Connect with us

ಬಿಜೆಪಿಯವರು ದೇಶ ಹಾಗೂ ರಾಜ್ಯ ಆಳಲು ನಾಲಾಯಕ್ – ರಾಮಲಿಂಗಾರೆಡ್ಡಿ

ಬಿಜೆಪಿಯವರು ದೇಶ ಹಾಗೂ ರಾಜ್ಯ ಆಳಲು ನಾಲಾಯಕ್ – ರಾಮಲಿಂಗಾರೆಡ್ಡಿ

ಬೆಂಗಳೂರು: ದೇಶದಲ್ಲಿ ಕೊರೊನಾ ಹೆಚ್ಚಾಗಲು ಬಿಜೆಪಿ ಕಾರಣ. ಬಿಜೆಪಿಯವರಿಗೆ ಸುಳ್ಳು ಹೇಳಿಲ್ಲ ಅಂದ್ರೆ ಊಟ ಸೇರಲ್ಲ. ಬಿಜೆಪಿಯವರು ದೇಶ ಹಾಗೂ ರಾಜ್ಯ ಆಳಲು ನಾಲಾಯಕ್ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.

ಬೊಮ್ಮನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಚೀನಾ ವೈರಸ್‍ನ್ನು ಕಾಂಗ್ರೆಸ್ ನವರು ತಂದ್ರು ಅಂತಾರೆ. ವ್ಯಾಕ್ಸಿನ್ ಬಂದಾಗ ಕಾಂಗ್ರೆಸ್ ನವರು ಅಡ್ಡ ಹಾಕಿದ್ರು ಅಂತಾರೆ. ಕಳೆದ ಲಾಕ್‍ಡೌನ್ ಟೈಮ್‍ನಲ್ಲಿ ಜಾಗಟೆ ಬಾರಿಸಿ ಎಂದಾಗ ಜಾಗಟೆ ಬಾರಿಸಿದರು. ದೀಪ ಹಚ್ಚಿ ಅಂದಾಗ ದೀಪ ಹಚ್ಚಿದರು. ಇಡೀ ದೇಶ ಅವರ ಮಾತನ್ನು ಕೇಳಿತ್ತು. ಆದರೆ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂದಾಗ ಮಾತ್ರ ಹಾಕಿಸಿಕೊಳ್ಳಿಲ್ವ ಎಂದು ಪ್ರಶ್ನೆ ಮಾಡಿದ್ದಾರೆ.

ಜನ ಕೊರೊನಾದಿದ ನರಳುತ್ತಿದ್ದರೆ ಪ್ರಧಾನಿ ಮೌನವಾಗಿದ್ದಾರೆ. ಕಳೆದ ಬಾರಿಯೂ ಆರು ತಿಂಗಳು ಹೊರಬರಲಿಲ್ಲ. ಬಿಹಾರ ಚುನಾವಣೆ ಸಂದರ್ಭದಲ್ಲಿ ಹೊರಬಂದರು. ಆಕ್ಸಿಜನ್, ವೆಂಟಿಲೇಟರ್, ರೆಮೆಡಿಸಿವರ್ ಸಿದ್ಧಪಡಿಸಿಕೊಳ್ಳಲು ಆಗಲಿಲ್ಲ. ಈಗ ಬ್ಲ್ಯಾಕ್ ಫಂಗಸ್ ತೊಂದರೆ ಹೆಚ್ಚಾಗುತ್ತಿದೆ. ಯಾರಾದರು ಮಾತನಾಡಿದರೆ ಪಾಕಿಸ್ತಾನ, ಕಾಂಗ್ರೆಸ್ ಅಂತಾರೆ. ಈಗ ಕೇಂದ್ರ ಸರ್ಕಾರದ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಈಗ ದೂರಲು ಯಾರು ಸಿಕ್ಕಿಲ್ಲ ಹಾಗಾಗಿ ಕಾಂಗ್ರೆಸ್ ಮೇಲೆ ಕೈ ತೋರಿಸುತ್ತಿದ್ದಾರೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

Advertisement
Advertisement