Connect with us

Food

ಚಳಿಗೆ ಖಾರ-ಖಾರವಾಗಿ ಸೋಯಾ ಕಬಾಬ್ ಮಾಡಿ

Published

on

ಇಂದು ಭಾನುವಾರ ಎಲ್ಲರೂ ಮನೆಯಲ್ಲಿಯೇ ಇರುತ್ತಾರೆ. ಸ್ವಲ್ಪ ಮಟ್ಟಿಗೆ ಚಳಿಯ ವಾತಾವರಣದಿಂದ ಕೂಡಿದ್ದು, ಹೀಗಾಗಿ ಬಿಸಿಬಿಸಿಯಾಗಿ ಖಾರವಾಗಿ ಏನಾದರೂ ತಿನ್ನಬೇಕು ಎಂದನಿಸುತ್ತದೆ. ಆದ್ದರಿಂದ ನಿಮಗಾಗಿ ಸಿಂಪಲ್ ಆಗಿ ಸೋಯಾ ಕಬಾಬ್ ಮಾಡುವ ವಿಧಾನ ಇಲ್ಲಿದೆ..

ಬೇಕಾಗುವ ಸಾಮಾಗ್ರಿಗಳು
1. ಆಲೂಗಡ್ಡೆ – 3
2. ಬೇಯಿಸಿದ ತರಕಾರಿ – 1 ಕಪ್
3. ಕತ್ತಂಬರಿ ಸೊಪ್ಪು – ಸ್ವಲ್ಪ
4. ಹಸಿಮೆಣಸಿನಕಾಯಿ – 2-3
5. ಶುಂಠಿ- ಬೆಳ್ಳುಳ್ಳಿ – ಸ್ವಲ್ಪ
6. ಸೋಯಾ ಫ್ಲೋರ್ – 1 ಕಪ್
7. ಚೀಸ್ – 2 ಚಮಚ
8. ರವೆ – ಅರ್ಧ ಕಪ್
9. ಎಣ್ಣೆ – ಕರಿಯಲು

ಮಾಡುವ ವಿಧಾನ
* ಆಲೂಗಡ್ಡೆ ಬೇಯಿಸಿ ಸ್ಮ್ಯಾಶ್ ಮಾಡಿ ಮೆತ್ತಗೆ ಮಾಡಿಕೊಳ್ಳಿ.
* ಶುಂಠಿ, ಬೆಳ್ಳುಳ್ಳಿ, ಮೆಣಸಿಕಾಯಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
* ನಂತರ ಬೇಯಿಸಿದ ತರಕಾರಿ ಹಾಗೂ ಎಲ್ಲಾ ಸಾಮಾಗ್ರಿಗಳನ್ನು ಒಂದು ಪಾತ್ರೆಯಲ್ಲಿ ಬೆರೆಸಿಕೊಂಡು ಗಟ್ಟಿಯಾದ ಮಿಶ್ರಣ ಸಿದ್ಧ ಮಾಡಿಕೊಳ್ಳಿ
* ನಂತರ ಕಬಾಬ್ ಆಕಾರಕ್ಕೆ ಮಾಡಿಕೊಂಡು ರವೆಯಲ್ಲಿ ಉರುಳಾಡಿಸಿ ಎಣ್ಣೆಯಲ್ಲಿ ಹಾಕಿ ಗರಿಗರಿಯಾಗಿ ಕರಿಯಿರಿ.
* ಈಗ ಸಾಸ್ ನೊಂದಿಗೆ ಸವಿಯಿರಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv