Saturday, 25th May 2019

Recent News

ಕೆಎಫ್‍ಸಿಯಲ್ಲಿ ಪುಕ್ಕಟ್ಟೆ ತಿನ್ನುತ್ತಿದ್ದ ವಿದ್ಯಾರ್ಥಿ ವರ್ಷದ ಬಳಿಕ ಅರೆಸ್ಟ್

ಕೇಪ್‍ಟೌನ್: ಕೆಎಫ್‍ಸಿಯಲ್ಲಿ ಒಂದು ವರ್ಷದಿಂದ ಉಚಿತವಾಗಿ ತಿನ್ನುತ್ತಿದ್ದ 27 ವರ್ಷದ ವಿದ್ಯಾರ್ಥಿಯನ್ನು ವರ್ಷದ ಬಳಿಕ ಅರೆಸ್ಟ್ ಮಾಡಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಈ ಘಟನೆ ನಡೆದಿದೆ.

ಬಂಧಿತ ವಿದ್ಯಾರ್ಥಿ ಕ್ವಾಜುಲ್-ನಾಟಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಆದರೆ ಅಧಿಕಾರಿಗಳು ವಿದ್ಯಾರ್ಥಿಯ ಹೆಸರನ್ನು ಬಹಿರಂಗಗೊಳಿಸಿಲ್ಲ. ಕೆಎಫ್‍ಸಿಗೆ ಬರುತ್ತಿದ್ದ ವಿದ್ಯಾರ್ಥಿ ತಾನೋರ್ವ ಹಿರಿಯ ಅಧಿಕಾರಿಯಾಗಿದ್ದು, ಪರಿಶೀಲನೆಗೆ ಬಂದಿದ್ದೇನೆ ಎಂದು ಹೇಳಿ ಉಚಿತವಾಗಿ ತನಗೆ ಬೇಕಾದ ಆಹಾರವನ್ನು ತಿನ್ನುತ್ತಿದ್ದನು. ಹೀಗೆ ಪ್ರತಿನಿತ್ಯ ಬಂದು ಪರಿಶೀಲನೆ ಹೆಸರಲ್ಲಿ ಪುಕ್ಕಟ್ಟೆ ತಿಂದು ಹೋಗುತ್ತಿದ್ದನು.

ಪ್ರತಿಬಾರಿಯೂ ಕೆಎಫ್‍ಸಿ ಕೇಂದ್ರಕ್ಕೆ ಅಧಿಕಾರಿಯಂತೆ ಬಂದು ತನ್ನನ್ನು ಕೆಎಫ್‍ಸಿಯ ಕೇಂದ್ರ ಕಚೇರಿಯಿಂದ ಕಳುಹಿಸಲಾಗಿದೆ. ಕೆಎಫ್‍ಸಿಯಲ್ಲಿ ನೀಡುತ್ತಿರುವ ಸೇವೆ, ಆಹಾರದ ಗುಣಮಟ್ಟತೆ ಮತ್ತು ರುಚಿಯನ್ನು ಪರಿಶೀಲಿಸುವುದು ತನ್ನ ಕೆಲಸವೆಂದು ಅಲ್ಲಿಯ ಉದ್ಯೋಗಿಗಳಿಗೆ ಹೇಳಿ ನಂಬಿಸಿದ್ದನು.

ಪತ್ರಕರ್ತರೊಬ್ಬರು ವಿದ್ಯಾರ್ಥಿಯ ಬಂಧನದ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದೂವರೆಗೂ ಈ ಟ್ವೀಟ್ 62 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು 27 ಸಾವಿರಕ್ಕೂ ಅಧಿಕ ರೀಟ್ವೀಟ್ ಆಗಿದೆ. ಟ್ವಿಟ್ಟಿಗರು ವಿದ್ಯಾರ್ಥಿಯನ್ನು ಲೆಜೆಂಡ್, ಜಾಣ, ನಿನಗೊಂದು ನಮಸ್ಕಾರ ಎಂದು ಬರೆದು ಕಮೆಂಟ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *