Saturday, 15th December 2018

Recent News

ಐವರು ಯುವಕರ ಜೊತೆ ಪ್ರವಾಸಕ್ಕೆ ತೆರಳಿ ಕಾಣೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ

ಹಾಸನ: ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಾಳೆ.

ಹಾಸ್ಟೆಲ್ ನ ಕೊಠಡಿಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೂನ್ 16ರಂದು ಸ್ನೇಹಿತೆ ಮತ್ತು ಐವರು ಯುವಕರೊಂದಿಗೆ ಮೈಸೂರಿಗೆ ತೆರಳಿದ್ದ ವಿದ್ಯಾರ್ಥಿನಿ 17ಕ್ಕೆ ಹಾಸ್ಟೆಲ್‍ಗೆ ಬಂದಿದ್ದಳು. ಇದನ್ನೂ ಓದಿ: ಐವರು ಯುವಕರ ಜೊತೆ ಮೈಸೂರು ಪ್ರವಾಸಕ್ಕೆ ತೆರಳಿದ್ದ 10ನೇ ಕ್ಲಾಸ್ ವಿದ್ಯಾರ್ಥಿನಿ ಮಿಸ್ಸಿಂಗ್!

ಇಬ್ಬರು ವಿದ್ಯಾರ್ಥಿನಿಯರು ಜೂನ್ 17ಕ್ಕೆ ಹಾಸ್ಟೆಲ್ ಸೇರಿಕೊಂಡಿದ್ದಾರೆ. ಮರುದಿನ ಶಾಲೆಗೆ ಹೋಗುವೆ ಅಂತಾ ಹೇಳಿದ್ದ ವಿದ್ಯಾರ್ಥಿನಿ ಮರಳಿ ಹಾಸ್ಟೆಲ್ ಬಂದಿಲ್ಲವೆಂದು ಆಕೆಯ ಸ್ನೇಹಿತೆಯರು ಹೇಳುತ್ತಾರೆ. ಇತ್ತ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇತ್ತ ವಿದ್ಯಾರ್ಥಿನಿಯ ಪೋಷಕರು ನಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಪ್ರವಾಸಕ್ಕೆ ತೆರಳಿದ್ದ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *