Sunday, 19th August 2018

ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಮೆಸ್ಸಿ ಸಾಧನೆ ಸರಿಗಟ್ಟಿದ ಸುನಿಲ್ ಚೆಟ್ರಿ

ಮುಂಬೈ: ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಅತಿಹೆಚ್ಚು ಗೋಲ್ ಬಾರಿಸಿ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತ ಹಾಗೂ ಕೀನ್ಯಾ ಗಳ ಮಧ್ಯೆ ನಡೆದ ಇಂಟರ್ ಕಾಂಟಿನೆಂಟಲ್ ಅಂತರಾಷ್ಟ್ರೀಯ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಸುೀಲ್ ಚೆಟ್ರಿ ಎರಡು ಗೋಲುಗಳನ್ನು ಬಾರಿಸುವ ಮೂಲಕ ಭಾರತ ತಂಡದ ವಿಜಯಕ್ಕೆ ಕಾರಣಾದರು. ಅಲ್ಲದೇ ಈ ಪಂದ್ಯದಲ್ಲಿ ಚೆಟ್ರಿ ಬಾರಿಸಿದ ಎರಡು ಗೋಲುಗಳಿಂದ ಅರ್ಜಂಟಿನಾ ತಂಡದ ಲಿಯೋನಲ್ ಮೆಸ್ಸಿ ಅವರ ಗೋಲುಗಳಿಗೆ ಸಮನಾಗಿದ್ದು ಸಕ್ರಿಯ ಆಟಗಾರರ ಪೈಕಿ ಎರಡನೇ ಅತಿಹೆಚ್ಚು ಗೋಲು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳಲ್ಲಿ ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡೊ ಸಕ್ರಿಯ ಆಟಗಾರರ ಪೈಕಿ ಅಗ್ರ ಸ್ಥಾನದಲ್ಲಿದ್ದು 150 ಪಂದ್ಯಗಳನ್ನಾಡಿ 81 ಗೋಲುಗಳನ್ನು ಬಾರಿಸಿದ್ದಾರೆ. ಸುನೀಲ್ ಚೆಟ್ರಿ 102 ಪಂದ್ಯಗಳನ್ನಾಡಿ ಈ ಸಾಧನೆ ಮಾಡಿದ್ದರೆ, ಲಿಯೋನಲ್ ಮೆಸ್ಸಿ 124 ಪಂದ್ಯಗಳನ್ನಾಡಿ ಈ ಗೋಲುಗಳಿಗೆ ಸಮನಾದ ಗೋಲು ಬಾರಿಸಿದ್ದಾರೆ. ಈ ಮೂಲಕ ಗೋಲ್ ಸ್ಕೋರ್ ಪಟ್ಟಿಯಲ್ಲಿ 21 ಸ್ಥಾನದಲ್ಲಿದ್ದಾರೆ.

ಚೆಟ್ರಿ ಪಂದ್ಯಕ್ಕೂ ಮೊದಲು ಅಭಿಮಾನಿಗಳಿಗೆ ಪ್ರೋತ್ಸಾಹ ನೀಡುವಂತೆ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದರು. ಅಲ್ಲದೇ ಮೆಸ್ಸಿ ಗೋಲುಗಳಿಗೆ ಹೋಲಿಕೆ ಮಾಡಿ ಪ್ರೋತ್ಸಾಹಿಸಿದ್ದ ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ಮೂಲಕ ಧನ್ಯವಾದ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಸಿದ ಚಟ್ರಿ ನಾನು ಮೆಸ್ಸಿಯವರಿಗೆ ಸಮನಲ್ಲ. ಅವರೊಂದಿಗೆ ಯಾವುದೇ ಹೋಲಿಕೆ ಇಲ್ಲ. ನಾನೊಬ್ಬ ಅವರ ಅಭಿಮಾನಿ. ದೇಶದ ಗೆಲುವಿಗಾಗಿ ಗೋಲು ಬಾರಿಸುತ್ತಿರುವುದು ಸಂತೋಷ ತಂದಿದೆ. ನಾವಿನ್ನೂ ಬೆಳೆಯಬೇಕಿದೆ. ಇದು ಕೇವಲ ಪ್ರಾರಂಭವಷ್ಟೆ. ನಾವಿನ್ನೂ ಸಾಕಷ್ಟು ಟ್ರೋಫಿಗಳನ್ನು ದೇಶಕ್ಕಾಗಿ ಗೆಲ್ಲಬೇಕಿದೆ. ಮುಂಬರುವ 2019ರ ಏಷ್ಯಾ ಕಪ್ ಗೆ ತಯಾರಾಗಬೇಕಿದೆ ಎಂದರು.

ದೇಶದ ಫುಟ್ಬಾಲ್ ತಂಡ ಸ್ಟಿಫನ್ ಕಾನ್ಸಟಂಟೈನ್ ನೇತೃತ್ವದಲ್ಲಿ ಪಿಫಾ ಶ್ರೇಣಿಯಲ್ಲಿ 166ನೇ ಸ್ಥಾನದಿಂದ 97ನೇ ಸ್ಥಾನಕ್ಕೇರಿದೆ. ಆದರೆ ಭಾರತದಲ್ಲಿ ಕ್ರಿಕೆಟ್ ಪ್ರಬಲವಾಗಿದೆ ಹಾಗಾಗಿ ಅವರು ಮೊದಲ ಸ್ಥಾನದಲ್ಲಿದ್ದಾರೆ ಎಂದರು.

ಚೆಟ್ರಿ ಭಾರತೀಯ ಫುಟ್ಬಾಲ್ ಗೆ ಪ್ರೋತ್ಸಾಹ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಂಡಿದ್ದರು. ಭಾರತೀಯ ಕ್ರಿಕೆಟ್ ಸ್ಟಾರ್ ಗಳಾದ ಸಚಿನ್ ಹಾಗೂ ವಿರಾಟ್ ಕೊಹ್ಲಿ ಚೆಟ್ರಿಗೆ ಪ್ರೋತ್ಸಾಹಿಸಿದ್ದಾರೆ. ಅಲ್ಲದೇ 2569 ಜನ ಅಭಿಮಾನಿಗಳು ಜೂನ್ 1 ರಂದು ಪ್ರಾರಂಭಿಕ ಪಂದ್ಯಕ್ಕೆ ಪ್ರೋತ್ಸಾಹ ನೀಡಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *