Connect with us

Cinema

ಒಂಟಿಯಾಗಿ ಬೀದಿ ಸುತ್ತಿದ್ರೂ ನಾನು ಅಂತಾ ಯಾರಿಗೂ ಗೊತ್ತಾಗಿಲ್ಲ: ಸನ್ನಿ ಲಿಯೋನ್

Published

on

Share this

ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಬೀದಿ ಸುತ್ತಿದ್ರೂ ಅವರನ್ನು ಯಾರು ಸನ್ನಿ ಲಿಯೋನ್ ಎಂದು ಗುರುತಿಸಲಿಲ್ಲ ಎಂದು ಅವರೇ ಹೇಳಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಾಸ್ಕ್, ತಲೆಗೆ ಕ್ಯಾಪ್ ತೊಟ್ಟ ನಾನೇನು ಕಳ್ಳತನ ಮಾಡಲು ಹೊರಗಡೆ ಹೋಗಿರಲಿಲ್ಲ. ನನ್ನ ಪತಿ ಡೆನಿಯಲ್ ವೆಬರ್‍ ಗೆ ಆರೋಗ್ಯ ಸರಿ ಇರಲಿಲ್ಲ. ಈ ಕಾರಣಕ್ಕಾಗಿ ನಾನು ಮಾತ್ರೆ ತರಲು ಹೊರಗಡೆ ಹೋಗಿದ್ದೆ. ನನ್ನ ಪತಿ ಚಿಕನ್ ತಿನ್ನೋದು ಬಿಟ್ಟು ತರಕಾರಿ ತಿನ್ನಲು ಶುರು ಮಾಡಬೇಕು. ನನ್ನನ್ನು ಸನ್ನಿ ಲಿಯೋನ್ ಎಂದು ಹೊರಗಡೆ ಯಾರು ಗುರುತಿಸಿಲ್ಲ ಎಂದು ಇನ್‍ಸ್ಟಾಗ್ರಾಮ್ ವೀಡಿಯೋ ಒಂದನ್ನು ಹಂಚಿಕೊಂಡಿದ್ದರೆ.

 

View this post on Instagram

 

A post shared by Sunny Leone (@sunnyleone)

ಸನ್ನಿ ಪಡ್ಡೆ ಹೈಕ್ಳ ಪಾಲಿಗೆ ನಿದ್ದೆ ಕಡೆಸಿರುವ ಚೆಲುವೆಯಾಗಿದ್ದಾರೆ. 2011 ರಲ್ಲಿ ಹಿಂದಿ ಬಿಗ್‍ಬಾಸ್ ಮನೆಗೆ ಅತಿಥಿಯಾಗಿ ಬಂದಿದ್ದರು. ನಂತರ ಸನ್ನಿ ಲಿಯೋನ್ ರಾಗಿಣಿ ಎಮ್‍ಎಮ್‍ಎಸ್ ಚಿತ್ರದ ಮೂಲಕವಾಗಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟರು. ಮೊದಲು ಅವಮಾನಗಳನ್ನು ಕಂಡರು. ನಂತರ ದಿನಗಳಲ್ಲಿ ಸನ್ನಿ ಲಿಯೋನ್ ಸಿನಿಮಾ ರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement