ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಲಕ್ಕಿ ಚಾರ್ಮ್ ಎಂದೇ ಫೇಮಸ್ ಆಗಿರೋ ಪೂಜಾ ಹೆಗ್ಡೆ ಇದೀಗ ಸಿನಿಮಾಗಳಿಗಿಂತ ಟ್ರೋಲ್ ವಿಚಾರವಾಗಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ದಳಪತಿ ವಿಜಯ್ ಫ್ಯಾನ್ಸ್ ಅದ್ಯಾಕೋ ಪೂಜಾ ಹೆಗ್ಡೆ ಮೇಲೆ ಕಿಡಿಕಾರಿದ್ದಾರೆ. ಈ ನಟಿಯನ್ನ ಐರೆನ್ ಲೆಗ್ ಅಂತಾ ಕರೆದು ಟ್ರೋಲ್ ಮಾಡ್ತಿದ್ದಾರೆ.
ಕರಾವಳಿ ಬ್ಯೂಟಿ ಪೂಜಾ ಅಭಿನಯಿಸಿರುವ `ಅರವಿಂದ ಸಮೇತ ವೀರ ರಾಘವ’, ʻಅಲ್ಲಾ ವೈಕುಂಠಪುರಂಮುಲೋʼ, ʻಮಹರ್ಷಿʼ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಆದರೆ ಈಗ ಪೂಜಾ ನಟನೆಯ `ರಾಧೆ ಶ್ಯಾಮ್’ ಮತ್ತು `ಬೀಸ್ಟ್’ ಚಿತ್ರಗಳು ಗಲ್ಲಾಪೆಟ್ಟಿಗೆಯ ಕಲೆಕ್ಷನ್ ಮಾಡೋದರಲ್ಲಿ ಸೋತಿದೆ. ಹಾಗಾಗಿ ದಳಪತಿ ವಿಜಯ್ ಫ್ಯಾನ್ಸ್ ಪೂಜಾ ಮೇಲೆ ಫುಲ್ ಗರಂ ಆಗಿದ್ದಾರೆ. ಇದನ್ನೂ ಓದಿ:ಕನ್ನಡದಲ್ಲೂ ಬಂತು ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ
ʻರಾಧೆ ಶ್ಯಾಮ್ʼ ಮತ್ತು ʻಬೀಸ್ಟ್ʼ ಚಿತ್ರದ ಸೋಲಿಗೆ ಪೂಜಾರನ್ನ ಹೊಣೆ ಮಾಡ್ತಿದ್ದು, ವಿಜಯ್ ಅಭಿಮಾನಿಗಳು ಪೂಜಾರನ್ನು ಐರೆನ್ ಲೆಗ್ ಎಂದು ಟ್ರೋಲ್ ಮಾಡ್ತಿದ್ದಾರೆ. ಇವರ ಜತೆಗೆ ಪ್ರಭಾಸ್ ಫ್ಯಾನ್ಸ್ ಕೂಡ ಸೇರಿಕೊಂಡಿದ್ದಾರೆ. ಸದ್ಯ ಸಾಲು ಸಾಲು ಸ್ಟಾರ್ ಸಿನಿಮಾಗಳಿಗೆ ನಾಯಕಿಯಾಗಿ ನಟಿಸುತ್ತಿರೋ ಪೂಜಾಗೆ ಬೇಡಿಕೆ ಕಮ್ಮಿಯಾಗಿಲ್ಲ. ಪೂಜಾ ನಟನೆಯ ಮುಂದಿನ ಚಿತ್ರಗಳ ಸಕ್ಸಸ್ ಟ್ರೋಲಿಗರಿಗೆ ಉತ್ತರವಾಗುತ್ತಾ ಅಂತಾ ಕಾದುನೋಡಬೇಕಿದೆ.