Wednesday, 18th September 2019

Recent News

ಭ್ರಷ್ಟ ಅಧಿಕಾರಿಗೆ ರಾಜ್ಯ ಸರ್ಕಾರದಿಂದ ಗೇಟ್‌ಪಾಸ್‌

ದಾವಣಗೆರೆ: ಹರಪನಹಳ್ಳಿಯ ಸಾಮಾಜಿಕ ಅರಣ್ಯ ವಿಭಾಗದಲ್ಲಿ ನಡೆದಿದ್ದ ಅಕ್ರಮಗಳು ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ವಲಯ ಅರಣ್ಯಾಧಿಕಾರಿ ಕೆ.ಶಂಕರ್ ನಾಯ್ಕ್‍ಗೆ ರಾಜ್ಯ ಸರ್ಕಾರ ಗೇಟ್‍ಪಾಸ್ ನೀಡಿದೆ.

ಹರಪನಹಳ್ಳಿಯ ಸಾಮಾಜಿಕ ಅರಣ್ಯ ವಿಭಾಗದಲ್ಲಿ ನಡೆದಿದ್ದ ಅಕ್ರಮಗಳು ಸಾಬೀತಾದ ಹಿನ್ನೆಲೆಯಲ್ಲಿ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಉದ್ಯೋಗ ಖಾತ್ರಿ ಕಾಮಗಾರಿಗೇ ಖಾತ್ರಿ ಹಾಕಿದ್ದ ಆರ್‍ಎಫ್‍ಒ ಶಂಕರ್ ನಾಯ್ಕ್ ಸೇರಿ 5 ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ಈ ಹಿನ್ನೆಲೆ ಶಂಕರ್ ನಾಯ್ಕಗೆ ಸೇವೆಯಿಂದ ಕಡ್ಡಾಯ ನಿವೃತ್ತಿಯ ದಂಡನೆ ವಿಧಿಸುವಂತೆ ಸರ್ಕಾರ ಆದೇಶಿಸಿತ್ತು. ಹೀಗಾಗಿ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಉಪ ಕಾರ್ಯದರ್ಶಿ ಎಚ್.ಸಿ ರಾಜೇಂದ್ರ ಕುಮಾರ್ ಈ ಸಂಬಂಧ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮದನ್ವಯ ಕಠಿಣ ಕ್ರಮ ಕೈಗೊಂಡಿದೆ. ಈ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಎಚ್ಚರಿಕೆ ಗಂಟೆ ಬಾರಿಸಿದೆ. 2010ರಲ್ಲಿ ವಿವಿಧ ಅಳತೆಯ 16.45 ಲಕ್ಷ ಸಸಿ ಬೆಳೆಸಿರುವುದಾಗಿ ವರದಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕೇವಲ 1.89 ಲಕ್ಷ ಸಸಿಗಳು ಕಂಡು ಬಂದಿದ್ದವು. ರಾಗಿ, ಮಸಲವಾಡ ಮತ್ತು ಸಿಂಗ್ರಿಹಳ್ಳಿಯಲ್ಲಿ 8 ಲಕ್ಷ ಸಸಿ ತೋರಿಸಿ 64 ಲಕ್ಷ ರೂಪಾಯಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದರು.

ಅಲ್ಲದೆ ಹರಪನಹಳ್ಳಿ ಸಾಮಾಜಿಕ ಅರಣ್ಯದಲ್ಲಿ 2.50 ಲಕ್ಷ ಸಸಿ ಬೆಳೆಸಿದ್ದೇವೆ ಎಂದು ಸುಳ್ಳು ದಾಖಲಾತಿ ಸೃಷ್ಟಿಸಿ 6.79 ಲಕ್ಷ ರೂ. ಹಣ ಲೂಟಿ ಮಾಡಿದ್ದರು. ಮಂಜೂರಾತಿ ಇಲ್ಲದೇ 5,500 ಕೆ.ಜಿ. ಹೆಚ್ಚುವರಿ ಪಾಲಿಥೀನ್ ಚೀಲವನ್ನು 7.43 ಲಕ್ಷ ರೂಪಾಯಿಗೆ ಖರೀದಿಸಿದ್ದರು ಎನ್ನಲಾಗಿದೆ.

ಸಸ್ಯ ಕ್ಷೇತ್ರದಲ್ಲಿ ಟೆಂಡರ್ ಕರೆಯದೇ ದರಪಟ್ಟಿಯ ಮೂಲಕ 78.54 ಲಕ್ಷ ರೂಪಾಯಿ ವೆಚ್ಚ ಮಾಡಿ ಕರ್ತವ್ಯ ಲೋಪ ಎಸಗಿ, ಯರಬಳ್ಳಿ ಸರ್ವೆ ನಂ. 264ರಲ್ಲಿ ನಾಲಾಬದು ಹಾಗೂ ಗೋಕಟ್ಟೆ ನಿರ್ಮಾಣದಲ್ಲಿ 5.35 ಲಕ್ಷ ರೂಪಾಯಿ ಹೆಚ್ಚುವರಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

2009-10ನೇ ಸಾಲಿನಲ್ಲಿ ಮಣ್ಣು ತೇವಾಂಶ ರಕ್ಷಣೆ ಕೆಲಸ ಮಾಡುವ ಸಂಬಂಧ ಆರು ಅಂದಾಜು ಪಟ್ಟಿ ತಯಾರಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸಲ್ಲಿಸದೇ ಶಿಷ್ಟಾಚಾರ ಉಲ್ಲಂಘಿಸಿರುವ ಆರೋಪಗಳು ಸಾಬೀತಾಗಿದೆ. ಒಟ್ಟು 25 ಆರೋಪ ಪಟ್ಟಿಗಳ ಪೈಕಿ 7 ಕಾರ್ಯ ನಿರ್ವಹಣಾ ಲೋಪ, 6 ಸರ್ಕಾರಕ್ಕೆ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದ್ದು ಸಾಬೀತಾಗಿದೆ.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Leave a Reply

Your email address will not be published. Required fields are marked *