Connect with us

Cinema

ಸುದೀಪ್ ಚಾಲೆಂಜ್ ಸ್ವೀಕರಿಸಿದ ಮಂಜು- ರಾಜೀವ್‍ಗೆ ಶುರುವಾಯ್ತು ಢವ ಢವ

Published

on

ಬಿಗ್ ಮನೆಗೆ ಎಂಟ್ರಿ ನೀಡಿದ ಬಳಿಕ ಗಂಡೈಕ್ಳು ಶೇವ್, ಹೇರ್ ಕಟ್ ತಾವೇ ಮಾಡಿಕೊಳ್ಳಬೇಕು. ಇದಕ್ಕಾಗಿ ಬಿಗ್‍ಬಾಸ್ ಯಾವುದೇ ವ್ಯವಸ್ಥೆ ಮಾಡಲ್ಲ. ಆದ್ದರಿಂದ ಗಂಡೈಕ್ಳು ಅಲ್ಲಿಯೇ ಇದ್ದವರ ಸಹಾಯದಿಂದ ಹೇರ್ ಕಟ್ ಮಾಡಿಸಿಕೊಳ್ತಾರೆ. ಕಳೆದ ವಾರ ಮನೆಯ ಬ್ರೋ ಗೌಡ ಶಮಂತ್ ಹೇರ್ ಕಟ್ ಮಾಡಿಸಿಕೊಂಡು ಮಿಂಚಿದ್ರು. ಇದಕ್ಕೆ ಕಾರಣ ಪಾವಗಡದ ಮಂಜು. ಯೆಸ್ ಮಂಜು ಮೊದಲ ಬಾರಿಗೆ ಹೇರ್ ಕಟ್ ಮಾಡಿದ್ದು. ಶಮಂತ್ ಹೇರ್ ಕಟ್ ನೋಡಿ ಇಂಪ್ರೆಸ್ ಆಗಿರೋ ಸುದೀಪ್, ಇದೀಗ ಮಂಜುಗೆ ಹೊಸ ಚಾಲೆಂಜ್ ನೀಡಿದ್ದಾರೆ.

ವೀಕೆಂಡ್ ವಿಥ್ ಸುದೀಪ್ ಆರಂಭದಲ್ಲಿಯೇ ಕಿಚ್ಚ, ಹೇರ್ ಕಟ್ ವಿಷಯ ತೆಗೆದರು. ಏನ್ರೀ ಶಮಂತ್ ಹೇಗಿದೆ ಹೆಡ್ ವೇಟ್? ನೀವು ತುಂಬಾನೇ ಪ್ರೀತಿಸೋ ಕೂದಲು ಮಂಜು ಕೈಗೆ ನೀಡಿದ್ರಿ. ಮಂಜು ನಿಮ್ಮ ಕೂದಲಿಗೆ ಮಾತ್ರ ಅಲ್ಲದೇ ಮೆದುಳಿಗೆ ಕೈ ಹಾಕಿದ್ರೂ ಅನ್ನೋದು ಒಂದು ಫೀಲಿಂಗ್. ಆದಾದ ಮೇಲೆ ಗಾಡಿ ಸ್ವಲ್ಪ ಜೋರಾಗಿ ಓಡ್ತಿದೆ ಅಲ್ವಾ ಅಂತ ಕೇಳಿದ್ರು. ಅದಕ್ಕೆ ಶಮಂತ್ ಸಹ ಹೌದು ಎಂದರು.

ಫಸ್ಟ್ ಟೈಮ್ ಹೇರ್ ಕಟ್ ಮಾಡಿದ್ದು. ಕೆಲವರಿಗೆ ಹೇರ್ ಕಟ್ ವಿಷಯದಲ್ಲಿ ನನ್ನ ಮೇಲೆ ನಂಬಿಕೆ ಬಂದಿದೆ. ಇನ್ನು ಕೆಲವರಿಗೆ ಬಂದಿಲ್ಲ ಅಂತ ಮಂಜು ಹೇಳಿದ್ರು. ಆಗ ಸುದೀಪ್ ನಗುತ್ತಾ, ನಾನ್ ನಿಮಗೊಂದು ಚಾಲೆಂಜ್ ಕೊಡ್ತೀನಿ. ಮುಂದಿನ ವಾರ ರಾಜೀವ್‍ಗೊಂದು ಒಳ್ಳೆ ಹೇರ್ ಕಟ್ ಮಾಡಿ ಅಂದ ಕೂಡಲೇ ಮಂಜು ಸೇರಿದಂತೆ ಮನೆ ಮಂದಿಯೆಲ್ಲಾ ಶಾಕ್ ಆಗಿ ಜೋರಾಗಿ ಕೂಗಿ ಚಪ್ಪಾಳೆ ಹಾಕಿದರು.

ಹೇರ್ ಟ್ರಿಮ್ ಮಾಡೋದು ಅಲ್ಲ. ಬೇರೆ ರೀತಿನೇ ಸ್ಟೈಲ್ ಮಾಡಬೇಕು. ರಾಜೀವ್ ಬೇರೆ ರೀತಿಯಲ್ಲಿಯೇ ಕಾಣಬೇಕು. ಇದು ನಮ್ಮ ವೈಯಕ್ತಿಕ ಆಸೆ. ಹೇರ್ ಕಟ್ ಮಾಡ್ತೀರಿ ಅಲ್ವಾ ಅಂತ ಮಂಜುಗೆ ಸುದೀಪ್ ಕೇಳಿದ್ರು. ಹೌದು ಸರ್, ತುಂಬಾ ದಿನದಿಂದ ರಾಜೀವ್‍ಗೆ ಮೊಗ್ಗಿನ ಜಡೆ ಹಾಕಬೇಕು ಅಂತ ಪ್ಲಾನ್ ಮಾಡಿದ್ದೆ. ಈಗ ಹೇರ್ ಕಟ್ ಮಾಡ್ತೀನಿ ಅಂದ್ರು. ಪಕ್ಕದಲ್ಲೇ ಕುಳಿತಿದ್ದ ಮಂಜು ಕೈ ಮುಗಿದು ಬೇಡ ಅನ್ನೋ ರೀತಿಯಲ್ಲಿ ಸನ್ನೆ ಮಾಡುತ್ತಿದ್ದರು.

ಒಟ್ಟಿನಲ್ಲಿ ಸುದೀಪ್ ನೀಡಿರೋ ಚಾಲೆಂಜ್ ಸ್ವೀಕರಿಸಿರೋ ಮಂಜು, ಜುಟ್ಟು ಹಾಕಿಕೊಂಡಿರೋ ರಾಜೀವ್‍ಗೆ ಅದ್ಯಾವ ರೀತಿ ಹೇರ್ ಕಟ್ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕು.

Click to comment

Leave a Reply

Your email address will not be published. Required fields are marked *