Wednesday, 18th September 2019

Recent News

ಬೆಳಗಾವಿ, ಯಾದಗಿರಿ ಜನತೆಗೆ ತಂಪು ಮಳೆಯ ಸಿಂಚನ

ಬೆಳಗಾವಿ: ಬೇಸಿಗೆ ಆರಂಭವಾಗುತ್ತಿದ್ದಂತೆ ಸೂರ್ಯಕ ಪ್ರಖರತೆ ಜನರು ಸುಸ್ತಾಗಿದ್ದರು. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೆಲಕಮರಡಿ ಗ್ರಾಮದಲ್ಲಿ ಮಳೆರಾಯ ತಂಪು ಎರೆದಿದ್ದಾನೆ.

ಇಂದು ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದ್ದರಿಂದ ಜನರು ಸಂತೋಷಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ವಿವಿಧೆಡೆ ತುಂತುರು ಮಳೆಯಾಗಿದೆ ಎಂದು ವರದಿಯಾಗಿದೆ. ಭಾನುವಾರ ತುಮಕೂರಿನ ಕೆಲ ಭಾಗಗಳಲ್ಲಿ ತುಂತುರು ಮಳೆಯಾಗಿತ್ತು.

ಸತತ ಬರಗಾಲ ಮತ್ತು ರಣಬಿಸಿಲಿಗೆ ಬೆಳಲಿ ಬೆಂಡಾಗಿದ್ದ ಯಾದಗಿರಿ ಜನರಿಗೆ, ಇಂದು ಮಧ್ಯಾಹ್ನ ಮಳೆರಾಯ ತಂಪಿನ ಸಿಂಚನ ಮಾಡಿದ್ದಾನೆ. ಬಿಸಿಲನಾಡು ಯಾದಗಿರಿ ಜಿಲ್ಲೆಯಾದ್ಯಂತ ಇಂದು ವರುಣ ದೇವ ಅರ್ಧ ಗಂಟೆಗೂ ಹೆಚ್ಚು ಸಮಯ ತನ್ನ ಆಗಮನ ನೀಡಿ, ಬಿಸಿಲಿನ ಬೆಗೆಯಲ್ಲಿದ್ದ ಯಾದಗಿರಿ ಜನಕ್ಕೆ ತಂಪೆರದಿದ್ದಾನೆ.

ಇಷ್ಟು ದಿನ ಜಿಲ್ಲೆಯಲ್ಲಿ ಬಿಸಿಲು ಏರುತ್ತಿದ್ದಂತೆ ಜನ ಮನೆಯಿಂದ ಹೊರ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಸತತ ಬರಗಾಲಕ್ಕೆ ಯಾದಗಿರಿ ಜಿಲ್ಲೆ ರೈತರು ಸಹ ಕಂಗಲಾಗಿದ್ದರು. ಈಗ ಅಕಾಲಿಕ ಮಳೆ ಆಗಮನ ಹಿನ್ನೆಲೆ ಜಿಲ್ಲೆಯ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಜಿಲ್ಲೆಯ ಧಗೆ ಕೂಲ್ ಕೂಲ್ ಆಗಿದೆ.

Leave a Reply

Your email address will not be published. Required fields are marked *