Connect with us

Latest

ಹೈದರಾಬಾದಿಗೆ 88 ರನ್‌ಗಳ ಭರ್ಜರಿ ಜಯ – ರೋಚಕ ಘಟ್ಟ ತಲುಪಿದ ಪ್ಲೇ ಆಫ್‌ ರೇಸ್‌

Published

on

– 2ನೇ ಸ್ಥಾನಕ್ಕೆ ಏರಿದ ಬೆಂಗಳೂರು
– 7ನೇ ಸ್ಥಾನಕ್ಕೆ ಜಾರಿದ ರಾಜಸ್ಥಾನ

ದುಬೈ: ಡೆಲ್ಲಿ ವಿರುದ್ಧ ಹೈದರಾಬಾದ್‌ 88 ರನ್‌ಗಳ ಭರ್ಜರಿ ಜಯ ಸಾಧಿಸಿದ್ದರಿಂದ ಐಪಿಎಲ್‌ ಪ್ಲೇ ಆಫ್‌ ರೇಸ್‌ ಈಗ ರೋಚಕ ಘಟಕ್ಕೆ ತಲುಪಿದೆ. 10 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಜಿಗಿದಿರುವ ಹೈದರಾಬಾದ್‌ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿದೆ.

ಗೆಲ್ಲಲು 220 ರನ್‌ಗಳ ಕಠಿಣ ಗುರಿಯನ್ನು ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ 19 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟ್‌ ಆಯ್ತು. ಯಾವುದೇ ಹಂತದಲ್ಲಿ ಹೋರಾಟ ನೀಡದ ಪರಿಣಾಮ ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿಯಿತು.

ಡೆಲ್ಲಿ ಪರ ರಿಷಬ್‌ ಪಂತ್‌ 36 ರನ್‌ ಹೊಡೆದರೆ ಆರಂಭಿಕ ಆಟಗಾರ ಅಜಿಂಕ್ಯಾ 26 ರನ್‌ ಹೊಡೆದರು. ಸ್ಪಿನ್ನರ್‌ ರಶೀದ್‌ ಖಾನ್‌ 4 ಓವರ್‌ ಮಾಡಿ 7 ರನ್‌ ನೀಡಿ 3 ವಿಕೆಟ್‌ ಪಡೆದರು. ನಟರಾಜನ್‌ ಮತ್ತು ಸಂದೀಪ್‌ ಶರ್ಮಾ ತಲಾ 2 ವಿಕೆಟ್‌ ಪಡೆದರು.

ಒಂದು ವೇಳೆ ಇಂದು ಡೆಲ್ಲಿ ಗೆದ್ದಿದ್ದರೆ ಪ್ಲೇ ಆಫ್‌ ಪ್ರವೇಶಿಸಿದ ಮೊದಲ ತಂಡವಾಗುತ್ತಿತ್ತು. ಆದರೆ ಇಂದು ಸೋತಿದ್ದರಿಂದ ಪ್ಲೇ ಆಫ್‌ ಪ್ರವೇಶಿಸುವ ಮೊದಲ ತಂಡ ಯಾವುದು ಎನ್ನುವುದು ಬುಧವಾರ ನಿರ್ಧಾರವಾಗಲಿದೆ. ಇದನ್ನೂ ಓದಿ: ಓವರಿಗೆ 22 ರನ್‌ ಚಚ್ಚಿದ ವಾರ್ನರ್‌ – ಪವರ್‌ ಪ್ಲೇನಲ್ಲಿ ದಾಖಲೆ ಬರೆದ ಹೈದರಾಬಾದ್‌

ಅಂಕಗಳು ಹೇಗಿದೆ?
ಡೆಲ್ಲಿ 12 ಪಂದ್ಯಗಳಿಂದ 14 ಅಂಕಗಳಿಸಿದರೆ ಮುಂಬೈ ಮತ್ತು ಬೆಂಗಳೂರು 11 ಪಂದ್ಯಗಳಿಂದ 14 ಅಂಕಗಳಿಸಿದೆ. ಬುಧವಾರ ಮುಂಬೈ ಮತ್ತು ಬೆಂಗಳೂರು ಮಧ್ಯೆ ಪಂದ್ಯ ನಡೆಯಲಿರುವ ಕಾರಣ ವಿಜೇತ ತಂಡ ಪ್ಲೇ ಆಫ್‌ ಪ್ರವೇಶಿಸಲಿದೆ. ಈ ಮೂರು ತಂಡಗಳು ಒಂದು ಪಂದ್ಯ ಗೆದ್ದು ಉತ್ತಮ ರನ್‌ ರೇಟ್‌ ಹೊಂದಿದರೆ ಖಚಿತವಾಗಿ ಪ್ಲೇ ಆಫ್‌ಗೆ ಎಂಟ್ರಿಯಾಗಲಿದೆ.

ಉಳಿದಂತೆ ಪಂಜಾಬ್‌ ಮತ್ತು ಕೋಲ್ಕತ್ತಾ 12 ಪಂದ್ಯಗಳಿಂದ 12 ಅಂಕ ಗಳಿಸಿದರೆ ಹೈದರಾಬಾದ್‌ ಮತ್ತು ರಾಜಸ್ಥಾನ 12 ಪಂದ್ಯಗಳಿಂದ 10 ಅಂಕ ಪಡೆದಿದೆ. 12 ಪಂದ್ಯಗಳಿಂದ 8 ಅಂಕ ಗಳಿಸಿರುವ ಚೆನ್ನೈ ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಔಟ್‌ ಆಗಿದೆ.

ಹೈದರಾಬಾದ್‌ಗೆ ಅವಕಾಶ:
ಪಂಜಾಬ್‌, ಕೋಲ್ಕತ್ತಾ, ರಾಜಸ್ಥಾನಕ್ಕೆ ಹೋಲಿಸಿದರೆ ಹೈದರಾಬಾದ್‌ ನೆಟ್‌ ರನ್‌ ರೇಟ್‌ ಉತ್ತಮವಾಗಿದೆ. ಪಂಜಾಬ್‌ -0.049, ಕೋಲ್ಕತ್ತಾ -0.479, ರಾಜಸ್ಥಾನ -0.505 ನೆಟ್‌ ರನ್‌ ರೇಟ್‌ ಹೊಂದಿದೆ. ಇಂದಿನ ಪಂದ್ಯಕ್ಕೂ ಮುನ್ನ ಹೈದರಾಬಾದ್‌ ನೆಟ್‌ ರನ್‌ ರೇಟ್‌ +0.029 ಇತ್ತು. ಈಗ ಇದು +0.396ಕ್ಕೆ ಏರಿಕೆಯಾಗಿದೆ. ಡೆಲ್ಲಿ ತಂಡ +0.434 ನೆಟ್‌ ರನ್‌ ರೇಟ್‌ ಹೊಂದಿತ್ತು. ಇಂದಿನ ಹೀನಾಯ ಸೋಲಿನಿಂದ ಈಗ +0.030 ರನ್‌ ರೇಟ್‌ಗೆ ಜಾರಿದೆ.

Click to comment

Leave a Reply

Your email address will not be published. Required fields are marked *

www.publictv.in