Crime
26 ವರ್ಷದ ನಟಿ, ರೂಪದರ್ಶಿ ನಿಧನ

ನಿಯೋಲ್: ದಕ್ಷಿಣ ಕೊರಿಯಾದ ನಟಿ ರೂಪದರ್ಶಿ ಸಾಂಗ್ ಯೂ ಜಂಗ್ 26ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ರೂಪದರ್ಶಿ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಆಕೆಯ ಸಾವಿನ ಕುರಿತಾಗಿ ಸಬ್ಲೈಮ್ ಆರ್ಟಿಸ್ಟ್ ಏಜೆಸ್ಸಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದೆ. ಜನವರಿ 23 ರಂದು ರೂಪದರ್ಶಿ ಸಾವನ್ನಪ್ಪಿದ್ದಳೆ. ಆಕೆಯ ಕುಟುಂಬಸ್ಥರು ನಿನ್ನೆ ಅಂತ್ಯಕ್ರಿಯೆಯನ್ನು ಮಾಡಿದ್ದಾರೆ.
ಮೃತ ರೂಪದರ್ಶಿ ಸಾಂಗ್ನ ಆಪ್ತರೊಬ್ಬರು ಹೇಳುವ ಪ್ರಕಾರ ಸಾಂಗ್ ಯೂ ಜಂಗ್ ನನ್ನ ಆಪ್ತ ಸ್ನೇಹಿತರಾಗಿದ್ದು, ಅವರು ಎಲ್ಲರೊಂದಿಗೆ ಸಂತೋಷದಿಂದ ಮಾತನಾಡುತ್ತಿದ್ದರು. ಆಕೆ ಅದ್ಭುತ ಮತ್ತು ಉತ್ತಮ ನಟಿಯಾಗಿದ್ದಳು. ಯಾವುದೇ ಕೆಲಸವನ್ನಾದರೂ ಉತ್ಸಾಹದಿಂದ ಮಾಡುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
