Connect with us

Bengaluru City

ಕೂಲಿಂಗ್ ಗ್ಲಾಸ್ ತೊಟ್ಟು, ಹ್ಯಾಟ್ ಹಾಕ್ಕೊಂಡು ಕೋಟಿಗೊಬ್ಬ ಎಂಟ್ರಿ

Published

on

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾದ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷವಾಗಿ ಬಿಡುಗಡೆಯಾಗಿದೆ.

ನಟ ಸುದೀಪ್ ಮೋಷನ್ ಪೋಸ್ಟರ್ ರಿಲೀಸ್ ಆಗಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.

ಬಿಡುಗಡೆಯಾಗಿರುವ ಮೋಷನ್ ಪೋಸ್ಟರಿನಲ್ಲಿ ಸುದೀಪ್ ಲುಕ್ ಜಬರ್ದಸ್ತ್ ಆಗಿ ಮೂಡಿಬಂದಿದೆ. ಕಣ್ಣಿಗೆ ಕೂಲಿಂಗ್ ಗ್ಲಾಸ್, ಹ್ಯಾಟ್ ಹಾಕಿಕೊಂಡು ಕೈಯಲ್ಲಿ ಸಿಗಾರ್ ಹಿಡಿದುಕೊಂಡು ಮಾಸ್ ಆಗಿ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ.

ಮೋಷನ್ ಪೋಸ್ಟರಿನಲ್ಲಿ ಬ್ಯಾಕ್‍ಗೌಂಡ್ ಮ್ಯೂಸಿಕ್ ಸಖತ್ ಆಗಿ ಮೂಡಿ ಬಂದಿದೆ. ಕಿಚ್ಚನ ನ್ಯೂ ಲುಕ್‍ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಪೋಸ್ಟರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 2.5 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ. ಅಲ್ಲದೇ 33 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದಾರೆ. ಸಾವಿರಾರು ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೋಷನ್ ಪೋಸ್ಟರ್ ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾಗಾಗಿ ಕಾಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.

ಶಿವ ಕಾರ್ತಿಕ್ ನಿರ್ದೇಶನ, ಸೂರಪ್ಪ ಬಾಬು ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ಮಾಡೋನ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ಕೋಟಿಗೊಬ್ಬನಿಗೆ ನಾಯಕಿಯರಾಗಿದ್ದಾರೆ. ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಕೋಟಿಗೊಬ್ಬ ಚಿತ್ರದ ಮೂಲಕ ಎಂಟ್ರಿ ನೀಡುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಅಫ್ತಾಬ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾತ್ರ ಚಿತ್ರತಂಡ ಹೇಳಿಕೊಂಡಿದ್ದು, ಯಾವ ಪಾತ್ರ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.