Connect with us

Corona

ಪ್ರೇಕ್ಷಕರ ಗ್ಯಾಲರಿಯಲ್ಲಿ ಸೆಕ್ಸ್ ಡಾಲ್ಸ್ ಇಟ್ಟ ಫುಟ್ಬಾಲ್ ಟೀಂ

Published

on

– ಕೊನೆಗೆ ಪ್ರೇಕ್ಷಕರ ಕ್ಷಮೆಯಾಚಿಸಿದ ಆಡಳಿತ ಮಂಡಳಿ

ಸಿಯೋಲ್: ದಕ್ಷಿಣ ಕೊರಿಯಾದ ವೃತ್ತಿಪರ ಫುಟ್ಬಾಲ್ ತಂಡವೊಂದು ವಾರಾಂತ್ಯದಲ್ಲಿ ನಡೆಸಿದ ಪಂದ್ಯದಲ್ಲಿ ಅಭಿಮಾನಿಗಳ ಬದಲಾಗಿ ಸೆಕ್ಸ್ ಡಾಲ್ಸ್ ಗಳನ್ನು ಇಟ್ಟು ಫಜೀತಿಗೆ ಸಿಲುಕಿದೆ.

ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಕ್ರಿಕೆಟ್, ಫುಟ್ಬಾಲ್, ಬೇಸ್‍ಬಾಲ್ ಸೇರಿದಂತೆ ಅನೇಕ ಟೂರ್ನಿಗಳು ಹಾಗೂ ಕ್ರೀಡಾಕೂಟಗಳು ಮುಂದೂಡಲ್ಪಟ್ಟರೆ, ಕೆಲವು ರದ್ದಾಗಿವೆ. ಹೀಗಿರುವಾಗ ಖಾಲಿ ಮೈದಾನದಲ್ಲಿ ಮೇ 16ರಂದು ಮೊದಲ ಬಾರಿಗೆ ಫುಟ್ಬಾಲ್ ಪಂದ್ಯ ನಡೆಸಿದ ಹೆಗ್ಗಳಿಕೆಗೆ ದಕ್ಷಿಣ ಕೋರಿಯಾದ ಕೆ-ಲೀಗ್ ಪಾತ್ರವಾಗಿದೆ. ಜೊತೆಗೆ ತನ್ನ ತಪ್ಪಿನಿಂದ ಭಾರೀ ಟೀಕೆಗೂ ಗುರಿಯಾಗಿದೆ.

ಪ್ರೇಕ್ಷಕರಿಲ್ಲದೆ ಖಾಲಿ ಸ್ಟೇಡಿಯಂನಲ್ಲಿ ಪಂದ್ಯ ನಡೆಸುವುದು ಆಟಗಾರರಿಗೆ ಸ್ಫೂರ್ತಿ ತರುವುದಿಲ್ಲ ಎಂದು ಕೆ-ಲೀಗ್ ಕ್ಲಬ್ ಭಾವಿಸಿತ್ತು. ಈ ಹಿನ್ನೆಲೆ ಗ್ವಾಂಗ್ಜು ಎಫ್‍ಸಿ ವಿರುದ್ಧದ ಪಂದ್ಯಕ್ಕೆ ಎಫ್‍ಸಿ ಸಿಯೋಲ್ ತಂಡವು ಗೊಂಬೆಗಳನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಇರಿಸಿತ್ತು. ಈ ಆಟವನ್ನು ವಿಶ್ವಾದ್ಯಂತ ಅನೇಕ ಅಭಿಮಾನಿಗಳು ವೀಕ್ಷಿಸಿದ್ದರು.

ಪ್ರೇಕ್ಷಕರ ಗ್ಯಾಲರಿಯಲ್ಲಿ ಇರಿಸಿದ್ದ ಗೊಂಬೆಗಳಲ್ಲಿ ಕೆಲವು ಸೆಕ್ಸ್ ಡಾಲ್ಸ್ ಗಳು ಎಂದು ಗುರುತಿಸಿದ್ದಾರೆ. ಇದರಿಂದಾಗಿ ಕೆ-ಲೀಗ್ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದರು. ಈ ಸಂಬಂಧ ಕೆ-ಲೀಗ್ ಹಾಗೂ ಗೊಂಬೆಗಳನ್ನು ಪೂರೈಕೆ ಮಾಡಿದವರು ಪ್ರೇಕ್ಷಕರ ಕ್ಷಮೆ ಕೋರಬೇಕು. ಅಷ್ಟೇ ಅಲ್ಲದೆ ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದ್ದಂತೆ ಕೆ-ಲೀಗ್‍ನ ಎಫ್‍ಸಿ ಸಿಯೋಲ್ ಆಡಳಿತ ಮಂಡಳಿಯು ಸಾರ್ವಜನಿಕರ ಕ್ಷಮೆ ಕೋರಿದೆ. “ಆಟಗಾರರನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಟೇಡಿಯಂನಲ್ಲಿ ಗೊಂಬೆಗಳನ್ನು ಇರಿಸಲಾಗಿತ್ತು. ಅವು ಸೆಕ್ಸ್ ಡಾಲ್‍ಗಳು ಎನ್ನುವುದು ತಿಳಿದಿರಲಿಲ್ಲ. ಈ ತಪ್ಪಿಗೆ ಕ್ಷಮೆ ಕೋರುತ್ತೇವೆ ಎಂದು ಎಫ್‍ಸಿ ಸಿಯೋಲ್ ಕ್ಷಮೆಯಾಚಿಸಿದೆ.