Wednesday, 17th July 2019

ಎಲ್ಲರೂ ಇದ್ದಾರೆ ಆದ್ರೆ ಮಾತನಾಡೋಕ್ಕೆ ಯಾರು ಇಲ್ಲ- ಕಣ್ಣೀರು ತರಿಸುತ್ತೆ ಆಶಾ ಬೋಸ್ಲೆ ಟ್ವೀಟ್

ಮುಂಬೈ: ಬಾಲಿವುಡ್ ದಂತಕತೆ, ಗಾಯಕಿ ಆಶಾ ಬೋಸ್ಲೆ ಅವರು ಎರಡು ದಿನದ ಹಿಂದೆ ಟ್ವಿಟ್ಟರ್ ನಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ದು ಬಹಳ ಚರ್ಚೆಯಾಗುತ್ತಿದೆ.

ಆಶಾ ಬೋಸ್ಲೆ ಅವರು ಒಂದು ಕಾರ್ಯಕ್ರಮಕ್ಕೆ ಕೋಲ್ಕತ್ತಾಗೆ ತೆರೆಳಿದ್ದರು. ಈ ವೇಳೆ ಆಶಾ ಅವರ ಜೊತೆ ಗಾಯಕರಾದ ಸುದೇಶ್ ಬೋಸ್ಲೆ ಹಾಗೂ ಸಿದ್ಧಾಂತ್ ಬೋಸ್ಲೆ ಕೂಡ ತೆರೆಳಿದ್ದು, ಅಲ್ಲಿ ವೇಟಿಂಗ್ ರೂಮಿನಲ್ಲಿ ಎಲ್ಲರು ಜೊತೆಯಲ್ಲಿ ಇದ್ದರು.

ಆಶಾ ವೇಟಿಂಗ್ ರೂಮಿನಲ್ಲಿ ಕುಳಿತ ಫೋಟೋವನ್ನು ಹಾಕಿ ಅದಕ್ಕೆ, “ಬಾಗ್ಡೋಗ್ರದಿಂದ ಕೋಲ್ಕತ್ತಾವರೆಗೂ…. ಎಲ್ಲರೂ ಜೊತೆಯಲ್ಲಿಯೇ ಇದ್ದಾರೆ. ಆದರೆ ಮಾತನಾಡುವುದಕ್ಕೆ ಯಾರೂ ಇಲ್ಲ. ಅಲೆಕ್ಸಾಂಡ್ ಗ್ರಹಾಂ ಬೆಲ್ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

ಆಶಾ ಅವರು ಟ್ವೀಟ್ ಮಾಡಿದ ಫೋಟೋದಲ್ಲಿ ಅವರ ಜೊತೆ ಐದು ಜನ ಇದ್ದಾರೆ. ಆದರೆ ಬೋಸ್ಲೆ ಅವರನ್ನು ಹೊರತುಪಡಿಸಿ ಉಳಿದ ನಾಲ್ಕು ಮಂದಿ ತಮ್ಮ ತಮ್ಮ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರು. ಆದರೆ ಆಶಾ ಅವರು ಯಾವುದೇ ಮೊಬೈಲ್ ಬಳಸದೇ ತಮ್ಮ ಜೊತೆಯಲ್ಲಿದ್ದವನ್ನು ನೋಡುತ್ತಿದ್ದರು.

ಆಶಾ ಅವರ ಈ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದೆ. ಈ ಟ್ವೀಟ್ ನೋಡಿ ಕೆಲವರು ಆಶಾ ಅಂತಹ ಮಹಾನ್ ಗಾಯಕರು ನಮ್ಮ ಪಕ್ಕದಲ್ಲಿ ಇದ್ದರೆ, ದಿನ ಪೂರ್ತಿ ಅವರ ಮಾತುಗಳನ್ನೇ ಕೇಳುತ್ತಿದ್ದೇವು ಎಂದು ಟ್ವೀಟ್ ಮಾಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *