Saturday, 21st July 2018

Recent News

ಪಿರಂಗಿಪುರಕ್ಕೆ ಕಾಲಿಟ್ಟರು ಸುನಿಲ್ ಶೆಟ್ಟಿ!

– ಸಂಚಾರಿ ವಿಜಯ್‍ಗೆ ಜೊತೆಯಾದ ಬಾಲಿವುಡ್ ಸ್ಟಾರ್

ಬೆಂಗಳೂರು: ಬಾಲಿವುಡ್ ನಟ ಸುನಿಲ್ ಶೆಟ್ಟಿ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಚಿತ್ರದಲ್ಲಿ ನಟಿಸೋದು ಈಗಾಗಲೇ ಪಕ್ಕಾ ಆಗಿದೆ. ಈ ವಿಚಾರವನ್ನು ಸ್ವತಃ ಸುನಿಲ್ ಶೆಟ್ಟಿಯೇ ಅಧಿಕೃತವಾಗಿ ಹೇಳಿಕೊಂಡ ಬೆನ್ನಲ್ಲೇ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಸುನಿಲ್ ಶೆಟ್ಟಿ ಸಂಚಾರಿ ವಿಜಯ್ ಮುಖ್ಯ ಭೂಮಿಕೆಯಲ್ಲಿರುವ ಪಿರಂಗಿಪುರ ಚಿತ್ರದಲ್ಲಿ ನಟಿಸಲಿದ್ದಾರಂತೆ!

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ ಪಿರಂಗಿಪುರ ಚಿತ್ರ ವರ್ಷದ ಹಿಂದೆಯೇ ಆರಂಭವಾಗಿದೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿರೋ ಈ ಚಿತ್ರದಲ್ಲಿ ಸಂಚಾರಿ ವಿಜಯ್ ನಾನಾ ಶೇಡ್ ಗಳ ಪಾತ್ರಗಳಲ್ಲಿ ನಟಿಸುತ್ತಿರೋದರ ಬಗ್ಗೆ, ಅದಕ್ಕಾಗಿ ಅವರ ಮೇಕಪ್ಪಿನ ಬಗ್ಗೆಯೂ ಸಾಕಷ್ಟು ಸುದ್ದಿಗಳು ಹೊರ ಬಂದಿದ್ದವು. ಒಂದಷ್ಟು ಕಾಲದಿಂದ ಈ ಚಿತ್ರದ ಸುದ್ದಿಯೇ ಇಲ್ಲವಲ್ಲ ಅಂದುಕೊಳ್ಳುತ್ತಿರುವಾಗಲೇ ಸುನಿಲ್ ಶೆಟ್ಟಿ ಪಿರಂಗಿಪುರಕ್ಕೆ ಎಂಟ್ರಿ ಕೊಟ್ಟಿದ್ದಾರೆ!

ಚಿತ್ರ ತಂಡ ಸುನಿಲ್ ಶೆಟ್ಟಿಯವರನ್ನು ಭೇಟಿಯಾಗಿ ಒಟ್ಟಾರೆ ಕಥೆ ಮತ್ತು ಅವರ ಪಾತ್ರದ ಬಗ್ಗೆ ಹೇಳಿದಾಗ ಬಹುವಾಗಿ ಮೆಚ್ಚಿಕೊಳ್ಳುತ್ತಲೇ ಸುನಿಲ್ ಶೆಟ್ಟಿ ನಟಿಸಲು ಒಪ್ಪಿಕೊಂಡಿದ್ದಾರೆ. ಅವರೇ ಅಧಿಕೃತವಾಗಿಯೂ ಈ ಸುದ್ದಿಯನ್ನು ಜಾಹೀರು ಮಾಡಿದ್ದಾರೆ. ತಲೆಮಾರುಗಳ ಕಥೆಯನ್ನು ಹೊಂದಿರೋ ಈ ಚಿತ್ರದಲ್ಲಿ ಸುನಿಲ್ ಶೆಟ್ಟಿ ರಾಜನಾಗಿ ನಟಿಸಲಿದ್ದಾರಂತೆ. ಈಗಾಗಲೇ ವೇಗವಾಗಿ ಚಿತ್ರೀಕರಣ ನಡೆಸಿಕೊಳ್ಳುತ್ತಿರೋ ಫಿರಂಗಿಪುರ ಚಿತ್ರದ ಚಿತ್ರೀಕರಣವನ್ನು ತಿಂಗಳೊಪ್ಪತ್ತಿನಲ್ಲಿ ಮುಗಿಸಿಕೊಳ್ಳಲು ಚಿತ್ರ ತಂಡ ತೀರ್ಮಾನಿಸಿದೆಯಂತೆ.

Leave a Reply

Your email address will not be published. Required fields are marked *