Connect with us

Corona

ಮುಂದುವರಿದ ಕೊರೊನಾ ಆರ್ಭಟ- 24 ಗಂಟೆಯಲ್ಲಿ 63,489 ಹೊಸ ಪ್ರಕರಣ

Published

on

ನವದೆಹಲಿ: ಕಳೆದ 24 ಗಂಟೆಯಲ್ಲಿ 63,489 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ ಮಹಾಮಾರಿ 944 ಜನರನ್ನು ಬಲಿ ಪಡೆದುಕೊಂಡಿದೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25,89,682ಕ್ಕೆ ಏರಿಕೆಯಾಗಿದ್ದು, 6,77,444 ಸಕ್ರಿಯ ಪ್ರಕರಣಗಳಿವೆ. 18,62,258 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರೆ, ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 49,980ಕ್ಕೇರಿಕೆಗೊಂಡಿದೆ. ನಿನ್ನೆ 7,46,608 ಜನರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಿದ್ದು ಭಾನುವಾರ 12,020 ಪ್ರಕರಣಗಳು ಬೆಳಕಿಗೆ ಬಂದಿವೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 5,84,754ಕ್ಕೇರಿಕೆ ಆಗಿದೆ. ಇದುವರೆಗೂ 19,749 ಮಂದಿ ಸಾವನ್ನಪ್ಪಿದ್ದು, 1,56,719 ಸಕ್ರಿಯ ಪ್ರಕರಣಗಳಿವೆ.

Click to comment

Leave a Reply

Your email address will not be published. Required fields are marked *