲಯಗಳಿಗೂ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದೆ.
Supreme Court allows live streaming of court proceedings, says, 'it will start from the Supreme Court. Rules have to be followed for this. Live streaming of court proceedings will bring accountability into the judicial system." pic.twitter.com/UAWZVV9DcA
— ANI (@ANI) September 26, 2018
ಈ ಮೊದಲು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ನ್ಯಾಯಪೀಠವು ನೇರ ಪ್ರಸಾರ ಸಂಬಂಧ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಸಹಕಾರವನ್ನು ಕೇಳಿತ್ತು. ಅರ್ಜಿದಾರರ ಮನವಿಗಳ ಸಂಬಂಧ ವೇಣುಗೋಪಲ್ರವರು ನೇರ ಪ್ರಸಾರದ ಪ್ರಸ್ತಾವನೆಯ ಅನುಷ್ಠಾನಕ್ಕಾಗಿ ಕೆಲವು ನಿಯಮಗಳನ್ನು ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವೇಣುಗೋಪಾಲ್ರವರು ರೂಪಿಸಿದ್ದ ನಿಯಾಮಾಳಿಗಳನ್ನು ಆಗಸ್ಟ್ 24 ರಂದು ಆಲಿಸಿದ್ದ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಅಂತರಾಷ್ಟ್ರೀಯ ಕೋರ್ಟ್ ನಲ್ಲಿ ನಡೆಯುವ ಕಲಾಪಗಳು ನೇರ ಪ್ರಸಾರವಾಗುತ್ತದೆ. 2015 ರ ಡಿಸೆಂಬರ್ ನಲ್ಲಿ ದಕ್ಷಿಣ ಆಫ್ರಿಕಾದ ಕೋರ್ಟ್ ರೂಪದರ್ಶಿ ಸ್ನೇಹಿತೆ ರೀವಾ ಸ್ಟಿಂಕಾಂಪ್ ಕೊಲೆ ಪ್ರಕರಣದಲ್ಲಿ ಸ್ನೇಹಿತ ಪ್ಯಾರಾ ಒಲಂಪಿಯನ್ ಆಸ್ಕರ್ ಪಿಸ್ಟೊರಿಯಸ್ ದಂಡನೀಯ ನರಹತ್ಯೆಯ ಅಪರಾಧಿ ಎಂದು ತೀರ್ಪು ನೀಡಿತ್ತು. ಈ ಪ್ರಕರಣದ ವಿಚಾರಣೆ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಹೀಗಾಗಿ ನಮ್ಮಲ್ಲೂ ಯಾಕೆ ಕೋರ್ಟ್ ಕಲಾಪಗಳನ್ನು ಪ್ರಸಾರ ಮಾಡಬಾರದು ಎನ್ನುವ ಎನ್ನುವ ಚರ್ಚೆ ಮತ್ತೆ ಆರಂಭಗೊಂಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv