Wednesday, 16th October 2019

Recent News

ಇಂದು ಹುತಾತ್ಮ ಯೋಧನ ಕುಟುಂಬಕ್ಕೆ ಸುಮಲತಾ ಸಾಂತ್ವಾನ- 20 ಗುಂಟೆ ಜಮೀನು ಹಸ್ತಾಂತರ

ಮಂಡ್ಯ: ನಟಿ ಸುಮಲತಾ ಅವರು ಇಂದು ಹುತಾತ್ಮ ಯೋಧ ಗುರು ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಲಿದ್ದಾರೆ. ಅಲ್ಲದೆ ಇದೇ ವೇಳೆ ತಮ್ಮ ಪುತ್ರ ಅಭಿಷೇಕ್ ಹೆಸರಲ್ಲಿರೋ 20 ಗುಂಟೆ ಜಮೀನನ್ನು ಯೋಧನ ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.

ಬುಧವಾರವಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಭೇಟಿ ಆಗಿದ್ದ ಸುಮಲತಾ ಅಂಬರೀಶ್ ಅವರು ಇಂದು ಮಂಡ್ಯಕ್ಕೆ ಹೋಗ್ತಿದ್ದಾರೆ. ಚಿಕ್ಕರಸಿಕೆರೆಯಲ್ಲಿರೋ ಕಾಲಭೈರವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿರುವ ಗುಡಿಗೆರೆ ಗುರು ಮನೆಗೆ ಭೇಟಿ ನೀಡ್ತಾರೆ. ಇದನ್ನೂ ಓದಿ: ಮಂಡ್ಯ ಜನರ ಅಭಿಪ್ರಾಯವೇ ಅಂತಿಮ: ಸುಮಲತಾ ಅಂಬರೀಶ್

ಸಾಂತ್ವನ ಹೇಳೋದರ ಜೊತೆಗೆ ಪುತ್ರ ಅಭಿಷೇಕ್ ಹೆಸರಲ್ಲಿರೋ 20 ಗುಂಟೆ ಜಮೀನನ್ನು ಯೋಧನ ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ. ಈ ನೆಲದ ಮಗಳಾಗಿ ಸೊಸೆಯಾಗಿ ನಾನು ಮಾಡುವ ಪುಟ್ಟ ಸೇವೆ ಅಂತ ಯೋಧನ ಅಂತ್ಯಸಂಸ್ಕಾರ ನಡೆದಿದ್ದ ದಿನ ಸುಲಮತಾ ಹೇಳಿದ್ದರು. ಈ ಹಿಂದೆ ಸಿಎಂ ಕುಮಾರಸ್ವಾಮಿ ಮಂಡ್ಯಕ್ಕೆ ಸುಮಲತಾ ಕೊಡುಗೆ ಏನು ಅಂತ ಪ್ರಶ್ನಿಸಿ ವಿವಾದಕ್ಕೊಳಗಾಗಿದ್ದರು. ಇದನ್ನೂ ಓದಿ:  ಅಂಬರೀಶ್ ಹೆಸರಲ್ಲಿರೋ ಅರ್ಧ ಎಕರೆ ಜಮೀನನ್ನು ಗುರು ಕುಟುಂಬಕ್ಕೆ ಕೊಡುತ್ತೇನೆ: ಸುಮಲತಾ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *