Bengaluru City

ಬೆಂಗಳೂರಿನಲ್ಲಿ ರಾಜ್ಯದ ಅತಿದೊಡ್ಡ ಲಸಿಕೆ ಸ್ಟೋರೇಜ್ ಕೇಂದ್ರ ಆರಂಭ

Published

on

Share this

ಬೆಂಗಳೂರು: ಬೆಂಗಳೂರಿನಲ್ಲಿ ರಾಜ್ಯದ ಅತಿದೊಡ್ಡ ಲಸಿಕೆ ಸ್ಟೋರೇಜ್ ಕೇಂದ್ರ ಪ್ರಾರಂಭವಾಗುತ್ತದೆ. ಲಸಿಕಾ ಸ್ಟೋರೇಜ್ ನಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನ ವ್ಯಾಕ್ಸಿನ್ ಸ್ಟೋರೇಜ್ ಸಾಮಥ್ರ್ಯ ಮತ್ತು ವೈಶಿಷ್ಟ್ಯತೆಯಿಂದ ಕೂಡಿರಲಿದೆ.

ವೈಶಿಷ್ಟ್ಯತೆ ಏನು:
11 ಲಕ್ಷದ 24 ಸಾವಿರ ಲಸಿಕೆ ಸಂಗ್ರಹ ಮಾಡಬಹುದಾಗಿದೆ. ವಾಕ್ ಇನ್ ಫ್ರೀಜರ್ ಮತ್ತು ವಾಕ್ ಇನ್ ಕೂಲರ್ ಒಳಗೊಂಡಿದೆ. ಒಂದು ಇನ್ ಕೂಲರ್ ನಲ್ಲಿ, 40 ಲಕ್ಷ ಡೋಸ್ ಸಂಗ್ರಹ ಮಾಡಬಹುದು. ಬೆಂಗಳೂರಿನ ವ್ಯಾಕ್ಸಿನ್ ಸ್ಟೋರೇಜ್ ಸೆಂಟರ್ ನಿಂದ 22 ಜಿಲ್ಲೆಗಳಿಗೆ ಲಸಿಕೆ ಸಾಗಾಟ ಆಗಲಿದೆ. ಕಾರ್ಪೋರೇಷನ್( ಬಿಬಿಎಂಪಿ) ವ್ಯಾಕ್ಸಿನ್ ಸ್ಟೋರ್‍ಗೆ ಲಸಿಕೆ ಸರಬರಾಜು ಆಗಲಿದೆ.

ಲಸಿಕೆ ವಿತರಣೆ ಹೇಗೆ:
ಕರ್ನಾಟಕದಲ್ಲಿ ಆರಂಭದಲ್ಲಿ ಕೋವಿಶೀಲ್ಡ್ ಲಸಿಕೆ ವಿತರಣೆ ಪ್ರಾರಂಭವಾಗಲಿದೆ. ಆರಂಭದಲ್ಲಿ 6 ಲಕ್ಷದ 30 ಸಾವಿರ 524 ಆರೋಗ್ಯ ಸಿಬ್ಬಂದಿಗೆ ಲಸಿಕೆ ವಿತರಣೆ ಮಾಡಲಾಗುತ್ತದೆ. 1 ಲಕ್ಷದ 39 ಸಾವಿರದ 200 ಕೋವಿಶೀಲ್ಡ್ ಲಸಿಕೆ ಬಾಟಲು ಪೊರೈಕೆ ಮಾಡಲಾಗುತ್ತದೆ. 1 ಲಸಿಕೆ ಬಾಟಲ್‍ನಿಂದ 10 ಡೋಸ್ ಲಸಿಕೆಯನ್ನು ಮಾತ್ರ ಕೊಡಬಹುದು. ರಾಜ್ಯದ 2 ಕಡೆ ಎಂದರೆ ಬೆಂಗಳೂರು, ಬೆಳಗಾವಿಯಲ್ಲಿ ಲಸಿಕೆ ಸಂಗ್ರಹವನ್ನು ಮಾಡಲಾಗುತ್ತದೆ.

ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಲಸಿಕೆ ಕೇಂದ್ರ:
ಬೆಂಗಳೂರಲ್ಲಿ 11 ಲಕ್ಷದ 34 ಸಾವಿರ ಕೋವಿಶೀಲ್ಡ್ ಲಸಿಕೆ ಸಂಗ್ರಹವನ್ನು ಮಾಡಲಾಗುತ್ತದೆ. ಬೆಳಗಾವಿಯಲ್ಲಿ 2.5 ಲಕ್ಷದಷ್ಟು ಕೋವಿಶೀಲ್ಡ್ ಲಸಿಕೆ ಸಂಗ್ರಹ ಮಾಡಲಾಗುತ್ತದೆ. ಬೆಳಗಾವಿಯಿಂದ ಬಾಗಲಕೋಟೆ, ಗದಗ, ಕೊಪ್ಪಳ, ವಿಜಯಪುರ, ಧಾರವಾಡ, ಹಾವೇರಿ, ಉತ್ತರಕನ್ನಡಕ್ಕೆ ಲಸಿಕೆ ಪೊರೈಸಲಾಗುತ್ತದೆ. ಉಳಿದ 22 ಜಿಲ್ಲೆಗಳಿಗೆ ಬೆಂಗಳೂರಿನಿಂದಲೇ ಲಸಿಕೆ ಪೊರೈಕೆ ಹಂಚಿಕೆ ಮಾಡುವ ಯೋಜನೆಯನ್ನು ರೂಪಿಸಿಕೊಂಡಿದೆ.

ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಹೇಗೆ?:
ಚಿತ್ರದುರ್ಗ, ಕಲಬುರಗಿ, ದಕ್ಷಿಣ ಕನ್ನಡ, ಮೈಸೂರಲ್ಲಿ ಪ್ರಾದೇಶಿಕ ಲಸಿಕೆ ಸಂಗ್ರಹ ಕೇಂದ್ರವನ್ನು ತೆರೆಯಲಾಗುತ್ತದೆ. ಬೆಂಗಳೂರು, ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಪೋರೇಷನ್ ಲಸಿಕೆ ಸಂಗ್ರಹ ಕೇಂದ್ರ ಇರುತ್ತದೆ. ಪ್ರಾದೇಶೀಕ ಲಸಿಕೆ ಕೇಂದ್ರಗಳಿಂದ 900 ಲಸಿಕೆ ಕ್ಯಾರಿಯರ್ ಮೂಲಕ ಲಸಿಕೆ ಪೊರೈಕೆ ಇರುತ್ತದೆ. ಈಗಾಗಲೇ ಲಸಿಕೆ ಚುಚ್ಚಲು 24 ಲಕ್ಷ ಸಿರಿಂಜ್‍ಗಳನ್ನು ತರಿಸಲಾಗಿದೆ. 18 ಜಿಲ್ಲಾ ಆಸ್ಪತ್ರೆ, 13 ಸರ್ಕಾರಿ ಮೆಡಿಕಲ್ ಆಸ್ಪತ್ರೆಗಳಲ್ಲಿ ಲಸಿಕೆ ವಿತರಣೆ ಇರುತ್ತದೆ. 5 ಖಾಸಗಿ ಮೆಡಿಕಲ್ ಆಸ್ಪತ್ರೆಗಳು, 6 ಖಾಸಗಿ ಆಸ್ಪತ್ರೆಗಳು, 145 ತಾಲೂಕು ಆಸ್ಪತ್ರೆಗಳು, 27 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 19 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಣೆಯನ್ನು ಮಾಡಲಾಗುತ್ತದೆ.

Click to comment

Leave a Reply

Your email address will not be published. Required fields are marked *

Advertisement
Advertisement