Advertisements

ಶ್ರೀಲಂಕಾದಲ್ಲಿ ರೊಚ್ಚಿಗೆದ್ದ ಜನ – ಸಂಸದ, ಮಾಜಿ ಸಚಿವರ ಮನೆಗೆ ಬೆಂಕಿ

ಕೊಲಂಬೊ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸರ್ಕಾರದ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಸೋಮವಾರ ಪ್ರತಿಭಟನೆ ತೀವ್ರಗೊಂಡಿದ್ದು, ಸಂಸದ ಹಾಗೂ ಮಾಜಿ ಸಚಿವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

Advertisements

ಮಾಜಿ ಸಚಿವ ಜಾನ್ಸನ್ ಫರ್ನಾಂಡೋ ಅವರ ಮೌಂಟ್ ಲ್ಯಾವಿನಿಯಾ ನಿವಾಸ ಮತ್ತು ಸಂಸದ ಸನತ್ ನಿಶಾಂತ ಅವರ ಮನೆ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಬುಗಿಲೆದ್ದ ಆಕ್ರೋಶಕ್ಕೆ ಆಡಳಿತ ಪಕ್ಷದ ಸಂಸದ ಬಲಿ

Advertisements

ಸೋಮವಾರ ಕರ್ಫ್ಯೂ-ಬೌಂಡ್ ದ್ವೀಪದಾದ್ಯಂತ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟಿಸಿದರು. ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸ ಅವರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜಪಕ್ಸ ರಾಜೀನಾಮೆ ನೀಡಿದ್ದಾರೆ.

ರಾಜಧಾನಿಯ ಹೊರಗೆ ನಡೆದ ಘರ್ಷಣೆಯ ಸಮಯದಲ್ಲಿ ಸಂಸದರೊಬ್ಬರು ಸಾವನ್ನಪ್ಪಿದ ಕೆಲವೇ ಗಂಟೆಗಳ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ರಾಜೀನಾಮೆ

Advertisements

ರಾಜಧಾನಿ ಕೊಲಂಬೊದಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 138 ಜನರು ಗಾಯಗೊಂಡು ಕೊಲಂಬೊ ರಾಷ್ಟ್ರೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.

Advertisements
Exit mobile version