Connect with us

ಚೊಚ್ಚಲ ಬಾರಿಗೆ ಟೀಂ ಇಂಡಿಯಾ ಪರ ಆಡಲು ಐವರು ಆಟಗಾರರಿಗೆ ಕರೆ

ಚೊಚ್ಚಲ ಬಾರಿಗೆ ಟೀಂ ಇಂಡಿಯಾ ಪರ ಆಡಲು ಐವರು ಆಟಗಾರರಿಗೆ ಕರೆ

ಮುಂಬೈ: ಕ್ರಿಕೆಟಿಗರಿಗೆ ನಾವು ಒಮ್ಮೆಯಾದರೂ ಭಾರತ ತಂಡದ ಪರ ಆಡಬೇಕೆಂಬ ಕನಸಿರುತ್ತದೆ. ಹೀಗೆ ಕನಸು ಕಾಣುತ್ತಿದ್ದ ಐವರು ಆಟಗಾರರಿಗೆ ಮೊದಲ ಬಾರಿಗೆ ಟೀ ಇಂಡಿಯಾ ಪರ ಆಡಲು ಕರೆಬಂದಿದೆ.

ಮುಂಬರುವ ಜುಲೈ ತಿಂಗಳಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಇತರೆ ಹಿರಿಯ ಆಟಾಗರರು ಇಂಗ್ಲೆಂಡ್ ಪ್ರವಾಸದಲ್ಲಿರುವುದರಿಂದ ಹೊಸ ಪ್ರತಿಭೆಗಳನ್ನೊಳಗೊಂಡ ಭಾರತ ತಂಡವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. ಅನುಭವಿ ಆಟಗಾರ ಶಿಖರ್ ಧವನ್‍ಗೆ ತಂಡದ ನಾಯಕತ್ವ ನೀಡಲಾಗಿದ್ದು, ಭುವನೇಶ್ವರ್ ಕುಮಾರ್ ಅವರನ್ನು ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ. ಇದನ್ನೂ ಓದಿ:ಅಂದು ಧೋನಿಯೊಂದಿಗಿದ್ದ ಪುಟ್ಟ ಬಾಲಕ ಇಂದು ಸ್ಟಾರ್ ಕ್ರಿಕೆಟರ್!

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಲಂಕಾ ಪ್ರವಾಸಕ್ಕೆ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಐಪಿಎಲ್‍ನಲ್ಲಿ ಅಬ್ಬರಿಸಿದ್ದ ಯುವ ಬ್ಯಾಟ್ಸ್‍ಮ್ಯಾನ್‍ಗಳಾದ ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ನಿತೀಶ್ ರಾಣಾ ಮತ್ತು ವೇಗಿ ಚೇತನ್ ಸಕಾರಿಯಾ, ಆಲ್‍ರೌಂಡರ್ ಕೃಷ್ಣಪ್ಪ ಗೌತಮ್ ಅವರು ಚೊಚ್ಚಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಈ ಎಲ್ಲಾ ಆಟಗಾರರು ಕೂಡ ಐಪಿಎಲ್‍ನಲ್ಲಿ ಮತ್ತು ದೇಶಿ ಟೂರ್ನಿಯಲ್ಲಿ ಮಿಂಚು ಹರಿಸಿರುವ ಪರಿಣಾಮ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆರ್‍ಸಿಬಿ ತಂಡದ ಪರ ಆಡುವ ದೇವದತ್ ಪಡಿಕ್ಕಲ್ ಐಪಿಎಲ್‍ನಲ್ಲಿ ಒಟ್ಟು 21 ಪಂದ್ಯವಾಡಿ 1 ಶತಕ ಮತ್ತು 5 ಅರ್ಧಶತಕ ಸಹಿತ 668 ರನ್ ಗಳಿಸಿದ್ದಾರೆ. ಇದನ್ನೂ ಓದಿ: 2007ರ ಟಿ20ಗೆ ನಾನು ನಾಯಕನಾಗುವ ನಿರೀಕ್ಷೆ ಹೊಂದಿದ್ದೆ, ಆದರೆ ಧೋನಿ ಆಯ್ಕೆಯಾದ್ರು – ಯುವಿ

ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಋತುರಾಜ್ ಗಾಯಕ್ವಾಡ್ ಅವರಿಗೂ ಮೊದಲ ಬಾರಿಗೆ ಟೀಂ ಇಂಡಿಯಾ ಪರ ಆಡುವ ಅವಕಾಶ ಒದಗಿಬಂದಿದೆ. ಸಿಎಸ್‍ಕೆ ಪರ ಗಾಯಕ್ವಾಡ್ ಒಟ್ಟು 13 ಪಂದ್ಯಗಳನ್ನು ಆಡಿದ್ದು 5 ಅರ್ಧಶತಕ ಸಹಿತ 400 ರನ್ ಸಿಡಿಸಿದ್ದಾರೆ.

ಆಟಗಾರನಾಗಿ ಗುರುತಿಸಿಕೊಂಡಿರುವ ನಿತೀಶ್ ರಾಣಾ ಕೂಡ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಅವರು ಕೋಲ್ಕತ್ತಾ ತಂಡದ ಪರ ಒಟ್ಟು 67 ಪಂದ್ಯವಾಡಿದ್ದು, 13 ಅರ್ಧಶತಕ ಸಹಿತ ಒಟ್ಟು 1638 ರನ್ ಚಚ್ಚಿದ್ದಾರೆ. ಇದನ್ನೂ ಓದಿ:ಲಂಕಾ ಪ್ರವಾಸಕ್ಕೆ ಶಿಖರ್ ಧವನ್ ನಾಯಕ-ತಂಡದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ

2021ರ ಐಪಿಎಲ್‍ನಲ್ಲಿ ಭಾರೀ ಸದ್ದು ಮಾಡಿದ್ದ ರಾಜಸ್ಥಾನ ರಾಯಲ್ಸ್ ತಂಡದ ಯುವ ವೇಗದ ಬೌಲರ್ ಚೇತನ್ ಸಕಾರಿಯಾ ಅವರಿಗೂ ರಾಷ್ಟ್ರೀಯ ತಂಡದ ಬಾಗಿಲು ತೆರೆದುಕೊಂಡಿದೆ. ಜಕಾರಿಯಾ ರಾಜಸ್ಥಾನ ತಂಡದ ಪರ ಒಟ್ಟು 7 ಪಂದ್ಯವಾಡಿ 7 ವಿಕೆಟ್ ಕಬಳಿಸಿದ್ದಾರೆ.

ಈ ಬಾರಿ ಭಾರತ ತಂಡಕ್ಕೆ ಕನ್ನಡಿಗ ಆಲ್‍ರೌಂಡರ್ ಕೃಷ್ಣಪ್ಪ ಗೌತಮ್ ಕೂಡ ಆಯ್ಕೆಯಾಗಿದ್ದಾರೆ. ಕೆ ಗೌತಮ್ ಈ ಬಾರಿಯ ಐಪಿಎಲ್‍ನಲ್ಲಿ ಆಡದೇ ಇದ್ದರು ಕೂಡ ದೇಶಿ ಟೂರ್ನಿಯಲ್ಲಿ ಕರ್ನಾಟಕದ ಪರ 42 ಪಂದ್ಯಗಳಿಂದ 1045 ರನ್ ಮತ್ತು 166 ವಿಕೆಟ್ ಪಡೆದಿದ್ದಾರೆ.

ಉಳಿದಂತೆ ತಂಡದಲ್ಲಿ ವಿಶೇಷ ಎಂಬಂತೆ 2 ಜೋಡಿ ಸಹೋದರರು ಇದ್ದಾರೆ. ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ ಒಂದು ಜೋಡಿಯಾದರೆ, ದೀಪಕ್ ಚಹರ್ ಮತ್ತು ರಾಹುಲ್ ಚಹರ್ ಇನ್ನುಂದು ಜೋಡಿಯಾಗಿದೆ. ಇದನ್ನೂ ಓದಿ: ಕೊಹ್ಲಿಗೆ ಓರ್ವ ನ್ಯೂಜಿಲೆಂಡ್ ಬೌಲರ್‌ನಿಂದ ಕಂಟಕವಿದೆ ಎಂದ ಬಾಲ್ಯದ ಕೋಚ್

ಬಹುತೇಕ ಹೊಸಮುಖಗಳೊಂದಿಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿರಲಿದ್ದಾರೆ. ಶ್ರೀಲಂಕಾ ವಿರುದ್ಧ ಭಾರತ ತಂಡ 3 ಏಕದಿನ ಮತ್ತು 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಕೊರೊನಾ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಪಂದ್ಯಗಳು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಏಕದಿನ ಪಂದ್ಯಗಳು ಜುಲೈ 13, 16 ಮತ್ತು 18 ರಂದು ನಡೆಯಲಿದ್ದು, ಟಿ20 ಪಂದ್ಯಗಳು ಜುಲೈ 21, 23 ಮತ್ತು 25 ರಂದು ನಡೆಯಲಿದೆ.

Advertisement
Advertisement