Friday, 21st February 2020

ಗುಣಾತ್ಮಕ ಕಲಿಕೆಗಾಗಿ SSLC ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆ – ಈ ವರ್ಷದಿಂದಲೇ ಜಾರಿ

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾವಣೆ ಆಗುತ್ತಿದ್ದು, ಹೊಸ ಮಾದರಿ ಪ್ರಶ್ನೆ ಪತ್ರಿಕೆ ಜಾರಿ ಮಾಡಲು ಬೋರ್ಡ್ ನಿರ್ಧಾರ ಮಾಡಿದೆ. ಅಲ್ಲದೆ ಪ್ರಸಕ್ತ ವರ್ಷದಿಂದಲೇ ನೂತನ ಪ್ರಶ್ನೆ ಪತ್ರಿಕೆ ಮಾದರಿ ಚಾಲನೆ ನೀಡಿದೆ.

ವಿದ್ಯಾರ್ಥಿಗಳು ಕಲಿಕಾ ಗುಣಮಟ್ಟವನ್ನು ವೃದ್ಧಿಸಲು ಕಂಠಪಾಠ ಮಾಡುವ ಪದ್ಧತಿಯನ್ನು ತಪ್ಪಿಸಿ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆಯನ್ನು ಬೆಳೆಸಲು ಬಹು ಆಯ್ಕೆ ಪ್ರಶ್ನೆಗಳನ್ನು ಕಡಿಮೆ ಮಾಡಲು ಮುಂದಾಗಿದೆ.

ಕೌಶಲ್ಯ ಹಾಗೂ ವಿವರಣಾತ್ಮಕ ಹೊಂದಿರುವ ದೀರ್ಘಾವಧಿ ಪ್ರಶ್ನೆಗಳಿಗೆ ಆದ್ಯತೆ ನೀಡಿ, ಪ್ರಶ್ನೆಗಳ ಸಂಖ್ಯೆಗಳನ್ನು ಕಡಿಮೆ ಮಾಡಿ, ಕಠಿಣತೆಯ ಮಟ್ಟವನ್ನು ಎಲ್ಲಾ ವಿಷಯಗಳಲ್ಲೂ ಸಮಾನವಾಗಿ ರೂಪಿಸಿ, ಏಕ ರೂಪತರಲು ಮುಖ್ಯಾಂಶಾಧಾರಿತ/ವಿಷಯಾಧಾರಿತ ಅಂಕಗಳನ್ನು ಹಂಚಿಕೆ ಮಾಡಲು ಇಲಾಖೆ ಮುಂದಾಗಿದೆ.

ಪ್ರಯೋಜನ ಏನು?
ಪ್ರಶ್ನೆಪತ್ರಿಕೆಯಲ್ಲಿ 40 ಪ್ರಶ್ನೆಗಳ ಬದಲಾಗಿ 38 ಪ್ರಶ್ನೆಗಳಿರುತ್ತದೆಯೇ ಹೊರತು ಹೆಚ್ಚಿನ ಬದಲಾವಣೆ ಏನೂ ಇರುವುದಿಲ್ಲ. ಕಳೆದ ವರ್ಷ ನೀಲನಕಾಶೆ ನೀಡಿರುವುದಿಲ್ಲ. ಆದರೆ ಘಟಕವಾರು ಅಂಕಗಳ ಹಂಚಿಕೆ ನೀಡಲಾಗಿತ್ತು. ಇದರಿಂದ ಶಿಕ್ಷಕರು ಕಡಿಮೆ ಅಂಕಗಳ ಹಂಚಿಕೆ ಅಂದರೆ 1 ಅಥವಾ 2 ಅಂಕ ಇರುವಂತಹ ಪಾಠಗಳನ್ನು ಭೋದಿಸದೇ ಇರುವಂತಹ ಸಂದರ್ಭಗಳು ಅಧಿಕವಾಗಿರುತ್ತದೆ. ಹಾಗಾಗಿ ಈ ವರ್ಷದಿಂದ ವಿಷಯಾಧಾರಿತ(ಥೀಮ್‍ವೈಸ್) ಅಂಕಗಳ ಹಂಚಿಕೆಯನ್ನು ನಿಗದಿ ಮಾಡಲಾಗಿದ್ದು ಈ ಕ್ರಮ ಹೆಚ್ಚು ವೈಜ್ಞಾನಿಕವಾಗಿದ್ದು ಹಾಗೂ ತಾರ್ಕಿಕವಾದದ್ದು ಆಗಿದೆ.

ಇದರಿಂದಾಗಿ ಶಿಕ್ಷಕರು ಎಲ್ಲಾ ಅಧ್ಯಾಯಗಳನ್ನು ಬೋಧನೆ ಮಾಡುವುದು ಕಡ್ಡಾಯವಾಗಿರುತ್ತದೆ. ಪ್ರಸ್ತುತ ಪರೀಕ್ಷಾ ಪದ್ಧತಿಯನ್ನು ಸಾಧಾರಣವಾಗಿ ಕೇಳಿ ಬರುವ ಸಾಮೂಹಿಕ ನಕಲನ್ನು ತಡೆಗಟ್ಟಬಹುದು. ಮಕ್ಕಳಲ್ಲಿ ತಾರ್ಕಿಕ ಚಿಂತನೆಯನ್ನು ಮೂಡಿಸಬಹುದು. ದೀರ್ಘ ಉತ್ತರದ ಪ್ರಶ್ನೆಗಳಿಂದ ಮಕ್ಕಳಲ್ಲಿ ಬರವಣಿಗೆಯ ಕೌಶಲ್ಯ ಮೂಡಿಸಬಹುದು. ಮಕ್ಕಳಲ್ಲಿ ಅಭಿವ್ಯಕ್ತಿ ಕೌಶಲ್ಯ ಬೆಳೆಸುತ್ತದೆ. ಶಿಕ್ಷಕರಲ್ಲಿ ಬೋಧನಾ ಸಾಮಥ್ರ್ಯ ಹೆಚ್ಚಾಗುತ್ತದೆ.

ಪ್ರಶ್ನೆ ಪ್ರತಿಕೆಯ ಸ್ವರೂಪ:
1. ಬಹು ಆಯ್ಕೆಯ ಪ್ರಶ್ನೆಗಳ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ
2. ಒಂದು ಅಂಕದ ಪ್ರಶ್ನೆಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ
3. ಎರಡು ಅಂಕದ ಪ್ರಶ್ನೆಗಳ ಸಂಖ್ಯೆಯನ್ನು 16 ರಿಂದ 8ಕ್ಕೆ ಇಳಿಸಲಾಗಿದೆ
4. ಮೂರು ಅಂಕದ ಪ್ರಶ್ನೆಗಳ ಸಂಖ್ಯೆಯನ್ನಯ 6 ರಿಂದ 9ಕ್ಕೆ ಹೆಚ್ಚು ಮಾಡಲಾಗಿದೆ
5. ಹೊಸದಾಗಿ 5 ಅಂಕದ ಪ್ರಶ್ನೆ ಒಂದನ್ನು ಸೇರಿಸಲಾಗಿದೆ
6. ಕಠಿಣತೆಯ ಮಟ್ಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

2017-18, 2018-19 ಹಾಗೂ ಹಿಂದಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಸಹ ಈ ಮಾದರಿಯ ಪ್ರಶ್ನೆ ಪತ್ರಿಕೆಯಲ್ಲಿ ಪರೀಕ್ಷೆ ಬರೆಯಬೇಕು ಎಂದು ಬೋರ್ಡ್ ತಿಳಿಸಿದೆ.

ಹೊಸ ಮಾದರಿಯ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದಂತೆ ಇಲಾಖೆ ನೀಡಿರುವ ಮಾಹಿತಿಯ ಪಿಡಿಎಫ್ ಪ್ರತಿ ಪಡೆಯಲು ಕ್ಲಿಕ್ ಮಾಡಿ: SSLC-QP CHANGES2019

Leave a Reply

Your email address will not be published. Required fields are marked *