Connect with us

ಬೃಹತ್ ಪೈಪ್ ಬಿದ್ದು ಸೂಪರ್ ವೈಸರ್ ಸಾವು

ಬೃಹತ್ ಪೈಪ್ ಬಿದ್ದು ಸೂಪರ್ ವೈಸರ್ ಸಾವು

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ನೀರು ಪೊರೈಕೆ ಮಾಡುವ ಕಾಮಗಾರಿಯ ಪೈಪಲೈನ್ ನ ಬೃಹತ್ ಪೈಪ್ ಬಿದ್ದು ಕಾಮಗಾರಿ ನೋಡಿಕೊಳ್ಳುತ್ತಿದ್ದ ಸೂಪರ್ ವೈಸರ್ ಸಾವನ್ನಪ್ಪಿದ ಘಟನೆ ನಡೆದಿದೆ.

ನಗರದಲ್ಲಿ ನಡೆಯುತ್ತಿರುವ ನೀರು ಪೊರೈಕೆ ಕಾಮಗಾರಿಯ ಪೈಪ್ ಲೈನ್ ಜೋಡಣೆಗಾಗಿ ಎಪಿಎಂಸಿಯಲ್ಲಿ ಬೃಹತ್ ಪೈಪ್ ಗಳನ್ನು ಸಂಗ್ರಹಿಸಿಡಲಾಗುತ್ತಿದೆ. ಇಂದು ಲಾರಿಯಲ್ಲಿ ಬಂದ ಪೈಪ್ ಗಳನ್ನು ಇಳಿಸುವ ವೇಳೆ ಕಾಮಗಾರಿ ನೋಡಿಕೊಳ್ಳುತ್ತಿದ್ದ ಸೂಪರ್ ವೈಸರ್ ಮೇಲೆ ಬೃಹತ್ ಪೈಪ್ ಬಿದ್ದಿದೆ. ಪರಿಣಾಮ ಸೂಪರ್ ವೈಸರ್ ವಿಜಯಾನಂದ ಹದ್ದಣ್ಣನವರ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: 1200 ರೂಪಾಯಿಗೆ ಡಿಎಪಿ ಗೊಬ್ಬರ – ಜೋಶಿ ಮನವಿಗೆ ಸ್ಪಂದಿಸಿದ ಸರ್ಕಾರ

ವಿಜಯಾನಂದ ಹದ್ದಣ್ಣನವರ ಮೇಲೆ ಪೈಪ್ ಬೀಳುತ್ತಿದ್ದಂತೆ ತೀವ್ರವಾಗಿ ಗಾಯಗೊಂಡಿದ್ದು, ಬಳಿಕ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸೂಪರ್ ವೈಸರ್ ಸಾವಿಗೀಡಾಗಿದ್ದಾರೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಎಪಿಎಂಸಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Advertisement
Advertisement