Wednesday, 22nd January 2020

Recent News

ಸನ್ನಿ ಲಿಯೋನ್‍ಗೆ ಇನ್‍ಸ್ಟಾದಲ್ಲಿ ಎರಡೂವರೆ ಕೋಟಿ ಫಾಲೋವರ್ಸ್!

ಮುಂಬೈ: ಬಾಲಿವುಡ್ ಸನ್ನಿ ಲಿಯೋನ್ ಅವರು ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ 25 ಮಿಲಿಯನ್ (2.5 ಕೋಟಿ) ಫಾಲೋವರ್ಸ್ ಹೊಂದಿದ್ದು, ಈ ಕುರಿತು ಸಂತಸ ವ್ಯಕ್ತಪಡಿಸಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಂತರ್ಜಾಲದಲ್ಲಿ ಅತಿ ಹೆಚ್ಚು ಹುಡುಕಾಡಿದ ನಟಿ ಎಂಬ ಹೆಗ್ಗಳಿಕೆಗೆ ಕಾರಣರಾಗಿದ್ದ ಸನ್ನಿ ಲಿಯೋನ್ ಅಭಿಮಾನಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ವಿಡಿಯೋ ಬಿಡುಗಡೆ ಮಾಡಿರುವ ಸನ್ನಿ, 25 ಮಿಲಿಯನ್ ಮಂದಿ ಇನ್‍ಸ್ಟಾಗ್ರಾಮ್ ಕುಟುಂಬವನ್ನು ಗಳಿಸಿದ್ದು, ಮತ್ತಷ್ಟು ಬಲಶಾಲಿ ಆಗಲು ಕಾರಣವಾಗಿದ್ದೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

ಸದ್ಯ ವಿವಿಧ ಸಿನಿಮಾಗಳಲ್ಲಿ ನಟಿಸುತ್ತಿರುವ ಸನ್ನಿ ಲಿಯೋನ್ ಅವರು ತಮಿಳಿನ ‘ವೀರಾ ಮಹಾದೇವಿ’ ಸಿನಿಮಾ ಮೂಲಕ ಐತಿಹಾಸಿಕ ಪಾತ್ರವನ್ನು ನಿರ್ವಹಿಸಿದ್ದಾರೆ. ಅಲ್ಲದೇ ‘ಹೆಲೆನ್’, ‘ಕೋಕಾ ಕೋಲಾ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗಿರುವ ಸನ್ನಿ ಲಿಯೋನ್ ವಿಭಿನ್ನ ಡ್ರೆಸ್ ನಲ್ಲಿ ಫೋಟೋ ಶೂಟ್ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಇತ್ತೀಚೆಗೆ ಪಿಂಕ್ ಡ್ರೆಸ್ ತೊಟ್ಟು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಇತ್ತ ರಕ್ಷಾ ಬಂಧನ ದಿನದಂದು ರಿಯಾಲಿಟಿ ಶೋ ಜಡ್ಜ್ ರನವಿಜಯ್ ಸಂಘಾ ಅವರಿಗೆ ರಾಖಿ ಕಟ್ಟಿದ್ದ ಸನ್ನಿ ಲಿಯೋನ್, ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದರು. ಈ ಪೋಸ್ಟ್ ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿ ಅಣ್ಣ-ತಂಗಿ ಇಬ್ಬರಿಗೂ ರಕ್ಷಾ ಬಂಧನದ ಶುಭಾಶಯ, ಇದಕ್ಕಿಂತ ಅತ್ಯುತ್ತಮ ಫೋಟೋ ಮತ್ತೊಂದಿಲ್ಲ ಎಂದಿದ್ದರು.

Leave a Reply

Your email address will not be published. Required fields are marked *