Connect with us

Cinema

ಪ್ರೊಡಕ್ಷನ್ ಕಂಪನಿ ವಿರುದ್ಧ ಸುನಿಲ್ ಶೆಟ್ಟಿ ದೂರು

Published

on

ಮುಂಬೈ: ಬಾಲಿವುಡ್ ನಟ ಸುನಿಲ್ ಶೆಟ್ಟಿ ತಮ್ಮ ಪೋಸ್ಟರ್ ಗಳನ್ನು ನಕಲಿಗೊಳಿಸಿ ಪ್ರಸಾರಮಾಡಿದ್ದ ಪ್ರೊಡಕ್ಷನ್ ಕಂಪನಿಯೊಂದರ ವಿರುದ್ಧ ದೂರುದಾಖಲಿಸಿದ್ದಾರೆ. ದೂರಿನಲ್ಲಿ ನನ್ನ ಅನುಮತಿಯಿಲ್ಲದೆ ಪ್ರೊಡಕ್ಷನ್ ಕಂಪನಿ ಫೋಟೋವನ್ನು ಬಳಸಿಕೊಂಡಿದ್ದು, ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವುದಾಗಿ ಸುಳ್ಳು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ನಟ ಸುನಿಲ್ ಶೆಟ್ಟಿ(59) ಪಾಲ್ಗೊಳ್ಳದಿರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಸುಳ್ಳು ಹೇಳಿ ಚಿತ್ರ ನಿರ್ಮಾಪಕರು ತಮ್ಮ ಪೋಸ್ಟರ್ ಗಳನ್ನು ನಕಲಿಗೊಳಿಸಿ ಪ್ರಸಾರ ಮಾಡಿದ್ದಾರೆ. ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಆದನಂತರ ಈ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ ಪ್ರೊಡಕ್ಷನ್ ಕಂಪನಿ ಜನರನ್ನು ಸಂಪರ್ಕಿಸಿ ತಮ್ಮ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಜೊತೆಗೆ ಈ ಪ್ರೊಡಕ್ಷನ್ ಹೌಸ್ ದೊಡ್ಡ ಫ್ರಾಡ್ ಕಂಪನಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ವರ್ಸೋವಾ ಪೊಲೀಸ್ ಠಾಣೆಯ ಹಿರಿಯ ಇನ್ಸ್‍ಪೆಕ್ಟರ್ ಸಿರಾಜ್ ಇನಾಮ್ದಾರ್, ನಾವು ದೂರನ್ನು ಸ್ವೀಕರಿಸಿದ್ದೇವೆ. ಆದರೆ ಇನ್ನೂ ಎಫ್‍ಐಆರ್ ದಾಖಲಿಸಿಕೊಂಡಿಲ್ಲ. ಇದೀಗ ಈ ವಿಚಾರವಾಗಿ ತನಿಖೆ ಆರಂಭಿಸಿದ್ದೇವೆ ಎಂದು ಹೇಳಿದರು.

Click to comment

Leave a Reply

Your email address will not be published. Required fields are marked *